Asianet Suvarna News Asianet Suvarna News

ಸೂರ್ಯೋದಯಕ್ಕೂ ಮುನ್ನ ಎದ್ದರೇನು ಲಾಭ?

ಬೇಗ ಮಲಗಿ, ಬೇಗ ಏಳುವುದು ಹಿಂದಿನವರ ಪದ್ಧತಿ. ವೈಜ್ಞಾನಿಕವಾಗಿಯೂ ಇದನ್ನು ಅತ್ಯುತ್ತಮ ಅಭ್ಯಾಸವೆನ್ನುತ್ತಾರೆ. ಆದರೆ, ಇಂಥದ್ದೊಂದು ಪದ್ಧತಿ ರೂಢಿಸಿಕೊಂಡ ಒಂದು ಜನಾಂಗವೇ ಇನ್ನಿಲ್ಲವಾಗುತ್ತದೆ. ಅಷ್ಟಕ್ಕೂ ಬೇಗ ಮಲಗಿ, ಏಳುವ ಪದ್ಧತಿ ಆರೋಗ್ಯಕ್ಕೆ ಒಳ್ಳೆಯದೇಕೆ?

Amazing benefits of waking up early just before sunrise
Author
Bangalore, First Published Sep 20, 2019, 3:10 PM IST

ಸೂರ್ಯ ಮೂಡುವುದರೊಳಗೆ ನಾವು ಏಳಬೇಕು ಎಂದು ಸಂಪ್ರದಾಯಸ್ಥರು ಹೇಳುತ್ತಾರೆ. ಇದು ಕೇವಲ ಧಾರ್ಮಿಕ ವಿಚಾರವಷ್ಟೇ ಅಲ್ಲ. ಇದರ ಹಿಂದೆ ದೈಹಿಕ, ಮಾನಸಿಕ ಹಾಗೂ ವೈಜ್ಞಾನಿಕ ಕಾರಣಗಳೂ ಇವೆ.

- ಮೊದಲನೆಯದಾಗಿ, ಬೇಗ ಮಲಗಿ ಬೇಗ ಏಳುವುದರಿಂದ ದೈಹಿಕ ಚಕ್ರ ಸರಿಯಾಗಿರುತ್ತದೆ. ದೇಹಕ್ಕೆ ಬೇಕಾದಷ್ಟು ನಿದ್ದೆ ಸಿಗುತ್ತದೆ.

- ಹಳೆಯ ಕಾಲದಲ್ಲಿ ಹಿದ್ಯುತ್ ಇರಲಿಲ್ಲವಾದ್ದರಿಂದ ಕತ್ತಲಾಗಿ ಒಂದೆರಡು ತಾಸಿಗೇ ಜನರು ಮಲಗುತ್ತಿದ್ದರು ಮತ್ತು ಬೆಳಗಾಗುವುದಕ್ಕಿಂತ ಮುಂಚೆ ಏಳುತ್ತಿದ್ದರು.

ಹಂಪಿ: ದೇವಸ್ಥಾನ ನೋಡುವುದ ಬಿಟ್ಟು ಇನ್ನೇನು ಮಾಡ್ಬಹುದು?

- ಶಿಲಾಯುಗದ ಕಾಲದಿಂದಲೂ ಇದು ನಡೆದು ಬಂದಿರುವುದರಿಂದ ಮನುಷ್ಯನ ಜೀನ್ಸ್ ಇದೇ ಪದ್ಧತಿಗೆ ಹೊಂದಿಕೊಂಡು ಬಂದಿದೆ. ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡರೆ, ಅಂದರೆ ತಡವಾಗಿ ಮಲಗಿ ತಡವಾಗಿ ಎದ್ದರೆ ಅದನ್ನು ನಿಭಾಯಿಸುವುದು ದೇಹಕ್ಕೆ ಕಷ್ಟ.

- ತಡವಾಗಿ ಏಳುವವರಿಗೆ ಅಜೀರ್ಣ ಹಾಗೂ ಮಲಬದ್ಧತೆ ಸಮಸ್ಯೆ ಹೆಚ್ಚು.

ಧಾರ್ಮಿಕ ಕಾರ್ಯದಲ್ಲಿ ಆಚಮನ ಮಾಡುವುದೇಕೆ?

- ಭೂಮಂಡಲದಲ್ಲಿ ಗಾಳಿ ಸದಾ ಚಲಿಸುತ್ತಿರುತ್ತದೆ. ಚಲನೆಗೆ ಕಾರಣ ಸೂರ್ಯನ ಶಾಖ. ಗಾಳಿಯ ಚಲನೆಯು ರಾತ್ರಿ ಸುಮಾರು 2 ಗಂಟೆಯಿಂದ 4 ಗಂಟೆಯವರೆಗೆ ಅತ್ಯಂತ ಕಡಿಮೆ ಪ್ರಮಾಣದಲ್ಲಿರುತ್ತದೆ. ನಂತರ ಕ್ರಮೇಣ ಹೆಚ್ಚುತ್ತ.

ಬ್ರಾಹ್ಮೀ ಮುಹೂರ್ತದಲ್ಲಿ (ಅಂದಿನ ಸೂರ್ಯೋದಯಕ್ಕಿಂತ 1 ಗಂಟೆ 36 ನಿಮಿಷದ ಮೊದಲಿನ ಅವಧಿ) ತಣ್ಣನೆಯ ಗಾಳಿ ಬೀಸುತ್ತಿರುತ್ತದೆ. ಈ ಗಾಳಿಯು ಮನಸ್ಸಿಗೆ ಆಹ್ಲಾದ ಉಂಟು ಮಾಡುತ್ತದೆ. ಸೂರ್ಯೋದಯದ ಕಾಲ ಸಮೀಪಿಸುತ್ತಿರುವಂತೆಯೇ  ನಮ್ಮ ಶರೀರದ 'ಇಂಜಿನ್' ಮತ್ತೊಂದು ದಿನವನ್ನು ಸಮರ್ಥವಾಗಿ ನಿಭಾಯಿಸಲು ನಿಧಾನವಾಗಿ ಏಳಲಾರಂಭಿಸುತ್ತದೆ.

ಭಯಂಕರವಾಗಿ ಕಾಡುವ ಶನಿ ಕಾಟಕ್ಕೆ ಇದೆಯಾ ಮುಕ್ತಿ..?

ಇಂಜಿನ್ ಆರಂಭವಾಗಲು ಕಾರ್ಟಿಸಾಲ್ ಎನ್ನುವ ರಾಸಾಯನಿಕ ಮುಖ್ಯ. ರಕ್ತದಲ್ಲಿ ಈ ರಾಸಾಯನಿಕದ ಪ್ರಮಾಣ ಹೆಚ್ಚುತ್ತಿರುವಂತೆಯೇ ನಮ್ಮ ನಾಡಿ ಬಡಿತವೂ ಹೆಚ್ಚುತ್ತದೆ. ರಕ್ತದ ಒತ್ತಡ ಏರುತ್ತದೆ. ಗ್ಲೈಕೋಜನ್ ಗ್ಲೂಕೋಸ್ ಆಗಿ ಪರಿವರ್ತಿತವಾಗುತ್ತದೆ. ಮನಸ್ಸು-ಮೆದುಳು ಜಾಗೃತವಾಗುತ್ತದೆ. ಇಡೀ ದೇಹವು ಸರ್ವಸನ್ನದ್ಧವಾಗುತ್ತದೆ. ಈ ಸಮಯದಲ್ಲಿ ಏನೇ ಮಾಡಿದರೂ ಚೆನ್ನಾಗಿ ಮಾಡಬಹುದು. ಆದ್ದರಿಂದಲೇ ಬೆಳಿಗ್ಗೆ ಬೇಗ ಏಳಬೇಕು ಅನ್ನುವುದು.

 ಮಹಾಬಲ ಸೀತಾಳಬಾವಿ

Follow Us:
Download App:
  • android
  • ios