Asianet Suvarna News Asianet Suvarna News

ಮಾಂಸದ ಮೂಲ ತಿಳಿಸಲು ರೆಸ್ಟೋರೆಂಟಲ್ಲಿ ದನವನ್ನು ನೇತು ಹಾಕಿದರು

ಪ್ರಾಣಿ ಕ್ಷೇಮದ ಬಗ್ಗೆ ಸ್ವತಃ ಕಾಳಜಿಯುಳ್ಳ ಇವರು, ಮಾಂಸದ ಮೂಲ ಹೇಗೆ ಎಂಬುದನ್ನು ಎಲ್ಲರಿಗೂ ನೆನಪಿಸಿಕೊಡಲು ಬಯಸಿದ್ದೆವು ಎಂದಿದ್ದಾರೆ.

Hanging Cow at Australia Restaurant Sparks Controversy

ಅಡಿಲೇಡ್(ಸೆ.29): ಕೃಷಿ ಉದ್ಯಮವನ್ನು ಕೈಗಾರಿಕೀಕರಣಗೊಳಿಸುತ್ತಿರುವುದರ ಕುರಿತು ಗಮನ ಸೆಳೆಯುವ ಉದ್ದೇಶದಿಂದ ಆಸ್ಟ್ರೇಲಿಯಾದ ರೆಸ್ಟೋರೆಂಟ್ ಒಂದರಲ್ಲಿ ದನವೊಂದನ್ನು ನೇತು ಹಾಕಿದ ಘಟನೆಗೆ ಭಾರೀ ಆಕ್ಷೇಪ ವ್ಯಕ್ತವಾಗಿದೆ.

ಘಟನೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ಆದರೆ ರೆಸ್ಟೋರೆಂಟ್ ಮಾಲೀಕರಾದ ಫೆಡೆರಿಕೊ ಮತ್ತು ಮೆಲಿಸ್ಟಾ ಪಿಸಾನೆಲ್ಲಿ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಪ್ರಾಣಿ ಕ್ಷೇಮದ ಬಗ್ಗೆ ಸ್ವತಃ ಕಾಳಜಿಯುಳ್ಳ ಇವರು, ಮಾಂಸದ ಮೂಲ ಹೇಗೆ ಎಂಬುದನ್ನು ಎಲ್ಲರಿಗೂ ನೆನಪಿಸಿಕೊಡಲು ಬಯಸಿದ್ದೆವು ಎಂದಿದ್ದಾರೆ.

‘ನಾವು ಪೂರೈಸುತ್ತಿರುವ ಆಹಾರದ ಮೂಲದ ಬಗ್ಗೆ ಅರಿವು ಮೂಡಿಸಲು ನಾವು ಕಠಿಣ ಶ್ರಮ ಪಡುತ್ತಿದ್ದೇವೆ’ ಎಂದು ಅಡಿಲೇಡ್‌ನ ದಕ್ಷಿಣ ನಗರದ ಎಟಿಕಾ ರೆಸ್ಟೋರೆಂಟ್ ಮಾಲಕಿ ಮೆಲಿಸ್ಸಾ ಹೇಳಿದ್ದಾರೆ. ದನವನ್ನು ತಲೆ ಕೆಳಗೆ ಹಾಕಿ, ಕಾಲಿಗೆ ಹಗ್ಗ ಹಾಕಿ ರೆಸ್ಟೋರೆಂಟ್‌ನಲ್ಲಿ ನೇತು ಹಾಕಲಾಗಿತ್ತು. ವಿಷಯಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣಿಗರು ರೆಸ್ಟೋರೆಂಟ್'ನ ಫೇಸ್‌ಬುಕ್ ಪೇಜ್‌ನಲ್ಲಿ ಕಠಿಣ ಪದಗಳಿಂದ ಹೊಟೇಲ್ ಮಾಲೀಕರನ್ನು ನಿಂದಿಸಿದ್ದಾರೆ.

Follow Us:
Download App:
  • android
  • ios