life
By Suvarna Web Desk | 08:24 AM February 05, 2017
(ಶಾಕಿಂಗ್ ವಿಡಿಯೋ)ಗೆಳತಿಯನ್ನು ಕಿಡ್ನ್ಯಾಪ್ ಮಾಡಿದ ಅವರು, ಕೊಟ್ಟದ್ದು ಮಾತ್ರ ಮರೆಯಲಾಗದ ಸರ್ಪ್ರೈಜ್!

Highlights

ಯುವತಿಯರ ಮೇಲೆ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ನಡುವೆ ಸಾಮಾಜಿಕ ಜಾಲಾತಾಣಗಳಲ್ಲಿ, ವಿಡಿಯೋ ಒಂದು ವೈರಲ್ ಆಗಿದೆ. ಯುವಕನೊಬ್ಬ ನಡುರಾತ್ರಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ತನ್ನ ಗೆಳತಿಯನ್ನು ಹಿಂಬಾಲಿಸಿ ಆಕೆಯನ್ನು ಎಳೆದೊಯ್ದ ವಿಡಿಯೋ ಇದಾಗಿದ್ದು, ಬಳಿಕ ನಡೆದ ಘಟನೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಅಷ್ಟಕ್ಕೂ ತನ್ನ ಗೆಳತಿಯನ್ನು ಎಳೆದೊಯ್ದ ಆ ಯುವಕ ಆಕೆಗೇನು ಮಾಡಿದ? ಇಲ್ಲಿದೆ ವಿವರ

ಸದ್ಯ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ಮಿತ್ರರೆಲ್ಲಾ ಸೇರಿ ತಮ್ಮ ಗೆಳತಿಯ ಹುಟ್ಟು ಹಬ್ಬವನ್ನು ವಿನೂತನವಾಗಿ ಆಚರಿಸುವ ದೃಶ್ಯಾವಳಿಗಳನ್ನು ಹೊಂದಿದೆ. ಆದರೆ ಖುದ್ದು ಹುಟ್ಟು ಹಬ್ಬ ಆಚರಿಸಿಕೊಳ್ಳುವ ಯುವತಿಗೂ ಒಂದು ಬಾರಿ ತನ್ನೊಂದಿಗೇನಾಗುತ್ತದೆ ಎಂದು ತಿಳಿಯದೆ ಭಯಪಟ್ಟುಕೊಂಡಿರುವುದರಲ್ಲಿ ಅನುಮಾನವಿಲ್ಲ. ಯಾಕೆಂದರೆ ಯುವತಿ ನಡೆದುಕೊಂಡು ಹೋಗುತ್ತಿದ್ದಾಗ ಗೆಳೆಯನೊಬ್ಬ ಆಕೆಯನ್ನು ನಡುರಸ್ತೆಯಲ್ಲಿ ಹಿಂಬಾಲಿಸಿಕೊಂಡು ಬಂದು ಆಕೆಯನ್ನು ಹಿಡಿದು ಅಲ್ಲೇ ನಿಲ್ಲಿಸಿದದ ಕಾರಿನತ್ತ ಎಳೆದೊಯ್ಯುತ್ತಾನೆ. ಇದರಿಂದ ಬೆಚ್ಚಿ ಬಿದ್ದ ಯುವತಿ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಾಳಾದರೂ ಸಾಧ್ಯವಾಗುವುದಿಲ್ಲ. ಅಷ್ಟರಲ್ಲಿ ಕಾರಿನಲ್ಲಿದ್ದ ಉಳಿದ ಮಿತ್ರರು ಹೊರ ಬಂದು ಆಕೆಗೆ ವಿಶ್ ಮಾಡುತ್ತಾರೆ.

ತನ್ನ ಮಿತ್ರರು ಕೊಟ್ಟ ಈ ಸರ್ಪ್ರೈಜ್ ಪಾರ್ಟಿ ಆಕೆಗೆ ಖುಷಿ ನೀಡಿದರೂ, ಸಿನಿಮೀಯ ಶೈಲಿಯಂತೆ ತನ್ನನ್ನು ಎಳೆದೊಯ್ದುದನ್ನು ಕಂಡು ಶಾಖ್ ಆಗಿರುವುದರಲ್ಲಿ ಅನುಮಾನವಿಲ್ಲ. ಇತ್ತೀಚೆಗೆ ಬೆಳಕಿಗೆ ಬರುತ್ತಿರುವ ಲೈಂಗಿಕ ಪ್ರಕರಣಗಳ ನಡುವೆ ಇಂತಹುದೊಂದು ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ಬಹಳಷ್ಟು ಫೇಮಸ್ ಆಗುತ್ತಿದೆ.

Show Full Article

Recommended

bottom right ad