Asianet Suvarna News Asianet Suvarna News

ವಿಶ್ವದ ಅತೀ ದುರ್ಗಂಧದ ಹಣ್ಣಿದು..!

 

ಹಲಸಿನ ಹಣ್ಣಿನಂತೆ ಕಾಣುತ್ತಿದೆ ಅಂತೇನಾದ್ರೊ ತಿಂದ್ರೆ ಮೂರು ದಿನ ಅದರ ವಾಸೆ ನಿಮ್ಮ ಬಾಯಿಂದಾನೂ ಬರಬಹುದು. ಆದರೂ ಜನರು ತಿನ್ನುವುದ ಬಿಡುವುದಿಲ್ಲ. ಅಷ್ಟು ದುರ್ಗಂಧ ಬೀರೋ ಈ ಹಣ್ಣು ಯಾವುದು? ಎಲ್ಲಿರುತ್ತೆ?

durian worlds smelliest fruit
Author
Bengaluru, First Published Dec 1, 2018, 11:24 AM IST

ಹೌದು ಇದು ವಿಶ್ವದಲ್ಲೇ ಅತೀ ಹೆಚ್ಚು ವಾಸನೆ ಮತ್ತು ವಾಕರಿಕೆ ತರುವ ಹಣ್ಣು, ಹಾಗಂತ ಯಾರು ತಿನ್ನೋದಿಲ್ಲ ಅಂದುಕೊಳ್ಳಬೇಡಿ. ಇದಕ್ಕೊಂದು ಹಬ್ಬ ಮಾಡಿ, ಜನರು ಕ್ಯೂನಲ್ಲಿ ನಿಂತು ತಿನ್ನುತ್ತಾರೆ. ನೋಡಲು ಹಲಸಿನ ಹಣ್ಣಿನಂತೆ ಕಾಣುವ ಹೆಬ್ಬಲಸು ಅಥವಾ ಡ್ಯೂರೆನ್ ಇಂಥ ವಾಸನೆ ಬೀರೋ ಹಣ್ಣು.

ಈ ಹಣ್ಣನ್ನು ಹೆಚ್ಚಾಗಿ ಚೀನಾದಲ್ಲಿ ಬಳಸುತ್ತಾರೆ.ವರ್ಷದ ಮೊದಲನೆಯ ಹುಣ್ಣಿಮೆ ದಿನ ಅಥವಾ ವರ್ಷ ಮುಗಿಯುವ ಕೊನೆ ದಿನದಂದು ಹಬ್ಬವೊಂದನ್ನು ಆಚರಿಸಿ ಈ ಹಣ್ಣನ್ನು ತಿನ್ನುತ್ತಾರೆ.

ಈ ಹಣ್ಣಿನ ವಾಸನೆ ಒಂದು ಮೈಲಿವರೆಗೂ ಹಬ್ಬಿರುತ್ತದೆ. ಯಾವರ ಮೋರಿಯ ವಾಸನೆಗಿಂತಲೂ ಕಡಿಮೆ ಇರುವುದಿಲ್ಲ. ಮೊದಲ ಸಲ ವಾಸನೆ ತೆಗೆದುಕೊಳ್ಳುವವರಿಗೆ ವಾಕರಿಕೆ ಬಂದೇ ಬರುತ್ತದೆ. ಇದರ ದುರ್ವಾಸನೆಯನ್ನು ಜಿಮ್ ಸಾಕ್ಸ್‌ನೊಂದಿಗೆ ಟರ್ಪಂಟೈನ್, ಈರುಳ್ಳಿಯನ್ನು ಮಿಕ್ಸ್ ಮಾಡಿದರೆ ಹೇಗಿರುತ್ತೋ ಹಾಗಿರುತ್ತೆ!?

durian worlds smelliest fruit

ವಿಪರೀತ ಶಕ್ತಿ ತರಿಸುವ ಗುಣಗಳಿರುವ ಈ ಹಣ್ಣು ಸಿಕ್ಕಾಪಟ್ಟೆ ರುಚಿಯಾಗಿರುವುದರಿಂದ ಜನರು ತಿನ್ನಲು ಹಾತೊರೆಯುತ್ತಾರೆ. ಅಲ್ಲದೇ ಖಿನ್ನತೆಯಂಥ ಮಾನಸಿಕ ಸಮಸ್ಯೆಯನ್ನೂಹೋಗಾಲಿಡಿಸುವ ಗುಣ ಈ ಹಣ್ಣಿಗೆದೆ. ಹಲ್ಲಿನ ಹಾಗೂ ಎಲುಬಿನ ಆರೋಗ್ಯಕ್ಕೂ ಅಗತ್ಯವಿರುವ ಅಂಶಗಳು ಈ ಹಣ್ಣಿನಲ್ಲಿದ್ದು, ಪಚನ ಕ್ರಿಯೆಯನ್ನೂ ಅಭಿವೃದ್ಧಿಗೊಳಿಸುತ್ತದೆ. ಬಹಳ ಔಷಧೀಯ ಗುಣಗಳಿರೋ ಕಾರಣದಿಂದಲೇ ಈ ಹಣ್ಣು ಅದೆಷ್ಟೇ ದುರ್ವಾಸನೆಯಿಂದ ಕೂಡಿದರೂ, ತಿನ್ನುತ್ತಾರೆ.

ಹಣ್ಣಿನ ದುರ್ವಾಸನೆ ಕಾರಣದಿಂದಲೇ ಚೀನಾ ಅಥವಾ ಏಷ್ಯಾದ ಸಾರ್ವಜನಿಕ ಸ್ಥಳದಲ್ಲಿ ಹಾಗೂ ಕೆಲವು ಹೊಟೇಲ್‌ಗಳಲ್ಲಿ ಈ ಹಣ್ಣನ್ನು ಮಾರುವಂತಿಲ್ಲ

Follow Us:
Download App:
  • android
  • ios