Asianet Suvarna News Asianet Suvarna News

ಚೂರು ಉದ್ದ ಇರ್ಬೇಕಿತ್ತು ಅನ್ನೋ ಆಸೆನಾ? ಹಾಗಾದ್ರೆ ಹೀಗ್ ಮಾಡಿ

ಎಲ್ಲ ಕುಳ್ಳಿಯರಿಗೂ ನಾನಿನ್ನೂ ಉದ್ದವಿರಬೇಕಿತ್ತು ಎನಿಸದಿರದು. ಕಾಲೇಜಿನ ಕಾರಿಡಾರ್‌ನಲ್ಲಿ ಓಡಾಡುವಾಗೆಲ್ಲ "ಕೊಂಪ್ಲಾನ್ ಕೊಡೀ ಮಗೂಗೆ'' ಎಂಬ ಕಾಮೆಂಟ್ ತೂರಿಬರೋದು ಅಭ್ಯಾಸವಾಗಿಬಿಟ್ಟಿರುತ್ತದೆ. ಆಗೆಲ್ಲ ನನಗೆ ಸೈಕಲ್ ಹೊಡೆಸಿಲ್ಲವೇಕೆ, ಕೊಂಪ್ಲಾನ್ ಕುಡಿಸಿಲ್ಲವೇಕೆ ಎಂದು ಅಪ್ಪಅಮ್ಮನನ್ನು ದಬಾಯಿಸಿ ಕೇಳಬೇಕಿನಿಸುತ್ತದೆ. ಆದರೆ, ಕಾಲ ಮೀರಿದ ಮೇಲೆ ಪ್ರಶ್ನಿಸಿ ಏನು ಪ್ರಯೋಜನ? ಈಗ ನೀವು ಯೋಚಿಸಬೇಕಿರುವುದು ಉದ್ದಗೆ ಕಾಣುವುದು ಹೇಗೆಂದು...

here is how to dress in order to look taller
Author
Bangalore, First Published Sep 25, 2019, 3:59 PM IST

ಗುಂಪಿನಲ್ಲಿ ಎಲ್ಲರಿಗಿಂತ ಕುಳ್ಳಗಿದ್ದು, ಕುಳ್ಳಿ, ಚೈಲ್ಡು ಎಂಬೆಲ್ಲ ಅಡ್ಡ ಹೆಸರುಗಳಿಗೆ ಒಗ್ಗಿ ಹೋಗಿದ್ದೀರಾ? ಕುರ್ತಾ ಧರಿಸಿದರೆ ನೈಟಿಯಂತೆ, ನೈಟಿ ಧರಿಸಿದರೆ ಹಿಂದೆ ಉದ್ದಕೆ ಹಾಸಿ ಬರುವ ವೆಡ್ಡಿಂಗ್ ಗೌನ್‌ನಂತೆ ಕಾಣುತ್ತದೆಯೇ? ಛೆ, ಸ್ವಲ್ಪ ಉದ್ದ ಇರಬಾರದಿತ್ತೇ ಎಂದು ದಿನಕ್ಕೆರಡು ಬಾರಿ ಅನಿಸುತ್ತಾ? ಸ್ವಲ್ಪ ದಪ್ಪವಾದರೂ ಮತ್ತಷ್ಟು ಕುಳ್ಳಕೆ ಕಾಣುವ ಭಯದಿಂದ ಬಳಲಿದ್ದೀರಾ? ಹಾಗಿದ್ದರೆ ನೀವಿದನ್ನು ಓದಲೇಬೇಕು.

ಪ್ರತಿ ಕುಳ್ಳ ಹುಡುಗಿಗೂ ದಪ್ಪ ಕಾಣುವ ಆಸೆ ಇದ್ದೇ ಇರುತ್ತದೆ. ಇದಕ್ಕಾಗಿ ನೀವು ಮಾಡಬೇಕಿರುವುದು ಒಂದಿಷ್ಟು ಬಟ್ಟೆ ಹಾಗೂ ಆ್ಯಕ್ಸೆಸರಿಗಳ ಶಾಪಿಂಗ್ ಅಷ್ಟೇ. ಏನೆಲ್ಲ ಶಾಪಿಂಗ್ ಮಾಡಬೇಕೆಂದು ಯೋಚಿಸುತ್ತಿದ್ದೀರಾ?  

ಹೆಂಗಳೆಯರ ಮನ ಸೆಳೆಯುತ್ತಿದೆ ಟ್ರೆಂಡಿ ಟ್ರೆಂಡಿ ಕುರ್ತಾಗಳು!

ಉದ್ದ ಗೆರೆಗಳ ಬಟ್ಟೆ

ಅಡ್ಡಡ್ಡ ಗೆರೆಗಳಿರುವ ಬಟ್ಟೆ ನಿಮ್ಮನ್ನು ಅಗಲವಾಗಿ ಕಾಣುವಂತೆ ಮಾಡುತ್ತದೆ. ಹಾಗೆಯೇ ಉದ್ದ ಸ್ಟ್ರೈಪ್ಸ್‌ನ ಬಟ್ಟೆ ನೀವು ಸ್ವಲ್ಪ ಉದ್ದ ಕಾಣಿಸುವಂತೆ ಮಾಡುತ್ತವೆ. ಅದರಲ್ಲೂ ತೆಳ್ಳಗಿನ ಗೆರೆಗಳು ಉತ್ತಮ. ಉದ್ದುದ್ದ ಗೆರೆಗಳಿರುವ ಶರ್ಟ್, ಟಿಶರ್ಟ್, ಜಾಕೆಟ್, ಕುರ್ತಾ ಆರಿಸಿ.

ಕಾಫ್ ಲೆಂತ್ ಬಟ್ಟೆ ಬೇಡವೇ ಬೇಡ

ಕಾಫ್ ಲೆಂತ್ ಬೂಟ್ಸ್, ಸ್ಕರ್ಟ್ಸ್, ಕ್ರಾಪ್ ಪ್ಯಾಂಟ್ಸ್ ಸೇರಿದಂತೆ ಮೊಣಕಾಲುದ್ದುದ ಬಟ್ಟೆ ಧರಿಸಿದರೆ ನೀವಿನ್ನೂ ಸ್ಕೂಲಿಗೆ ಹೋಗುವ ಪುಟಾಣಿಯಂತೆ ಕಾಣಿಸುತ್ತೀರಿ. ಅದರಲ್ಲೂ ನೀವು ಸ್ವಲ್ಪ ದಪ್ಪಗಿದ್ದರಂತೂ ಕಾಲು ಬಾತಂತೆನಿಸುತ್ತದೆ. ಹಾಗಾಗಿ, ಕಾಫ್ ಲೆಂತ್ ಬಟ್ಟೆಗಳಿಂದ ದೂರವುಳಿಯಿರಿ.

ಮಾತೃಭೂಮಿಗಾಗಿ ಫ್ಯಾಶನ್ ಲೋಕ ಬಿಟ್ಟರು: ಲೆ. ಗರಿಮಾ ಯಾದವ್ ನಮಗೆಲ್ಲಾ ಗುರು!

ಆ್ಯಂಕಲ್ ಸ್ಟ್ರ್ಯಾಪ್ಸ್‌ಗೆ ನೋ ಹೇಳಿ

ಆ್ಯಂಕ್ಲ್ ಸ್ಟ್ರ್ಯಾಪ್ಸ್ ಇರುವ ಚಪ್ಪಲಿಗಳು ಕೂಡಾ ನಿಮ್ಮನ್ನು ಮತ್ತಷ್ಟು ಕುಳ್ಳ ಕಾಣಿಸುವಂತೆ ಮಾಡುತ್ತವೆ. ಆ ಮೂಲಕ ನಿಮ್ಮ ಫ್ರೇಮ್‌ಗೆ ಧಕ್ಕೆ ತರುತ್ತವೆ. ನಿಮಗೆ ಸ್ಟ್ರ್ಯಾಪ್ ಇರೋ ಚಪ್ಪಲಿಗಳು ಇಷ್ಟವೆಂದಾದಲ್ಲಿ ಹೀಲ್ಸ್‌ಗೆ ಹಾಯ್  ಹೇಳಿ. ಹೀಗೆ ಹೀಲ್ಸ್ ಆರಿಸುವಾಗಲೂ ಮೈಬಣ್ಣದ ಹೀಲ್ಸ್ ಆದರೆ ಉತ್ತಮ. ಅವು ನಿಮ್ಮ ಕಾಲೇ ಹೆಚ್ಚು ಉದ್ದವಿರುವಂತೆ ತೋರಿಸುತ್ತವೆ. 

ದೊಡ್ಡ ಗಾತ್ರದ ಬ್ಯಾಗ್ ಬೇಡ

ದೊಡ್ಡಮ್ಮನಂಥ ಬ್ಯಾಗ್ ನಿಮಗಿಷ್ಟವಿರಬಹುದು. ಆದರೆ ಅವುಗಳ ಗಾತ್ರದೊಳಗೆ ನೀವು ಅರ್ಧ ಮುಚ್ಚಿಯೇ ಹೋಗುತ್ತೀರಿ. ಟ್ರೆಕಿಂಗ್ ಬ್ಯಾಗ್ ‌ ಹೊರತಾಗಿ ಉಳಿದ ಯಾವುದೇ ಬ್ಯಾಗ್ ಖರೀದಿಸುವುದಿದ್ದರೂ ಸ್ವಲ್ಪ ಉದ್ದಕೆ, ಕಡಿಮೆ ಅಗಲವಿರುವ ಬ್ಯಾಗ್ ಖರೀದಿಸಿ. ಪುಟ್ಟ ಪುಟ್ಟ ಹ್ಯಾಂಡ್ ಬ್ಯಾಗ್ ಅಥವಾ ಉಧ್ದ ಸ್ಟ್ರ್ಯಾಪ್‌ನ ಸ್ಲಿಂಗ್ ಬ್ಯಾಗ್ ಅಭ್ಯಾಸ ಮಾಡಿಕೊಳ್ಳಿ. 

ಪೋಲ್ಕಾ ಡಾಟ್‌ ಸ್ಟೈಲ್‌ ಬಗ್ಗೆ ಡೌಟೇ ಬೇಡ!

ಶರ್ಟ್ ರೀತಿಯ ಡ್ರೆಸ್ ನಿಮಗಲ್ಲ

ಮೂವಿಯೊಂದರಲ್ಲಿ ಹೀರೋಯಿನ್ ಶರ್ಟ್ ರೀತಿಯ ಡ್ರೆಸ್ ಹಾಕಿರುವುದನ್ನು ನೋಡಿ ಇಷ್ಟವಾದಗಿ ನೀವೂ ಕೊಂಡರೆ, ಅದು ಅವಾಂತರವಾಗಿಬಿಡುತ್ತದೆ. ಶರ್ಟ್ ರೀತಿಯ ಡ್ರೆಸ್ ಕುಳ್ಳ ದೇಹದವರು ಬಾಕ್ಸ್‌ನಂತೆ ಚೌಕ ಕಾಣಿಸುವಂತೆ ಮಾಡುತ್ತದೆ. ಹಾಗಾಗಿ, ಶೇಪ್ ಇಲ್ಲದ ಶರ್ಟ್ ಡ್ರೆಸ್‌ಗಳಿಂದ ದೂರವುಳಿಯಿರಿ.

ಡೀಪ್ ನೆಕ್‌ಲೈನ್

ಡೀಪ್ ವಿ ನೆಕ್ ಇರುವ ಬಟ್ಟೆಗಳು ನಿಮ್ಮನ್ನು ಉದ್ದ ಕಾಣಿಸುವಂತೆ ಮಾಡಬಲ್ಲವು. ಹಾಗಾಗಿ, ಯಾವುದೇ ಬಟ್ಟೆ ತೆಗೆದುಕೊಂಡಾಗ ಡೀಪ್ ವಿ ನೆಕ್ ಇರುವಂತೆ ನೋಡಿಕೊಳ್ಳಿ. ಆದರೆ, ನೀವು ಕುಳ್ಳಗಿನ ಜೊತೆಗೆ ದಪ್ಪವೂ ಇದ್ದೀರೆಂದಾದರೆ ಈ ನೆಕ್‌ಲೈನ್ ದೂರವಿಡಿ. 

ಇದು ಟ್ಯೂಬ್‌ ಡ್ರೆಸ್‌ ಜಮಾನ;ನಾಚೋ ಹುಡುಗೀರಿಗಲ್ಲ ಈ ಫ್ಯಾಷನ್!

ಮ್ಯಾಕ್ಸಿಸ್

ನಿಮಗೆ ಮ್ಯಾಕ್ಸಿ ಧರಿಸುವುದು ಇಷ್ಟವೆಂದಾದಲ್ಲಿ ಯಾವುದೇ ಚಿಂತೆ ಇಲ್ಲದೆ ಬೇಕೆಂದಷ್ಟು ಮ್ಯಾಕ್ಸಿಗಳನ್ನು ಶಾಪಿಂಗ್ ಮಾಡಿ. ಕೆಳಗೆ ಸಣ್ಣಗಿರುವಂಥ ಮ್ಯಾಕ್ಸಿಗಳು ಕುಳ್ಳಗಿರುವವರಿಗೆ ಹೆಚ್ಚು ಒಪ್ಪುತ್ತವೆ. 

ಹೈ ವೆಸ್ಟೆಡ್ ಪ್ಯಾಂಟ್ಸ್

ಹೈ ವೆಸ್ಟ್ ಪ್ಯಾಂಟ್‌ಗಳು ನಿಮ್ಮ ಕಾಲು ಉದ್ದಗಿರುವಂತೆ ತೋರಿಸುತ್ತವೆ. ಇದಕ್ಕೆ ಫಾರ್ಮ್-ಫಿಟ್ಟೆಡ್ ಟಾಪ್ಸ್ ಧರಿಸಿ. ಹಾಗೆಯೇ ಹೈ ವೆಸ್ಟ್ ಇರುವ ಲಾಂಗ್ ಸ್ಕರ್ಟ್‌ಗಳು ಕೂಡಾ ನಿಮ್ಮ ಸಹಾಯಕ್ಕೆ ಬರುತ್ತವೆ. ಇವು ನಿಮ್ಮ ದೇಹದ ಪ್ರೇಮ್ ಉದ್ದಗೊಳಿಸಿ, ಸರಿಯಾದ ಪ್ರಪೋಶನ್‌ನಲ್ಲಿರುವಂತೆ ತೋರಿಸುತ್ತವೆ. ಇನ್ನು ಇದಕ್ಕೆ ಸಾಕ್ಸ್ ಧರಿಸುತ್ತೀರಾದರೆ ಯಾವಾಗಲೂ ಪ್ಯಾಂಟ್‌ಗೆ ಮ್ಯಾಚ್ ಆಗುವ ಬಣ್ಣದ ಸಾಕ್ಸನ್ನೇ ಧರಿಸಿ. ಇಲ್ಲದಿದ್ದರೆ, ಬೇರೆ ಬಣ್ಣದ ಸಾಕ್ಸ್‌ಗಳು, ನಿಮ್ಮ ಕಾಲಿನ ಉದ್ದವನ್ನು ಹೈಲೈಟ್ ಮಾಡುತ್ತವೆ. 

ಟೈಟ್ ಫಿಟ್ಟಿಂಗ್ ಟಾಪ್ಸ್

ನೀವು ಲೂಸಾಗಿರುವ ಟಾಪ್ ಧರಿಸಿದಷ್ಟೂ ಮೇಲ್ಭಾಗ ಅಗಲ ಕಾಣಿಸುತ್ತದೆ. ಆ ಮೂಲಕ ಒಟ್ಟಾರೆಯಾಗಿ ಮತ್ತಷ್ಟು ಕುಳ್ಳಗೆ ಕಾಣಿಸುತ್ತೀರಿ. ಹಾಗಾಗಿ, ಯಾವಾಗಲೂ ಉಥ್ತಮ ಫಿಟ್ಟಿಂಗ್ ಹೊಂದಿರುವ ಬಟ್ಟೆಯನ್ನೇ ಧರಿಸಿ. 

ಹೇರ್‌ಸ್ಟೈಲ್

ಬಂಪ್ಡ್ ಹೇರ್‌ಸ್ಟೈಲ್ ಅಭ್ಯಾಸ ಮಾಡಿಕೊಳ್ಳಿ. ತಲೆಕೂದಲನ್ನು ನೆತ್ತಿಭಾಗದಲ್ಲಿ ಏರಿಸಿ ಕ್ಲಿಪ್ ಹಾಕಿ, ಬಾಚುವುದರಿಂದ ನಿಮ್ಮ ಎತ್ತರ ಅನಾಯಾಸವಾಗಿ ಒಂದೆರಡು ಇಂಚು ಏರುತ್ತದೆ. ಯಾವುದೇ ಕಾರಣಕ್ಕೂ ಒತ್ತಿ ಬಾಚಬೇಡಿ. ಫ್ರೀ ಹೇರ್ ಬಿಟ್ಟರೂ ಪರವಾಗಿಲ್ಲ. 
 

Follow Us:
Download App:
  • android
  • ios