Asianet Suvarna News Asianet Suvarna News

ಶ್ರೀರಾಮ ‘ಜನ ನಾಯಕ’ನಾಗಿದ್ದು ಹೇಗೆ?

ಶ್ರೀರಾಮನು ಪ್ರಜಾಪ್ರಭುತ್ವ ವಿಧಾನ ದಿಂದ ಆಯ್ಕೆಯಾದ ಜನಪ್ರಿಯ ನಾಯಕನೆಂದು ಹೇಳಿರಬಹುದು. ಸಪ್ತಪ್ರಕೃತಿಗಳು ನಿನ್ನ ನಾಯಕತ್ವವನ್ನು ಅವಿರೋಧವಾಗಿ ಸಮ್ಮತಿಸುವುದರಿಂದ ತಾನು ನಿನ್ನನ್ನು ಯುವರಾಜ ಪದವಿಗೆ ಪಟ್ಟಾಭಿಷೇಕ ಮಾಡುತ್ತೇನೆಂದು ದಶರಥನು ಹೇಳಿದ್ದು ರಾಮಾಯಣದಲ್ಲಿ ಉಲ್ಲೇಖವಿದೆ.

KP Dharma jyothi column

ದಶರಥನು ವಾರ್ಧಕ್ಯದಿಂದ ಇನ್ನು ರಾಜ್ಯ ರಕ್ಷಣೆಯ ಭಾರವನ್ನು ಹೊರಲು ತಾನು ಸಮರ್ಥನಲ್ಲವೆಂದು ಭಾವಿಸಿ ಪ್ರಜಾಭಿತಮತನಾದ, ಗುಣವಂತನಾದ ತನ್ನ ಜ್ಯೇಷ್ಠ ಪುತ್ರನಾದ ಶ್ರೀರಾಮನನ್ನು ಯುವರಾಜ ಪದವಿಯಲ್ಲಿ ಅಭಿಷೇಕ ಮಾಡಿ ಆತನಿಗೆ ಒಪ್ಪಿಸಲು ನಿರ್ಧರಿಸಿದನು. ಆದರೆ ಆತ ಈ ತನ್ನ ಮನೋರಥದ ಒತ್ತಡಕ್ಕೆ ಮಣಿದು ತಕ್ಷಣ ಪುತ್ರ ವ್ಯಾಮೋಹದಿಂದ ರಾಮನನ್ನು ಯುವ ರಾಜ ಪದವಿಯಲ್ಲಿ ಕೂಡಿಸಲಿಲ್ಲ. ಪ್ರಜಾಭಿಪ್ರಾಯಕ್ಕೆ ಮನ್ನಣೆ ನೀಡಿ ಅದರಂತೆ ನಡೆದುಕೊಳ್ಳಬೇಕೆಂದು ನಿರ್ಧರಿಸಿದನು.

ತನ್ನ ವಶದಲ್ಲಿರುವ ಮಂಡಲಾಧಿಪತಿಗಳು, ಮಂತ್ರಾ ಲೋಚನೆಯಲ್ಲಿ ನಿಷ್ಣಾತರಾಗಿ ರಾಜನಿಗೆ ಸಲಹೆ ಕೊಡುವ ಮಂತ್ರಿಗಳು, ಕಾರ್ಯಾಂಗ ಸಚಿವರು, ದೂತರು, ಅಂಗರಕ್ಷಕರು, ಪುರೋಹಿತರು, ಪುರಜನ ಪ್ರತಿನಿಧಿಗಳು ಹಾಗೂ ದೇಶದ ಪ್ರತಿನಿಧಿಗಳ ಅಭಿಪ್ರಾಯವನ್ನು ಸಂಗ್ರಹಿಸುತ್ತಾನೆ. ಆಗ ಇಡೀ ದೇಶದ ಪ್ರಜೆಗಳನ್ನು ಪ್ರತಿನಿಧಿಸುವ 7 ಮಂದಿಯು (ರಾಜನೀತಿಯಲ್ಲಿ ‘ಸಪ್ತಪ್ರಕೃತಿ’ಗಳು) ರಾಮನ ಪಟ್ಟಾಭಿಷೇಕವನ್ನು ಸಂತೋಷದಿಂದಲೇ ಅನುಮೋದಿಸುತ್ತಾರೆ. ಹೀಗೆ ಹಿಂದೆ ಹೇಳಿದ ಸರ್ವ ಪ್ರಜೆಗಳನ್ನು ಪ್ರತಿನಿಧಿಸುವ ಸಪ್ತಪ್ರಕೃತಿಗಳಿಗೆ ಯುವರಾಜನನ್ನು ಆಯ್ಕೆ ಮಾಡುವ ಅವಕಾಶವನ್ನು ಕಲ್ಪಿಸಿ ತನ್ನ ಅರಸೊತ್ತಿಗೆಯ ಆಯ್ಕೆಯನ್ನು ಬದಿಗಿಟ್ಟು ಪ್ರಜಾಭಿಪ್ರಾಯಕ್ಕೆ ಮನ್ನಣೆ ನೀಡಿದನು.

ಪ್ರಜಾಪ್ರಭುತ್ವವನ್ನು ಗೌರವಿಸುತ್ತಾನೆ. ಆದುದರಿಂದಲೇ ಸರ್ವ ಪ್ರಜಾಭಿಮತದಿಂದ ಆದ ಈ ನಾಯಕತ್ವದ ಆಯ್ಕೆಯನ್ನು ಗಮನಿಸಿದಾಗ ಶ್ರೀರಾಮನು ಪ್ರಜಾಪ್ರಭುತ್ವ ವಿಧಾನ ದಿಂದ ಆಯ್ಕೆಯಾದ ‘ಜನಪ್ರಿಯ ನಾಯಕ’ನೆಂದು ಹೇಳಿರಬಹುದು. ಸಪ್ತಪ್ರಕೃತಿಗಳು ನಿನ್ನ ನಾಯಕತ್ವವನ್ನು ಅವಿರೋಧವಾಗಿ ಸಮ್ಮತಿಸುವುದರಿಂದ ತಾನು ನಿನ್ನನ್ನು ಯುವರಾಜ ಪದವಿಗೆ ಪಟ್ಟಾಭಿಷೇಕ ಮಾಡುತ್ತೇನೆಂದು ದಶರಥನು ಹೇಳಿದ್ದು ರಾಮಾಯಣದಲ್ಲಿ ಉಲ್ಲೇಖವಿದೆ. ಆದ್ಯ ಪ್ರಕೃತ ಯಸ್ಸರ್ವಾಸ್ತ್ಯಾಮಿಚ್ಛಂತಿ ನರಾಧಿಪಮ್‌| ಆತಸ್ತ್ವಾಂ ಯುವರಾಜನಮಭಿಷೇಕ್ಷ್ಯಾಮಿ ಪುತ್ರಕ॥ ಪ್ರಜಾ ಪ್ರಭುತ್ವದ ಈ ಕಾಲದಲ್ಲೂ ತನ್ನ ವಂಶೋದ್ಧವರಿಗೆ ವ್ಯಾಮೋಹದಿಂದ ಮಂತ್ರ ಪದವಿಯಲ್ಲಿ ಕೂಡಿಸಿ ಅರ ಸೊತ್ತಿಗೆಯ ಅಧಿಕಾರವನ್ನು ಚಲಾಯಿಸುವ ಕೆಲವು ರಾಜಕಾರಣಗಳಿಗೆ ಅರಸೊತ್ತಿಗೆಯ ವೈಭವ ಕಾಲದಲ್ಲೂ ದಶರಥನ ಪ್ರಜಾಸತ್ತಾತ್ಮಕ ನಡವಳಿಗೆ ಅನು ಕರಣೀಯವಾಗಿದೆ ಎನ್ನಬಹುದು.

- ಶ್ರೀವಿದ್ಯೇಶತೀರ್ಥ ಶ್ರೀಪಾದರು, ಭಂಡಾರಕೇರಿ ಮಠ, ಉಡುಪಿ

Follow Us:
Download App:
  • android
  • ios