Asianet Suvarna News Asianet Suvarna News

ಅತೀ ಹೆಚ್ಚು ಮೊಟ್ಟೆ, ಅನಾರೋಗ್ಯಕ್ಕೆ ದಾರಿ

ದಿನಕ್ಕೊಂದು ಮೊಟ್ಟೆ ತಿಂದರೆ ಆರೋಗ್ಯಕಾರಿ ಎಂಬುವುದು ಗೊತ್ತಿರೂ ವಿಚಾರ. ಆದರೆ ಇದೇ ಹೃದ್ರೋಗಕ್ಕೂ ಕಾರಣವಾಗಬಹುದು. ಹಾಗಾದ್ರೆ ದಿನಕ್ಕೆ ಎಷ್ಟು ತಿನ್ನಬೇಕು? ಹೇಗೆ ತಿನ್ನಬೇಕು? ಇಲ್ಲಿದೆ ನೋಡಿ...

Can eating eggs give you heart trouble
Author
Bangalore, First Published Apr 22, 2019, 3:32 PM IST

ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಮೊಟ್ಟೆ ಸಸ್ಯಾಹಾರಿಯೋ, ಮಾಂಸಹಾರಿಯೋ ಎಂಬುವ ವಾದವಿದ್ದು, ಸಸ್ಯಾಹಾರಿಗಳೂ ಮೊಟ್ಟೆಯನ್ನು ತಿನ್ನುತ್ತಾರೆ. ಅವರವರ ಇಷ್ಟದಂತೆ ಬಿಳಿ ಭಾಗ ಅಥವಾ ಹಳದಿ ಭಾಗವನ್ನು ಆರಿಸಿಕೊಳ್ಳುತ್ತಾರೆ. 

Can eating eggs give you heart trouble

ಕ್ಯಾಲ್ಷಿಯಂ, ಮಿಟಮಿನ್, ಪ್ರೊಟೀನ್ಸ್ ಇರುವ ಈ ಮೊಟ್ಟೆಯಿಂದ ಹೃದಯಕ್ಕೂ ತೊಂದರೆಯಾಗಬಹುದು. ಹಾಗಾದರೆ ಮೊಟ್ಟೆ ತಿನ್ನುವವರ ಗತಿ??

JAMA ಜರ್ನಲ್ ನಡೆಸಿದ ಸಂಶೋಧನೆಯ ಪ್ರಕಾರ, ಒಬ್ಬ ವ್ಯಕ್ತಿ ದಿನಕ್ಕೆ 300 ಗ್ರಾಂ ಕೊಲೆಸ್ಟ್ರಾಲ್ ಇರುವ ಆಹಾರ ಸೇವಿಸಬೇಕು. ಇಲ್ಲವಾದರೆ ಹೃದಯ ಸಂಬಂಧಿ ಕಾಯಿಲೆ ಕಾಡಬಹುದು. ಒಂದು ಮೊಟ್ಟೆ ತಿಂದರೆ ಅದರಲ್ಲಿ ದೇಹಕ್ಕೆ ಬೇಕಾದಷ್ಟು ಕೊಬ್ಬಿನಾಂಶವೂ ಇರುತ್ತದೆ. ಆದರೆ, ಅಗತ್ಯಕ್ಕಿಂತ ಹೆಚ್ಚು ತಿಂದರೆ ಅಪಾಯ ಕಟ್ಟಿಟ್ಟ ಬುತ್ತಿ. 

ಮೊಟ್ಟೆಯ ಬಿಳಿ ಭಾಗ ಬೆಸ್ಟೋ, ಹಳದಿಯೋ?

ಬಾಯಲ್ಡ್ ಅಥವಾ ಫ್ರೈಡ್ ಎಗ್‌ನಲ್ಲಿ ಯಾವುದೊಳ್ಳೆಯದು? ಬಾಯಲ್ಡ್‌ನಲ್ಲಿ ತುಸು ಫ್ಯಾಟ್ ಅಂಶ ಕಡಿಮೆ. ಅಂದರೆ ಮೊಟ್ಟೆ ಆರೋಗ್ಯಕ್ಕೆ ಒಳಿತು. ಅದರಲ್ಲಿಯೂ ದಿನಕ್ಕೊಂದು ತಿಂದರೆ ಸಾಕು. ಆದರೆ, ಅಗತ್ಯಕ್ಕಿಂತ ಹೆಚ್ಚು ತಿಂದರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ ಎನ್ನುತ್ತದೆ ಈ ಸಂಶೋಧನೆ.

Follow Us:
Download App:
  • android
  • ios