Asianet Suvarna News Asianet Suvarna News

ಮಿಸಸ್..ಆದ್ಮೇಲೆ 'ಮಿಸ್' ಮಾಡಿಕೊಳ್ಳೋದೇನು?

ಹಕ್ಕಿಯಂತೆ ಹಾರಾಡಿಕೊಂಡಿದ್ದ ಹೆಣ್ಣು ಮದುವೆಯಾಗಿ ಗಂಡನ ಮನೆಗೆ ಕಾಲಿಡುತ್ತದಂತೆ, ತನ್ನ ತನವನ್ನೇ ಕಳೆದುಕೊಂಡು ಬಿಡುತ್ತಾಳೆ. ಅತ್ತೆ-ಮಾವ, ಗಂಡ-ಮಕ್ಕಳೆಂದು ಕಳೆದು ಹೋಗುವ ಹೆಣ್ಣಿಗೂ ಮನಸ್ಸಿರುತ್ತೆ. ಈಕೆ ಏನನ್ನು ಹೆಚ್ಚು ಮಿಸ್ ಮಾಡಿಕೊಳ್ಳುತ್ತಾಳೆ?

Confessions by women of what they miss the most after marriage
Author
Bengaluru, First Published Oct 4, 2018, 4:52 PM IST

ಚಿಕ್ಕ ವಯಸ್ಸಿನಲ್ಲೇ ಮದುವೆಯಾಗುವ ರಾಶಿ ಕನಸು ಕಂಡಿರುತ್ತಾಳೆ ಹೆಣ್ಣು. ನಿಧಾನವಾಗಿ ಮತ್ತೊಂದು ಮನೆ ಬೆಳಗಲು ಮಾನಸಿಕವಾಗಿಯೂ ಸಿದ್ಧವಾಗುತ್ತಾಳೆ. ಭಯ, ಆತಂಕದಿಂದಲೇ ಬಲಗಾಲಿಟ್ಟು ಮತ್ತೊಂದು ಮನೆಗೆ ಕಾಲಿಡುವ ಹೆಣ್ಣು ತನ್ನದೆಲ್ಲವನ್ನೂ ಕಳೆದುಕೊಳ್ಳುತ್ತಾಳೆ. 

ಆದರೆ, ತವರು, ಹಕ್ಕಿಯಂತೆ ಹಾರಾಡುತ್ತಿದ್ದ ಜೀವನ, ಅಪ್ಪನ ಕೈ ತುತ್ತು ಎಲ್ಲವನ್ನೂ ಮಿಸ್ ಮಾಡಿಕೊಳ್ಳುತ್ತಲೇ ಇರುತ್ತಾಳೆ. ಹೇಳಲಾಗದೇ, ಭಾವನೆಗಳನ್ನು ಸಪ್ರೆಸ್ ಮಾಡಿಕೊಳ್ಳುತ್ತಾಳೆ. ಇಂಥ ಹೆಣ್ಣು ಮತ್ತಿನ್ನೇನನ್ನು ಮಿಸ್ ಮಾಡಿಕೊಳ್ತಾಳೆ?

ಅಮ್ಮನ ಕೈ ರುಚಿ

ಪ್ರೀತಿಯಿಂದ, ಬೇಕೆನಿಸುವುದನ್ನು ಮಾಡಿ, ಉಣ ಬಡಿಸುವ ಅಮ್ಮನ ಉಪಚಾರಕ್ಕೆ ಯಾವುದು ಸಮ? ಆಯಾಸವಾದರೆ ಕೂತಲ್ಲೇ ತಿನ್ನಲು ಕೊಡುವ ಅಮ್ಮನಷ್ಟು ಪ್ರೀತಿ, ಮಮತೆ ನೀಡಲು ಇನ್ಯಾರಿಗೆ ಸಾಧ್ಯ? ಇಂಥ ಮಧುರವಾದ ಬಾಂಧವ್ಯ ಹೆಣ್ಣಿಗೆ ಸದಾ ನೆನಪಾಗುತ್ತಲೇ ಇರುತ್ತವೆ.

ತರಲೆ ಟೈಂ...

ಅಣ್ಣ- ತಮ್ಮಂದಿರೊಂದಿಗೆ ತಲೆ ಹರಟೆ, ಸೈಕಲ್ ಮೇಲೆ ಕೂತು ಸಿನಿಮಾಗೆ ಹೋಗಿದ್ದು, ಸುಖಾ ಸುಮ್ಮನೆ ಕಾಲೆಳೆದು ರೇಗಿಸಿದ್ದು, ಕಾಲು ಕೆರೆದು ಜಗಳವಾಡಿದ್ದು....ಸಣ್ಣ ಪುಟ್ಟ ವಿಷಯಗಳಿಗೂ ಮಾಡುತ್ತಿದ್ದ ಮಸ್ತಿ, ಮೋಜು ಒಂದೇ ಎರಡೇ? ಆದರೆ, ಜವಾಬ್ದಾರಿಯಿಂದ ಗಂಭೀರವಾಗುವುದಲ್ಲದೇ, ಹೆಣ್ಣಿಗೆ ಬಾಲ್ಯ ಹಾಗೂ ಮಾಡಿದ ತರಲೆಯನ್ನು ಮತ್ತೆ ಮತ್ತೆ ನೆನಪಿಸುತ್ತದೆ.

ಪ್ರೈವೇಸಿ

ಅಯ್ಯೋ, ಇದು ನನ್ನ ರೂಂ, ಇದು ನನ್ನ ವಸ್ತು....ಒಂದಾ, ಎರಡಾ? ಎಲ್ಲವಕ್ಕೂ ಪೊಸೆಸಿವ್ ತೋರುತ್ತಿದ್ದ ಮಗಳಿಗೆ, ಗಂಡನ ಮನೆಯಲ್ಲಿ ಎಲ್ಲರೂ 'ನಮ್ಮವರು' ಹೌದಾದರೂ, ಯಾರೂ 'ನಮ್ಮವರಲ್ಲ..' ಎನ್ನೋ ಭಾವ. ಇಲ್ಲಿ 'ನನ್ನದು' ಎಂಬುವುದು ಯಾವುದೂ ಇಲ್ಲವೆನ್ನುವ ಭಾವ ಕಿತ್ತು ತಿನ್ನುತ್ತದೆ. ಏನಿದ್ದರೂ ಪತಿ, ಮಕ್ಕಳಿಗೆ ಸೇರಿದ್ದು...ತನ್ನ ಮನೆಯಲ್ಲಿಯೇ ಪರಕೀಯ ಭಾವ.

ಕೆಲಸದ ಹೊರೆ

ಅಮ್ಮನಾದರೆ, 'ಮಗಳಿಗೆ ಸುಸ್ತು' ಎಂದು ಯಾವ ಕೆಲಸವನ್ನೂ ಮಾಡಿಸುತ್ತಿರಲಿಲ್ಲ. ಆದರೆ, ಗಂಡನ ಮನೆಯಲ್ಲಿ ಅಪ್ಪಿ ತಪ್ಪಿಯೂ ಸುಸ್ತು ಎನ್ನೋ ಹಾಗಿಲ್ಲ. ಎಷ್ಟೇ ಸುಸ್ತಾದರೆ ಎಲ್ಲವನ್ನೂ ಕೆಲಸದವಳಂತೆ ಮಾಡಿ ಮುಗಿಸಬೇಕು. ಮಾಡಿದ ಕೆಲಸಕ್ಕೆ ಬೆಲೆಯೂ ಇರೋಲ್ಲ. ಈ ಎಲ್ಲ ಹೊರೆ ಹೊರುವುದು ಅನಿವಾರ್ಯವಾಗುವ ಹೆಣ್ಣು, ತನ್ನ ವೃತ್ತಿ ಜೀವನದ ಕನಸಿಗೂ ತಿಲಾಂಜಲಿ ಇಟ್ಟು ಬಿಡುತ್ತಾಳೆ.

ಆರ್ಥಿಕ ಸ್ವಾತಂತ್ರ್ಯವೂ ಇಲ್ಲ

ತಾನು ದುಡಿದ ಹಣಕ್ಕೆ ತಾನೇ ವಾರಸುದಾರಳು. ಅಪ್ಪನೇನೂ ದುಡಿದಿದ್ದು ಕೊಡು ಎಂದು ಕೇಳುತ್ತಿರಲಿಲ್ಲ. ಏನು ಬೇಕೋ ಅದನ್ನು ತಗೊಂಡು, ಬೇಕೆನಿಸಿದ ಬಟ್ಟೆ ಕೊಂಡು ಮಜಾ ಮಾಡುತ್ತಿದ್ದ ಹೆಣ್ಣಿನ ಗಂಡನ ಮನೆಯಲ್ಲಿಯೂ ದುಡಿಯಲಿ, ಬಿಡಲಿ ಆರ್ಥಿಕ ಸ್ವಾತಂತ್ರ್ಯವನ್ನು ಕಳೆದುಕೊಂಡು ಬಿಡುತ್ತಾಳೆ. ಮಕ್ಕಳು, ಸಂಸಾರ, ಮನೆ, ಕಾರು..ಎಲ್ಲವಕ್ಕೂ ತನ್ನ ದುಡಿಮೆಯ ಪಾಲನ್ನೂ ಮೀಸಲಿಡಬೇಕಾಗುತ್ತದೆ.

ಒಟ್ಟಿನಲ್ಲಿ ಗಂಡನ ಮನೆಯಲ್ಲಿ ವಿಭಿನ್ನವಾದ ವ್ಯಕ್ತಿತ್ವವುಳ್ಳ ಹೆಣ್ಣಾಗಿಯೇ ರೂಪುಗೊಳ್ಳುತ್ತಾಳೆ ಮಗಳು...

Follow Us:
Download App:
  • android
  • ios