Asianet Suvarna News Asianet Suvarna News

ಫಸ್ಟ್ ನೈಟ್ ಎಂಬ ಸುಮಧುರ ನೆನಪು ಮಧುರವಾಗಲಿ...

ಜೀವನದಲ್ಲಿ ಒಂದು ಗಂಡು ಮತ್ತೊಂದು ಹೆಣ್ಣು ಮದುವೆ ಎಂಬ ಬಾಂಧವ್ಯದ ಬಂಧನಕ್ಕೊಳಗಾಗಿ, ಮೊದಲ ರಾತ್ರಿ ಎಂಬ ಮಹೂರ್ತದ ಬಗ್ಗೆ ಸಾಕಷ್ಟು ಕನಸು ಕಂಡಿರುತ್ತಾರೆ. ಆದರೆ, ಆ ರಾತ್ರಿ ಅಂದು ಕೊಂಡಿದ್ದು ಎಲ್ಲವೂ ಆಗದಿರಬಹುದು. ನೆನಪು ಮಾತ್ರ ಸುಮಧುರವಾಗರಲು ಹೀಗೆ ಮಾಡಿ..

How to make first night together an unforgettable one
Author
Bangalore, First Published Apr 16, 2019, 4:14 PM IST

ಮೊದಲ ರಾತ್ರಿ ಬಗ್ಗೆ ನೆನೆಯುತ್ತ ನವ ವಿವಾಹಿತ ಜೋಡಿ ರೋಮಾಂಚಿತವಾಗುತ್ತೆ. ಇನ್ನೂ ಕೆಲವರಿಗೊ ಈ ರಾತ್ರಿ ಬಗ್ಗೆ ಎಲ್ಲಿಲ್ಲದ ಭಯ. ನಿಮ್ಮದು ಅರೇಂಜ್ಡ್ ಅಥವಾ ಲವ್ ಮ್ಯಾರೇಜೇ ಆಗಲಿ, ಎಲ್ಲರಿಗೂ ಫಸ್ಟ್ ನೈಟ್ ಎಂದರೆ ಏನೋ ವಿಶೇಷ.  ಇಬ್ಬರ ಮನಸ್ಸಿನಲ್ಲಿಯೂ ಈ ಸಮಯದಲ್ಲಿ ಸಂಶಯ ಮೂಡುತ್ತದೆ. ಈ ಮೊದಲ ರಾತ್ರಿಯನ್ನು ಹೇಗೆ ನೆನಪಿನಲ್ಲಿ ಉಳಿಯುವಂತೆ ಮಾಡಬಹುದು. ಇಲ್ಲಿದೆ ಫಸ್ಟ್ ನೈಟನ್ನು ಸದಾ ಕಾಲ ನೆನಪಿನಲ್ಲಿರುವಂತೆ ಮಾಡಲು ಟಿಪ್ಸ್...

How to make first night together an unforgettable one

  • ಫಸ್ಟ್ ನೈಟ್ ಮಾಡಲು ವಾತಾವರಣ ಸರಿಯಾಗಿರುವಂತೆ ನೋಡಿಕೊಳ್ಳಿ. ತುಂಬಾ ಜನರು ಇರುವ ಕಡೆ ರೂಮ್ ಇರದಂತೆ ನೋಡಿಕೊಳ್ಳಿ. ಯಾಕೆಂದರೆ ಏಕಾಂತ ಅಗತ್ಯವಾಗಿ ಬೇಕು. 
  • ನಿಮ್ಮ ರೂಮ್ ಅನ್ನು ವಿಶೇಷ ರೀತಿಯಲ್ಲಿ ಡೆಕೋರೇಟ್ ಮಾಡಿ. ಫ್ರೆಷ್ ಕಲರ್, ಹೂವು, ಅರೋಮಾ ಕ್ಯಾಂಡಲ್, ಲೈಟ್ ಮ್ಯೂಸಿಕ್ ವಿಶೇಷವಾದ ಪರಿಮಳ ರೂಮಿನಲ್ಲಿ  ಹರಡಿದ್ದರೆ ಆ ರಾತ್ರಿ ಮಧುರವೆನಿಸುತ್ತದೆ.
  • ಸೆಕ್ಸ್ ಮಾಡಲು ತುಂಬಾ ಅರ್ಜೆಂಟ್ ಮಾಡಬೇಡಿ. ಮೊದಲಿಗೆ ಮಾತನಾಡಲು ಆರಂಭಿಸಿ. ದೇಹ ಒಂದಾಗೋ ಮೊದಲು ಮನಸ್ಸು ಮಿಡಿಯುವಂತಾಗಲಿ.
  • ಮೊದಲ ರಾತ್ರಿ ದಿನ ಅವರಿಗೆ ಸರ್‌ಪ್ರೈಸ್ ನೀಡಲು ಯತ್ನಿಸಿ, ಅದಕ್ಕಾಗಿ ಏನಾದರೂ ಗಿಫ್ಟ್ ನೀಡಿ. ಇದರಿಂದ ಆ ರಾತ್ರಿಯ ಸಂತೋಷ ಸದಾ ಕಾಲ ನೆನಪಲ್ಲಿ ಉಳಿಯುತ್ತದೆ. 
  • ಬೇಡದ ವಿಷಯಗಳನ್ನು ಮಾತನಾಡಬೇಡಿ. ಜೀವನದಲ್ಲಿ ಸದಾ ನೆನಪಿನಲ್ಲಿರುವಂತ ವಿಷಯಗಳನ್ನು ಒಬ್ಬರಿಗೊಬ್ಬರು ಶೇರ್ ಮಾಡಿಕೊಳ್ಳಿ. 
Follow Us:
Download App:
  • android
  • ios