Asianet Suvarna News Asianet Suvarna News

ಹೈಟಾಗಿ ಕಾಣಿಸಬೇಕೆಂದರೆ ಹಿಂಗಿರಲಿ ನಿಮ್ ಡ್ರೆಸ್!

ಉದ್ದ-ಗಿಡ್ಡವಾಗಿರುವುದು, ದಪ್ಪ, ಸ್ಲಿಮ್ ಆಗಿರುವುದು ನಮ್ಮ ಕೈಯಲ್ಲಿ ಇರೋಲ್ಲ. ಬದಲಾಗಿ ನಮ್ಮ ಉಡುಗೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಂಡರೆ ನಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಅಷ್ಟಕ್ಕೂ ಹೈಟ್ ಆಗಿ ಕಾಣಬೇಕೆಂದರೆ ಏನು ಮಾಡಬೇಕು?

How to look taller without high heels
Author
Bangalore, First Published Apr 20, 2019, 4:27 PM IST

ಪ್ರತಿಯೊಬ್ಬರಿಗೂ ತಾವು ಎಲ್ಲರ ಮಧ್ಯೆ ಚೆನ್ನಾಗಿ ಕಾಣಿಸಬೇಕು ಎಂಬ ಅಸೆ ಇದ್ದೆ ಇರುತ್ತದೆ. ಅದಕ್ಕಾಗಿ ತಮ್ಮ ದೈಹಿಕ ಸೌಂದರ್ಯವೂ ಚೆನ್ನಾಗಿರಬೇಕು. ಅದರಲ್ಲಿಯೂ ಹೈಟ್ ಆಗಿ ಕಾಣಬೇಕೆಂಬುವುದು ಎಲ್ಲರ ಆಶಯ. ಆದ್ರೆ ಕೆಲವರು ಹೆಚ್ಚು ಉದ್ದವಾಗಿರೋಲ್ಲ. ಅವರು ಚಿಂತೆ ಮಾಡಬೇಕಾಗಿಲ್ಲ. ಯಾಕೆಂದರೆ ಕೆಲವೊಂದು ಡ್ರೆಸ್ಸಿಂಗ್ ಟ್ರಿಕ್ಸ್ ಗೊತ್ತಿದ್ದರೆ ನೀವು ಕೂಡ ಹೈಟ್ ಆಗಿ ಕಾಣಬಹುದು. 

ಸ್ಟೈಲಿಶ್ ಲುಕ್ ಗಾಗಿ ಇಂಡೋ ವೆಸ್ಟರ್ನ್ ಸ್ಟೈಲ್ !

  • ಇತ್ತೀಚಿಗೆ ಸ್ಟ್ರಿಪ್ ಡ್ರೆಸ್ ಫ್ಯಾಷನ್ ಆಗಿದೆ. ನೀವೂ ಉದ್ದ ಗೆರೆಗಳುಳ್ಳ ಡ್ರೆಸ್ ಪ್ಯಾಂಟ್ ಧರಿಸಿದರೆ ಹೈಟ್ ಹೆಚ್ಚಿದಂತೆ ಕಾಣುತ್ತದೆ. 
  • ಹೈ ವೆಸ್ಟ್ ಪ್ಯಾಂಟ್ ಕಾಲು ಉದ್ದವಾಗಿರುವಂತೆ ಕಾಣುತ್ತದೆ. ಆದುದರಿಂದ ನೀವು ಹೈ ವೆಸ್ಟ್ ಪ್ಯಾಂಟ್ ಜೊತೆಗೆ ಕ್ರಾಪ್ ಟಾಪ್ ಧರಿಸಿದರೆ ನಿಮ್ಮನ್ನ ಕುಳ್ಳಿ ಎಂದು ಯಾರೂ ಹೇಳಲ್ಲ. 
  • ಮೇಲಿಂದ ಕೆಳಗಿವವರೆಗೆ ಒಂದೇ ಬಣ್ಣದ ಡ್ರೆಸ್ ಧರಿಸಿದರೆ ಉದ್ದವಾಗಿ ಕಾಣುತ್ತೀರಿ. ಬೇಕಿದ್ದರೆ ಟ್ರೈ ಮಾಡಿ.
  • ದೊಡ್ಡ ದೊಡ್ಡ ಪ್ರಿಂಟ್ ಉಳ್ಳ ಡ್ರೆಸ್ ಧರಿಸಿದರೆ ಶಾರ್ಟ್ ಆಗಿ ಕಾಣುವಿರಿ. ಅದಕ್ಕಾಗಿ ಆದಷ್ಟು ಸಣ್ಣ ಪ್ರಿಂಟ್‌ಗಳನ್ನ ಟ್ರೈ ಮಾಡಿ. 

ಮಾಡೆಲ್‌ಗಳ ಸೂಪರ್ ಮಾಡೆಲ್ 97ರ ಈ ಅಜ್ಜಿ!

ಸೀರೆ ಉಡೋರಿಗೆ ಟಿಪ್ಸ್ : 

  • ದೊಡ್ಡದಾದ ಬಾರ್ಡರ್ ಉಳ್ಳ ಸೀರೆ ಉಡಬೇಡಿ.
  • ಬ್ಲ್ಯಾಕ್ ಸೀರೆ ನಿಮ್ಮನ್ನು ಆಕರ್ಷಕವಾಗಿ ಕಾಣಿಸುವುದಲ್ಲದೇ ಉದ್ದವಾಗಿ ಕಾಣುವಂತೆ ಮಾಡುತ್ತದೆ. 
  • ಲೈಟ್ ವೈಟ್ ಸೀರೆ ಆಯ್ಕೆ ಮಾಡಿಕೊಂಡರೆ ಉತ್ತಮ. 

ಪುರುಷರು ಹೈಟ್ ಆಗಿ ಕಾಣಲು : 

  • ಶಾರ್ಟ್ ಹೈಟ್ ಯಾವುದೇ ಸಮಸ್ಯೆ ಅಲ್ಲ ಅಂತ ತೋರಿಸಲು ಮೊದಲಿಗೆ ನೀವು ಕಾಂನ್ಫಿಡೆಂಟ್ ಆಗಿರಬೇಕು. 
  • ಡ್ರೆಸ್, ಮಾತು, ನಡೆ, ನುಡಿ ಸರಿಯಾಗಿದ್ದರೆ ನಿಮ್ಮ ಹೈಟ್ ಕಡೆಗೆ ಅಷ್ಟೊಂದು ಗಮನ ಹರಿಯೋದಿಲ್ಲ. 
  • ಉದ್ದವಾಗಿ ಕಾಣಲು ಹೇರ್‌ಸ್ಟೈಲ್‌ ಬದಲಾಯಿಸಿ.  ಕೂದಲ ಮೇಲಿನ ಭಾಗ ಸ್ವಲ್ಪ ಎತ್ತರವಾಗಿ ಕತ್ತಿರಿಸಿದರೆ, ಹೈಟ್‌ನಲ್ಲಿ ಬದಲಾವಣೆ ಕಾಣಬಹುದು.
  • ನಿಮ್ಮ ಕಾಲು ನೀವು ಹೈಟ್‌ ಆಗಿ ಕಾಣಲು ಸಹಕರಿಸುತ್ತದೆ. ಆದುದರಿಂದ ಸರಿಯಾದ ಉದ್ದ ಹಾಗೂ ಟೈಟ್‌ ಹೊಂದಿರುವ ಪ್ಯಾಂಟ್‌ ಧರಿಸಿ. ನೀವು ಸ್ಕಿನ್ನಿ ಜೀನ್ಸ್‌ ಧರಿಸಿದರೆ ನಿಮ್ಮ ಹೈಟ್‌ ಇನ್ನಷ್ಟು ಹೆಚ್ಚಾಗಿದ್ದಂತೆ ಕಾಣಿಸುತ್ತದೆ
  • ಹೈ ಹೀಲ್ಡ್‌ ಶೂ ಅಥವಾ ಸ್ಯಾಂಡಲ್‌ ಧರಿಸುವ ಮೂಲಕ ಹೈಟ್‌ ಹೆಚ್ಚಿಸಿ. ಆದರೆ ಯಾವತ್ತೂ ಫ್ಲ್ಯಾಟ್‌ ಚಪ್ಪಲ್‌ ಶೂ ತೆಗೆಯಬೇಡಿ. 
Follow Us:
Download App:
  • android
  • ios