Asianet Suvarna News Asianet Suvarna News

ಗಂಟೆ ಸದ್ದಿಗೆ ಆಕ್ಷೇಪಿಸಿ ಬ್ರಾಹ್ಮಣನಿಗೆ ಮುಸ್ಲಿಮರ ಧರ್ಮದೇಟು! ಆದರೆ ವಾಸ್ತವವೇ ಬೇರೆಯಿತ್ತು

ಆದರೆ, ಬ್ರಾಹ್ಮಣರ ಮೇಲೆ ಮುಸ್ಲಿಮರು ಹಲ್ಲೆ ನಡೆಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಈ ಕುರಿತು ಟ್ವೀಟರ್‌ನಲ್ಲಿ ಸ್ಪಷ್ಟನೆ ನೀಡಿರುವ ಕೋಲ್ಕತಾ ಪೊಲೀಸರು, ‘ಹಾನಿಕಾರಕ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲಾಗಿದೆ. ಇದನ್ನು ನಂಬಲು ಹೋಗಬೇಡಿ’ ಎಂದಿದ್ದಾರೆ.

KP Viral Check Column

ಪಶ್ಚಿಮ ಬಂಗಾಳದಲ್ಲಿ ಹಿಂದು ಬ್ರಾಹ್ಮಣರನ್ನು ಗುರಿಯಾಗಿಸಿ ಮುಸ್ಲಿಮರು ದೌರ್ಜನ್ಯ ಎಸಗುತ್ತಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ಸಾಬೀತುಪಡಿಸುವ ವಿಡಿಯೋವೊಂದು ಅಂತರ್ಜಾಲದಲ್ಲಿ ಓಡಾಡುತ್ತಿದೆ. ಪೂಜೆಯ ವೇಳೆ ಗಂಟೆಯ ಶಬ್ದವನ್ನು ಸಹಿಸಲಾಗದೇ ಸ್ಥಳೀಯ ಮುಸ್ಲಿಮರು ಬ್ರಾಹ್ಮಣನ ಮೇಲೆ ಆತನ ಮಗಳ ಎದುರಿನಲ್ಲೇ ಹಲ್ಲೆ ನಡೆಸಿದ್ದಾರೆ.

ಪಶ್ಚಿಮ ಬಂಗಾಳದ ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶದಲ್ಲಿ ಈ ರೀತಿಯ ಘಟನೆಗಳು ಸಾಮಾನ್ಯವಾಗಿವೆ. ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಯಾವ ಮಾಧ್ಯಮವೂ ವರದಿ ಮಾಡುತ್ತಿಲ್ಲ. ಆದರೆ, ರೋಹಿಂಗ್ಯಾ ಮುಸ್ಲಿಮರಿಗೆ ಆಶ್ರಯ ನೀಡಬೇಕು ಎಂದು ಮಾನವ ಹಕ್ಕು ಹೋರಾಟಗಾರರು ಆಗ್ರಹಿಸುತ್ತಿದ್ದಾರೆ ಎಂದು ಫೇಸ್‌ಬುಕ್, ವಾಟ್ಸಪ್, ಟ್ವೀಟರ್‌ಗಳಲ್ಲಿ ವಿಡಿಯೋ ಮತ್ತು ಸಂದೇಶಗಳನ್ನು ಹರಿಬಿಡಲಾಗುತ್ತಿದೆ. ಅಲ್ಲದೇ ಹಿಂದುಗಳ ಮೇಲೆ ನಡೆಯುತ್ತಿರುವ ಹಲ್ಲೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿರುವಂತೆ ಮುಸ್ಲಿಮರು ಬ್ರಾಹ್ಮಣರ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಇದಲ್ಲ.

ಸ್ಥಳೀಯ ಅರ್ಚಕನೊಬ್ಬ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಎಂಬ ಕಾರಣಕ್ಕೆ ಯುವತಿಯ ಕುಟುಂಬದ ಸದಸ್ಯರು ಆತನಿಗೆ ಥಳಿಸಿರುವ ವಿಡಿಯೋ ಇದಾಗಿದೆ. ಈ ಪ್ರಕರಣ ಒಂದು ತಿಂಗಳ ಹಿಂದೆಯೇ ನಡೆದಿದ್ದು, ಪೂಜಾರಿಯ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಆ.31ರಂದು ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಆದರೆ, ಬ್ರಾಹ್ಮಣರ ಮೇಲೆ ಮುಸ್ಲಿಮರು ಹಲ್ಲೆ ನಡೆಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಈ ಕುರಿತು ಟ್ವೀಟರ್‌ನಲ್ಲಿ ಸ್ಪಷ್ಟನೆ ನೀಡಿರುವ ಕೋಲ್ಕತಾ ಪೊಲೀಸರು, ‘ಹಾನಿಕಾರಕ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲಾಗಿದೆ. ಇದನ್ನು ನಂಬಲು ಹೋಗಬೇಡಿ’ ಎಂದಿದ್ದಾರೆ.

(ಕನ್ನಡಪ್ರಭ ವೈರಲ್ ಚೆಕ್ ಅಂಕಣ)

Follow Us:
Download App:
  • android
  • ios