Asianet Suvarna News Asianet Suvarna News

ತೂಕ ಕಡಿಮೆ ಇಲ್ಲಿದೆ ಟಿಪ್ಸ್, ಮಾಡ್ಲಿಕ್ಕೇನೂ ಕಷ್ಟವಲ್ಲ, ಮನಸು ಮಾಡಿಬಿಡಿ...

ಅಬ್ಬಾ..! ಹೊಟ್ಟೆ ತುಂಬಾ  ಊಟ ಆದ್ರೆ ಸಾಕು, ಕೂತಲೇ ತೂಕಡಿಸುತ್ತೇವೆ. ಏನೇ ಕೆಲಸವಿದ್ರೂ ಎಲ್ಲವನ್ನೂ ಬಿಟ್ಟು, ಮಲಗಿ ಬಿಡುತ್ತೇವೆ. ಆಮೇಲೆ ದಪ್ಪ ಆದ್ವಿ ಅಂತ ಆರೋಪಿಸುತ್ತೇವೆ. ಈ ಸಮಸ್ಯೆಗೆ ಇಲ್ಲಿದೆ ಬೆಸ್ಟ್ ಸೊಲ್ಯೂಷನ್...

Easy tips to reduce weight
Author
Bengaluru, First Published Mar 16, 2019, 4:03 PM IST

ಟಿವಿ ನೋಡ್ಕೊಂಡು ಅಥವಾ ಫೋನಿನಲ್ಲಿ ಮಾತಾಡ್ಕೊಂಡು ಊಟ ಮಾಡುತ್ತೇವೆ. ಊಟವಾದ ತಕ್ಷಣವೇ ಹಾಸಿಗೆಗೆ ಹೋಗುತ್ತೇವೆ. ಅದೂ ಇಲ್ಲವಾದರೆ ಫೋನ್ ನೋಡ್ಕೊಂಡು ಟೈಂ ಪಾಸ್ ಮಾಡುವುದು ಕಾಮನ್. ಇವೆಲ್ಲವೂ ದಪ್ಪ ಆಗೋಕೆ ಕಾರಣವಾಗುವಂಥ ಅಂಶಗಳು.

'ಬೆಳಗೆ ರಾಜನಂತೆ ತಿಂಡಿ ತಿನ್ನಬೇಕು, ಮಧ್ಯಾಹ್ನ ಸಾಮಾನ್ಯನಂತೆ ಉಣ್ಣಬೇಕು, ರಾತ್ರಿ ಭಿಕ್ಷುಕನಂತೆ ಊಟ ಮಾಡಬೇಕು,' ಎಂಬ ಗಾದೆ ಮಾತಿದೆ. ಆದರೆ ಕೈ ಬೆರಳ ತುದಿಯಲ್ಲೇ ಕೆಲಸ ಮಾಡುವ ಮಂದಿ ರಾತ್ರಿ ರಾಜನಂತೆಯೇ ಊಟ ಮಾಡಿ ಮಲಗುತ್ತಾರೆ. ಇದೇ ನೋಡಿ ಈಗಿನವರ ಸೊಂಬೇರಿತನ ಹಾಗೂ ತೂಕ ಹೆಚ್ಚಲು ಮುಖ್ಯ ಕಾರಣ.

Easy tips to reduce weight

ಸಂಶೋಧನೆಯೊಂದರ ಪ್ರಕಾರ ಊಟದ ನಂತರ 15 ನಿಮಿಷ ನಡೆದಾಡಬೇಕು. ಇದರಿಂದ ಮಧುಮೇಹ  ಹಾಗೂ ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ದೂರವಾಗುತ್ತವೆ. ಆಹಾರ ಸೇವಿಸುವ ಸಮಯದಲ್ಲಿ ರಕ್ತ ಸಂಚಲನದಲ್ಲಿ ಕೊಂಚ ಬದಲಾವಣೆಯಾಗುತ್ತದೆ. ಅದನ್ನೂ ಕಂಟ್ರೂಲ್‌ಗೆ ತರುತ್ತದೆ. 

ಸ್ಲಿಮ್ ಆಗೋದಾದರೆ ಈರುಳ್ಳಿಯಲ್ಲಿದೆ ಮದ್ದು?

ರಾತ್ರಿ ಊಟದ ನಂತರ 15 ನಿಮಿಷ ವಾಕ್, ಬೆಳಗ್ಗೆ 45 ನಿಮಿಷದ ವಾಕ್‌ಗೆ ಸಮ. ಇದೊಂದು ತೂಕ ಕಡಿಮೆ ಮಾಡುವ ಮಾರ್ಗವೂ ಹಾಗೂ ಆರೋಗ್ಯ ಕಾಪಾಡಿಕೊಳ್ಳುವ ಉತ್ತಮ ಪ್ರಕ್ರಿಯೆಯೂ ಹೌದು. 

Follow Us:
Download App:
  • android
  • ios