Asianet Suvarna News Asianet Suvarna News

ಎಚ್ಚರ..! ಹೇರ್ ಡೈ ಡೇಂಜರ್: ಬುಲ್ಡೆ ಸೈಜೇ ಬದಲಾಗುತ್ತೆ!

ಕೂದಲು ಬಿಳಿಯಾಗಿದೆ ಅಥವಾ ಸುಂದರವಾಗಿಲ್ಲ ಎಂದು ಹೇರ್ ಡೈ ಮಾಡಿಕೊಳ್ಳುವ ಅಭ್ಯಾಸ ನಿಮಗಿದೆಯಾ? ಹಾಗಾದ್ರೆ ನೀವು ಎಚ್ಚರ. ಇನ್ನೊಮ್ಮೆ ಕೂದಲಿಗೆ ಬಣ್ಣ ಹಚ್ಚುವ ಮುನ್ನ ಇದನ್ನೊಮ್ಮೆ ಓದಿ, ಹೇರ್ ಡೈ ಅದೆಷ್ಟು ಮಾರಕ ಎಂಬುವುದು ನಿಮಗೇ ತಿಳಿಯುತ್ತದೆ.

hair dye allergic reaction women head almost double in size
Author
New Delhi, First Published Dec 2, 2018, 2:16 PM IST

ಪ್ಯಾರಿಸ್‌ನಲ್ಲಿ ಬೆಚ್ಚಿ ಬಿಳಿಸುವ ಘಟನೆಯೊಂದು ನಡೆದಿದ್ದು, ಹೇರ್ ಡೈ ಮಾಡಿಸಿಕೊಂಡ ಯುವತಿಯೊಬ್ಬಳ ತಲೆಯ ಗಾತ್ರ ಇದ್ದಕ್ಕಿದ್ದಂತೆಯೆ ದುಪ್ಪಟ್ಟಾಗಿದೆ. ಹೌದು 19 ವರ್ಷದ ಎಸ್ಟಿಲ್ ಎಂಬಾಕೆ ಸ್ಥಳೀಯ ಮಾರ್ಕೆಟ್‌ನಿಂದ ಕೂದಲಿಗೆ ಹಚ್ಚಿಕೊಳ್ಳಲು ಹೇರ್ ಡೈ ಖರೀದಿಸಿದ್ದಾಳೆ. ಮನೆಗೆ ಬಂದ ಆಕೆ ಡೈ ಪ್ಯಾಕೆಟ್‌ನಲ್ಲಿ ನೀಡಲಾದ ಸೂಚನೆಯಂತೆ ಬಣ್ಣವನ್ನು ತಲೆಗೆ ಹಚ್ಚಿಕೊಂಡಿದ್ದಾಳೆ. ಆದರೆ ಇದಾದ ಕೆಲವೇ ಕ್ಷಣಗಳಲ್ಲಿ ಉಸಿರಾಡಲು ಕಷ್ಟವಾಗಿದ್ದು, ತಲೆಯಲ್ಲಿ ಸಹಿಸಲು ಅಸಾಧ್ಯವಾದ ತುರಿಕೆ ಕಾಣಿಸಿಕೊಂಡಿದೆ. 

ಆದರೆ ಮರುದಿನ ಬೆಳಗ್ಗೆ ಎದ್ದು ಕನ್ನಡಿಯಲ್ಲಿ ಮುಖ ನೋಡಿಕೊಂಡಾಗ ಒಂದು ಬಾರಿ ಬೆಚ್ಚಿ ಬಿದ್ದಿದ್ದಾಳೆ. ಕನ್ನಡಿಯಲ್ಲಿ ಕಾಣುತ್ತಿರುವುದು ನನ್ನ ಪ್ರತಿರೂಪವೇ? ಎಂಬ ಅನುಮಾನ ಕಾಡಲಾರಂಭಿಸಿದೆ. ಕಾರಣ ದಿನಬೆಳಗಾಗುತ್ತಿದ್ದಂತೆಯೇ ಆಕೆಯ ತಲೆಯ ಗಾತ್ರ ದುಪ್ಪಟ್ಟಾಗಿದೆ. ತಲೆಯ ಸುತ್ತಳತೆ ತೆಗೆದಾಗ ಬರೋಬ್ಬರಿ 63 ಸೆಂ. ಮೀಟರ್ ಆಗಿದೆ. ಆಕೆಯ ತಲೆಯಷ್ಟೇ ಅಲ್ಲದೇ, ನಾಲಗೆ ಗಾತ್ವೂ ಹೆಚ್ಚಾಗಲಾರಂಭಿಸಿದೆ. ಗಾಬರಿಗೊಂಡ ಎಸ್ಟಿಲ್ ವೈದ್ಯರ ಬಳಿ ತೆರಲಿದ್ದಾಳೆ. ಪರಿಶೀಲಿಸಿದ ವೈದ್ಯರು ಹೆರ್ ಡೈನಲ್ಲಿದ್ದ PPD ಎಂಬ ಕೆಮಿಕಲ್‌ನಿಂದ ರಿಯಾಕ್ಷನ್ ಆಗಿದೆ ಎಂದು ತಿಳಿಸಿ ಚುಚ್ಚುಮದ್ದು ನೀಡಿದ್ದಾರೆ. ಹೇರ್‌ಡೈನಲ್ಲಿರುವ PPD(Paraphenylenediamin) ಹೆಸರಿನ ಕೆಮಿಕಲ್ ಸಾಮಾನ್ಯವಾಗಿ ಎಲ್ಲಾ ಸೌಂದರ್ಯವರ್ಧಕ ಉತ್ಪನ್ನಗಳಲ್ಲೂ ಬಳಸುತ್ತಾರೆ. 

ವಾಸ್ತವವಾಗಿ ಎಡವಟ್ಟು ಮಾಡಿಕೊಂಡಿದ್ದು ಎಸ್ಟಿಲ್ ಯಾಕೆಂದರೆ ಆಕೆ ನೀಡಲಾದ ಸೂಚನೆಗಳನ್ನು ಸರಿಯಾಗಿ ಪಾಲಿಸಿರಲಿಲ್ಲ. ಸೂಚನೆಯಲ್ಲಿ ಮಾಡಲು ತಿಳಿಸಿದ್ದ ಪ್ಯಾಚ್‌ ಟೆಸ್ಟ್‌ನಲ್ಲಿ ಹೇರ್‌ಡೈ ಮಾಡಿ 48 ಗಂಟೆಗಳವರೆಗೆ ಯಾವುದೇ ರಿಯಾಕ್ಷನ್ ಆಗದಿದ್ದರೆ ತಲೆಗೆ ಹಚ್ಚಿಕೊಳ್ಳಲು ತಿಳಿಸಲಾಗಿತ್ತು. ಆದರೆ ಎಸ್ಟಿಲ್ ಟ್ರಯಲ್ ಮಾಡಿದ ಕೇವಲ 30 ನಿಮಿಷಗಳೊಳಗೆ ತಲೆಗೆ ಹಚ್ಚಿಕೊಂಡಿದ್ದಳೆನ್ನಲಾಗಿದೆ.

Follow Us:
Download App:
  • android
  • ios