Asianet Suvarna News Asianet Suvarna News

ಜ್ಞಾಪಕ ಹೆಚ್ಚಿಸೋ ಮನೆಮದ್ದುಗಳಿವು....

ಬಜೆ ಸಹಿತ ಹಲವು ಆಯುರ್ವೇದ ಔಷಧಿಗಳು ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಿಸಲು ಸಹಕರಿಸುತ್ತದೆ. ಸಾಧ್ಯವಾದಷ್ಟೂ ಮನೆಯಲ್ಲಿಯೇ, ರಾಸಾಯನಿಕಗಳನ್ನು ಬಳಸದೇ, ಬೆಳೆಸಿದ ಇವುಗಳನ್ನು ಬಳಸಿದರೆ ಉತ್ತಮ ಪರಿಣಾಮ ಬೀರುವುದರಲ್ಲಿ ಅನುಮಾನವೇ ಇಲ್ಲ.

Home remedies to increase memory power among kids

ಮಕ್ಕಳು ಪುಟ್ಟೋರಾಗಿರುವ ಸುತ್ಕಾರ ತೇಯ್ದು ಹಾಕ್ತಾರೆ. ಈ ಔಷಧಿಯಲ್ಲಿ ಅಶ್ವಗಂಧ, ಬ್ರಾಹ್ಮೀ, ಗಂಧ, ಚಂದನ, ಲವಂಗ, ಒಣ ಶುಂಠಿ, ಕರಿ ಮೆಣಸು..ಹೀಗೆ ಅನೇಕ ಆಯುರ್ವೇದ ಔಷಧಿಗಳನ್ನು ತೇಯ್ದು ಹಾಕುವ ಪದ್ಧತಿಯಿದ್ದು, ಒಂದೊಂದಲ್ಲಿ ಒಂದೊಂದು ವಿಶೇಷವಿದೆ. ಇದರಿಂದ ಮಗು ಆರೋಗ್ಯವಾಗಿರುವುದರಲ್ಲದೇ, ಭವಿಷ್ಯದ ಆರೋಗ್ಯಕ್ಕೂ ಸಹಕಾರಿ ಎಂಬ ನಂಬಿಕೆ ಇದೆ.

ಬಜೆ ಸಹಿತ ಹಲವು ಆಯುರ್ವೇದ ಔಷಧಿಗಳು ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಿಸಲು ಸಹಕರಿಸುತ್ತದೆ. ಸಾಧ್ಯವಾದಷ್ಟೂ ಮನೆಯಲ್ಲಿಯೇ, ರಾಸಾಯನಿಕಗಳನ್ನು ಬಳಸದೇ, ಬೆಳೆಸಿದ ಇವುಗಳನ್ನು ಬಳಸಿದರೆ ಉತ್ತಮ ಪರಿಣಾಮ ಬೀರುವುದರಲ್ಲಿ ಅನುಮಾನವೇ ಇಲ್ಲ.

- ಒಂದೋಲಗವನ್ನು ಒಣಗಿಸಿ, ಹಾಲಿನೊಂದಿಗೆ ಸೇವಿಸಿದರೆ ಬುದ್ಧಿಶಕ್ತಿ ಹೆಚ್ಚುತ್ತದೆ.

- ಸಾಧ್ಯವಾದಷ್ಟು ದೇಸೀ ತುಪ್ಪವನ್ನು ಬಳಸಿ. ಇದರಿಂದ ದೈಹಿಕ ಆರೋಗ್ಯದ ಜತೆಗೆ, ಜ್ಞಾಪಕ ಶಕ್ತಿಯೂ ವೃದ್ಧಿಸುತ್ತದೆ.

- ಮೆದುಳಿನ ನರಗಳು ಬಲವಾಗಲು ಬ್ರಾಹ್ಮೀ, ಶಂಖಪುಷ್ಪ, ಬಾದಾಮಿ, ಅಶ್ವಗಂಧಗಳನ್ನು ಆಗಾಗ ವಿವಿಧ ರೂಪಗಳಲ್ಲಿ ಬಳಸುತ್ತಿರಬೇಕು. 

-ಬಾದಾಮಿ, ಕಲ್ಲು ಸಕ್ಕರೆ ಮತ್ತು ಹಾಲನ್ನು ಹೆಚ್ಚೆಚ್ಚು ಬಳಸಿದರೆ ಒಳಿತು. ಪಾಯಸದ ರೂಪದಲ್ಲಾದರೂ ಸರಿ ಅಥವಾ ಇತರೆ ಸಿಹಿ ರೂಪದಲ್ಲಾದರೂ ಬಳಸಬಹುದು.

-ಬೂದುಗುಂಬಳ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಕಾಶಿ ಹಲ್ವಾ ಎಂದು ಕರೆಯುವ ಇದರ ಹಲ್ವಾವನ್ನು ಒಳ್ಳೆ ತುಪ್ಪದಲ್ಲಿ ತಯಾರಿಸಿ, ತಿನ್ನುತ್ತಿದ್ದರೆ, ಮಕ್ಕಳ ಬುದ್ಧಿಮತ್ತೆ ಚುರುಕಾಗುತ್ತದೆ.

-ಪ್ರತಿದಿನ ತಲೆ ಮತ್ತು ಪಾದಗಳನ್ನು ಎಳ್ಳೆಣ್ಣೆಯಿಂದ ಮಸಾಜ್‌ ಮಾಡಿದರೆ, ದೇಹಕ್ಕೂ ಹಿತ, ಬುದ್ಧಿಗೂ ಬರುತ್ತೆ ಶಕ್ತಿ. 

-ರಾತ್ರಿ ನೀರಲ್ಲಿ ನೆನೆಸಿಟ್ಟ ಬಾದಾಮಿಯನ್ನು ಬೆಳಗ್ಗೆ ಸೇವಿಸಬೇಕು. 

-ನಾವು ದೈನಂದಿನ ಜೀವನದಲ್ಲಿ ಬಜೆಯನ್ನು ಬಳಸುವುದು ಕಡಿಮೆ. ಇದನ್ನು ತೇಯ್ದು ಹಾಲಿಗೆ ಹಾಕಿ ಮಕ್ಕಳಿಗೆ ಕೊಟ್ಟರೆ ಉತ್ತಮ ಪರಿಣಾಮ ಬೀರಬಲ್ಲದು.
 

Follow Us:
Download App:
  • android
  • ios