Asianet Suvarna News Asianet Suvarna News

ಇ - ಸಿಗರೇಟ್ ತರುತ್ತೆ ಜೀವಕ್ಕೆ ಕುತ್ತು

ಸಿಗರೇಟ್ ಸೇವನೆಯಿಂದ ಮುಕ್ತಿ ಪಡೆಯಲು ಇ-ಸಿಗರೇಟ್ ಬಳಸಲಾಗುತ್ತದೆ. ಆದರಿದೂ ಸೇಫ್ ಅಲ್ಲ. ಇದೇ ಪ್ರಾಣಕ್ಕೆ ತರುತ್ತೆ ಕುತ್ತು. 

E-cigarette cause impare in Lungs
Author
Bengaluru, First Published Oct 28, 2018, 3:24 PM IST

ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂಬುವುದು ಎಲ್ಲರಿಗೂ ಗೊತ್ತು. ಆದರೂ, ಈ ಚಟ ಬಿಡ್ಲಿಕ್ಕೆ ಮನಸ್ಸು ಮಾಡೋಲ್ಲ. ಮನಸ್ಸು ಮಾಡಿದವರಿಗೆ ಬಿಡುವುದೂ ಸುಲಭವಲ್ಲ. ಈ ಚಟದಿಂದ ಮುಕ್ತರಾಗಲೇ ಬೇಕೆಂದು ಕೆಲವರು ಇ-ಸಿಗರೇಟ್ ಮೊರೆ ಹೋಗುವವರಿದ್ದಾರೆ. ಇದು ಆರೋಗ್ಯಕ್ಕೆ ಒಳ್ಳೆಯದಾ?

ಇಲ್ಲ ಇದೂ ಆರೋಗ್ಯಕ್ಕೆ ಕುತ್ತು ಎನ್ನುತ್ತೆ ಸಂಶೋಧನೆ. ನೋಡಲು ಸಿಂಪಲ್ ಲುಕ್ ಇರೋ, ಕಲರ್, ವಿಭಿನ್ನ ಡಿಸೈನ್‌ನಲ್ಲಿ ಸಿಗೋ ಇದನ್ನು ಸುಲಭವಾಗಿಯೇ ಎಲ್ಲಿ ಬೇಕಾದರೂ ತೆಗೆದುಕೊಂಡು ಹೋಗಬಹುದು. 

ಇ-ಸಿಗರೇಟ್ ಬಳಸುವವರ ಶ್ವಾಸಕೋಶಕ್ಕೆ ಗಂಭೀರ ಪರಿಣಾಮ ಬೀರುತ್ತದೆ. ಇಂಥ ಸಿಗರೇಟ್‌ಗಳು ಬ್ಯಾಟರಿಯಿಂದ ಕೆಲಸ ಮಾಡುತ್ತಿದ್ದು, ಹೊಗೆ ಬರಲು ಮೂಲ ಕಾರಣ ಅದರಲ್ಲಿರುವ ರಾಸಾಯನಿಕ ಅಂಶ. ಇದು ದೇಹವನ್ನೇ ಸುಡುತ್ತದೆ. 

ಅಷ್ಟೇ ಅಲ್ಲದೆ ಹಲವಾರು ಫ್ಲೇವರ್‌ಗಳಲ್ಲಿಯೂ ಇ-ಸಿಗರೇಟ್ ಲಭ್ಯ. ಇದು ಸಾಮಾನ್ಯ ಸಿಗರೇಟ್‌ಗಿಂತ  ಎಲ್ಲ ರೀತಿಯಲ್ಲಿಯೂ ಡೇಂಜರ್. ಇದರಿಂದ ಶ್ವಾಸಕೋಶ ಉರಿ ಸೇರಿ ಇತರೆ ಅಡ್ಡ ಪರಿಣಾಮಗಳು ಬೀರುತ್ತವೆ. 

ಈ ಸಮಸ್ಯೆಗಳಿಗೆ ಚಿಕಿತ್ಸೆ ಲಭ್ಯವಿದ್ದರೂ, ಸಿಗರೇಟ್ ಸೇದದೇ ಹೋದರೇನೇ ಬೆಸ್ಟ್. ನೋಡಿ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ.

Follow Us:
Download App:
  • android
  • ios