Asianet Suvarna News Asianet Suvarna News

ವಿಮಾನ ನಿಲ್ದಾಣದಲ್ಲಿ ಈ ಆಹಾರ ತಿಂದರೆ ದುಷ್ಪರಿಣಾಮ ಬೀರೋದು ಗ್ಯಾರಂಟಿ!

ವಿಮಾನ ನಿಲ್ದಾಣವೆಂದರೆ ಎಲ್ಲವೂ ಸ್ವಚ್ಛವಾಗಿರುತ್ತದೆ ಎಂದು ಕೊಂಡರೆ ತಪ್ಪು. ಅಲ್ಲಿ ಸಿಗೋ ಕೆಲವು ಆಹಾರಗಳೂ ದೇಹದ ಮೇಲೆ ದುಷ್ಪರಿಣಾಮ ಬೀರಬಲ್ಲದು. ಅಷ್ಟಕ್ಕೂ ಯಾವ ಆಹಾರಗಳು ಬೇಡ?

Foods to avoid while travelling in flight
Author
Bengaluru, First Published Dec 9, 2018, 2:40 PM IST

ವಿಮಾನ ಪ್ರಯಾಣವೆಂದರೆ ಆಗುವ ಅನುಭವವೇ ಬೇರೆ. ತಲೆ ಸುತ್ತು, ವಾಂತಿಯಂಥ ಅನುಭವವಾಗುವುದು ಸಹಜ. ಆದ್ದರಿಂದ ಅಜೀರ್ಣವಾಗುವಂಥ ಅಥವಾ ನಿಮ್ಮ ದೇಹಕ್ಕೆ ಒಗ್ಗದಂಥ ಆಹಾರವನ್ನು ಕಂಟ್ರೋಲ್ ಮಾಡಿದರೆ ಒಳಿತು. ಅದರಲ್ಲೂ ಅಲ್ಲಿಯೇ ಸಿಗುವ ಕೆಲವು ಜಂಕ್ ಫುಡ್ ಸೇರಿ, ಫ್ರೆಶ್ ಎಂದು ಹೇಳುವ ಆಹಾರವನ್ನೂ ತ್ಯಜಿಸಿದರೆ ಒಳಿತು. ಏನವು?

ಹಸಿ ತರಕಾರಿ ಹಾಗೂ ಹಣ್ಣು 

ಪ್ರಯಾಣ  ಆರಾಮಾಗಿರಲಿ ಎಂದು ವಿಮಾನ ನಿಲ್ದಾಣದ ಬಳಿ ಸಿಗುವ ತರಕಾರಿ-ಹಣ್ಣು ತಿನ್ನುತ್ತೇವೆ. ಆದರೆ, ಇದರಲ್ಲಿ ಬ್ಯಾಕ್ಟೀರಿಯಾಗಳಿರುವ ಸಾಧ್ಯತೆ ಇದ್ದು, ದೇಹದ ಮೇಲೆ ದುಷ್ಪರಿಣಾಮ ಬೀರಬಲ್ಲದು.  ಹಾಗಾಗಿ ಅಲ್ಲಿಯೇ ಹೆಚ್ಚಿಟ್ಟಿರುವ ತರಕಾರಿ, ಹಣ್ಣನ್ನು ತಿನ್ನದಿದ್ದರೆ ಒಳಿತು. 
 

Foods to avoid while travelling in flight

ಪಿಜ್ಜಾ
ವಿಮಾನ ನಿಲ್ದಾಣದಲ್ಲಿ ಸಿಗೋ ಪಿಜ್ಜಾವನ್ನು ಆ ಕ್ಷಣಕ್ಕೆ ಮಾಡಿ ಕೊಡುವುದಿಲ್ಲ, ತಯಾರಿ ಮಾಡಿರುವುದನ್ನು ಬಿಸಿ ಮಾಡಿ ಕೊಡುತ್ತಾರೆ. ಅದನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿಟ್ಟಿರುತ್ತಾರೆ. ಇದನ್ನು ತಿಂದರೆ ಹೊಟ್ಟೆ ಕೆಡುವುದು ಗ್ಯಾರಂಟಿ.

ಪ್ರೆಟ್ಜೆಲ್ಸ್ 

ನೋಡಲು ಬ್ರೆಡ್ ರೂಪದಲ್ಲಿರುತ್ತದೆ. ಬೇಕ್ ಮಾಡಿರೋ ಇದರ ಮೇಲೆ ಬಿಳಿ ಸಾಸಿವೆ ಉದುರಿಸುತ್ತಾರೆ. ಅಲ್ಲದೇ ಜಿಡ್ಡಿನಾಂಶವೂ ಹೆಚ್ಚಿರುವುದರಿಂದ ಇದು ಅಜೀರ್ಣಕ್ಕೆ ಎಡೆ ಮಾಡಿಕೊಡಬಹುದು. 

ಬೊಜ್ಜು ಕರಗಿಸಲು ಅಡುಗೆಯನ್ನು ಹೀಗ್ ಮಾಡಿ

ಕ್ಯಾಂಡಿ 
ಬಾಯ್ ಸಿಹಿ ಮಾಡೋಣವೆಂದು ವಿಮಾನ ನಿಲ್ದಾಣದಲ್ಲಿ ಚಾಕೋಲೇಟ್ ಅಥವಾ ಹೆಚ್ಚು ಸಿಹಿ ಇರುವ ಕ್ಯಾಂಡಿ ತಿಂದರೆ, ತಕ್ಷಣವೇ ಶೌಚಕ್ಕೆ ಹೋಗಬೇಕೆನಿಸುತ್ತದೆ. ಈ ಬಗ್ಗೆ ಇರಲಿ ಎಚ್ಚರ.

ಅನುಷ್ಕಾ ಬಸುರಿ ಬಯಕೆ ಇದು

ಹಾಗಾದರೆ ತಿನ್ನೋದೇನು?
ನೆಮ್ಮದಿಯಾಗಿ ನಿದ್ದೆ ಮಾಡಿಕೊಂಡು ಪ್ರಯಾಣ ಮಾಡಬೇಕೆಂದರೆ ಜೂಸ್, ಮಜ್ಜಿಗೆ, ಡ್ರೈ ಪ್ರೂಟ್ಸ್ ತಿನ್ನುವುದು ಬೆಸ್ಟ್. ಇಲ್ಲವಾದರೆ ಸಮೀಪದ ಹೊಟೇಲ್‌ನಲ್ಲಿ ಬಿಸಿ ಬಿಸಿ ಆಹಾರ ಸೇವಿಸಿದರಂತೂ ಪ್ರಯಾಣ ಸುಖಕರವಾಗಿರುವುದರಲ್ಲಿ ಅನುಮಾನವೇ ಇಲ್ಲ. 

Follow Us:
Download App:
  • android
  • ios