Asianet Suvarna News Asianet Suvarna News

ಕನ್ನಡಿಗ ವಿಜ್ಞಾನಿಯಿಂದ ವಿಶಿಷ್ಟ ಪ್ರಯೋಗ; ಕ್ಯಾನ್ಸರ್'ಗೆ ಕಂಡು ಹಿಡಿದಿದ್ದಾರೆ ದಿವ್ಯೌಷಧ

ಕ್ಯಾನ್ಸರ್​ ಈ ಹೆಸರು ಕೇಳಿದರೆ ಬೆಚ್ಚಿಬೀಳುತ್ತೇವೆ. ಸಾವನ್ನೇ ಜೊತೆಗೆ ಹೊತ್ತುಬರುವ ಈ ಕಾಯಿಲೆಯಿಂದ ಬಳಲುತ್ತಿರುವವರ ನೋವು ಸಂಕಟಗಳು ಎಲ್ಲರನ್ನೂ ಆತಂಕಕ್ಕೆ ಈಡು ಮಾಡುತ್ತಿವೆ. ಆದರೆ ಅಂತವರ ಪಾಲಿಗೆ ಹೊಸ ಆಶಾ ಕಿರಣವೊಂದು ಮೂಡಿದೆ.  

Kannadiga Scientist Found a Medicine to Cancer

ಬೆಂಗಳೂರು (ಸೆ.09): ಕ್ಯಾನ್ಸರ್​ ಈ ಹೆಸರು ಕೇಳಿದರೆ ಬೆಚ್ಚಿಬೀಳುತ್ತೇವೆ. ಸಾವನ್ನೇ ಜೊತೆಗೆ ಹೊತ್ತುಬರುವ ಈ ಕಾಯಿಲೆಯಿಂದ ಬಳಲುತ್ತಿರುವವರ ನೋವು ಸಂಕಟಗಳು ಎಲ್ಲರನ್ನೂ ಆತಂಕಕ್ಕೆ ಈಡು ಮಾಡುತ್ತಿವೆ. ಆದರೆ ಅಂತವರ ಪಾಲಿಗೆ ಹೊಸ ಆಶಾ ಕಿರಣವೊಂದು ಮೂಡಿದೆ.  

ಮುಂದಿನ ಜನಾಂಗವನ್ನು ಈ ಮಾರಕ ಕಾಯಿಲೆಯಿಂದ ರಕ್ಷಿಸುವ ದಿವ್ಯೌಷಧ ಇದೀಗ ನಮ್ಮ ಮುಂದಿದೆ. ಕ್ಯಾನ್ಸರ್​ ಎನ್ನುವ ಹೆಸರನ್ನೇ ಭೂಮಿಯ ಮೇಲಿನಿಂದ ನಿರ್ಮೂಲನಗೊಳಿಸುವ ಕನಸು ವೈದ್ಯಕೀಯ ವಿಜ್ಞಾನಿಗಳದ್ದು. ವೈದ್ಯಕೀಯ ವಿಜ್ಞಾನದ ಅಂಥದ್ದೊಂದು ಪ್ರಯತ್ನವನ್ನು ಭಾರತಕ್ಕೆ ಹೊತ್ತು ತಂದಿದ್ದಾರೆ ನಮ್ಮ ಕನ್ನಡಿಗ ಪ್ರೊ. ಎ.ಎ ಶೆಟ್ಟಿ. 33 ವರ್ಷದ ಹಿಂದೆ ಭಾರತದಿಂದ ಇಂಗ್ಲೆಂಡಿಗೆ ಹೋದ ಪ್ರೊ. ಎ.ಎ ಶೆಟ್ಟಿಯವರು ಇತ್ತೀಚೆಗೆ ಪ್ರತಿಷ್ಠಿತ ಹಂಟೇರಿಯನ್​​ ಮೆಡಲ್​ ಪಡೆದವರು. ಕಳೆದ 200 ವರ್ಷಗಳಲ್ಲಿ ಈ ಮೆಡಲ್​ ಪಡೆದ ನಾಲ್ಕನೇ ಭಾರತೀಯ ಇವರು. ಮೂಲತಃ ಆರ್ಥೋಪೆಡಿಕ್​​ ವೈದ್ಯರಾದ ಇವರು ಇದೀಗ ಸ್ಟೆಮ್​ಸೆಲ್​​ ಬಗ್ಗೆ ವಿಷೇಷ ಆಸಕ್ತಿ ವಹಿಸಿದ್ದು, ಅದರ ತಂತ್ರಜ್ಞಾನವನ್ನು ಭಾರತದಲ್ಲಿ ಪಸರಿಸಬೇಕು ಎನ್ನುವುದು ಇವರ ಬಯಕೆ. ಸ್ಟೆಮ್​ಸೆಲ್​​ ತಂತ್ರಜ್ಞಾನದ ಮೂಲಕ  ಕ್ಯಾನ್ಸರ್​​, ರಕ್ತವನ್ನೇ ಇಂಗಿಸುವ ಮಾರಕ ಕಾಯಿಲೆ ತಲೆಸೇಮಿಯಾದಂಥ ಮಾರಕ ಕಾಯಿಲೆ ಬಾರದಂತೆ ತಡೆಯಬಹುದು.

 

 

 

Follow Us:
Download App:
  • android
  • ios