Asianet Suvarna News Asianet Suvarna News

ಫಿಟ್'ನೆಸ್'ಗೆ ಸಿಂಪಲ್ ಸೂತ್ರಗಳು

ಇತ್ತೀಚಿನ ದಿನಗಳಲ್ಲಿ ಹೆಲ್ತಿ ಜೀವನಶೈಲಿ ಕಡೆ ಜನರು ಹೆಚ್ಚು ಜಾರುತ್ತಿದ್ದಾರೆ. ಆರೋಗ್ಯದ ಕಡೆ, ಸೌಂದರ್ಯದ ಕಡೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಇದರಲ್ಲಿ ಫಿಟ್'ನೆಸ್ ಕೂಡಾ ಒಂದಾಗಿದೆ. ಫಿಟ್'ನೆಸ್ ಅನ್ನೋ ಪದ ಹೆಚ್ಚಿನವರಿಗೆ ಹೊಸದೇನಲ್ಲ. ಆಗಾಗ ನಾವೆಲ್ಲರೂ ಕೇಳುತ್ತಿರುತ್ತೇವೆ. ಹಾಗಾದರೆ ಈ ಫಿಟ್'ನೆಸ್ ಅಂದ್ರೇನು? ಇದರ ಬಗ್ಗೆ ತಿಳಿದಿರಬೇಕಾದ ಸಿಂಪಲ್ ವಿಚಾರಗಳಿವು.

5 Things Everyone Needs To Know About Fitness

ಬೆಂಗಳೂರು (ಜ.12): ಇತ್ತೀಚಿನ ದಿನಗಳಲ್ಲಿ ಹೆಲ್ತಿ ಜೀವನಶೈಲಿ ಕಡೆ ಜನರು ಹೆಚ್ಚು ಜಾರುತ್ತಿದ್ದಾರೆ. ಆರೋಗ್ಯದ ಕಡೆ, ಸೌಂದರ್ಯದ ಕಡೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಇದರಲ್ಲಿ ಫಿಟ್'ನೆಸ್ ಕೂಡಾ ಒಂದಾಗಿದೆ. ಫಿಟ್'ನೆಸ್ ಅನ್ನೋ ಪದ ಹೆಚ್ಚಿನವರಿಗೆ ಹೊಸದೇನಲ್ಲ. ಆಗಾಗ ನಾವೆಲ್ಲರೂ ಕೇಳುತ್ತಿರುತ್ತೇವೆ. ಹಾಗಾದರೆ ಈ ಫಿಟ್'ನೆಸ್ ಅಂದ್ರೇನು? ಇದರ ಬಗ್ಗೆ ತಿಳಿದಿರಬೇಕಾದ ಸಿಂಪಲ್ ವಿಚಾರಗಳಿವು.

ಇದೊಂದು ಲೈಫ್'ಸ್ಟೈಲ್!

ಫಿಟ್''ನೆಸ್ ಎಂದರೆ ದಿನಕ್ಕೆ ನಿಯಮಿತವಾಗೊ 30 ನಿಮಿಷ ವರ್ಕೌಟ್ ಮಾಡುವುದಲ್ಲ. ಅಂದರೆ ಲಿಫ್ಟ್ ಬಳಸುವ ಬದಲು ಮೆಟ್ಟಿಲನ್ನು ಬಳಸುವುದು, ಮನೆಯ ಹತ್ತಿರದ ಮಾರ್ಕೆಟ್'ಗೆ ನಡೆದುಕೊಂಡು ಹೋಗಿ ಸಾಮಾನು ತರುವುದು, ಸಣ್ಣಪುಟ್ಟ ಕೆಲಸಗಳನ್ನು ಮಾಡುವುದು ಇವೆಲ್ಲಾ ಫಿಟ್'ನೆಸ್'ಗೆ ಸೇರುತ್ತದೆ.

ಮಧ್ಯೆ ಮಧ್ಯೆ ಬಿಡಬಾರದು

ಹೆಚ್ಚಿನವರು ಮಾಡುವ ತಪ್ಪಿದು. ಗುರಿ ತಲುಪಿದ ಕೂಡಲೇ ನಿಯಮಿತ ವರ್ಕೌಟನ್ನು ಬಿಡುತ್ತಾರೆ. ಇದು ಸರಿಯಲ್ಲ. ಆರೋಗ್ಯಯುತವಾಗಿ ಇರಬೇಕೆಂದರೆ ಪ್ರತಿನಿತ್ಯ ವರ್ಕೌಟ್ ಮಾಡಿ. ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಮಾಡಲು ಫೋಕಸ್ ಮಾಡಿ.

ಎಲ್ಲರಿಗೂ ಒಂದೇ ಫಿಟ್'ನೆಸ್ ಸೂತ್ರವಲ್ಲ

ಫಿಟ್'ನೆಸ್ ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ. ಪ್ರತಿಯೊಬ್ಬರ ದೇಹ ಪ್ರಕೃತಿ, ಆರೋಗ್ಯ ಸ್ಥಿತಿ, ಅವರವರಿಗೆ ತಕ್ಕಂತೆ ಭಿನ್ನವಾಗಿರುತ್ತದೆ. ಫಿಟ್'ನೆಸ್'ಗೆ ಒಂದೇ ದಾರಿ ಎಂದು ಯಾರಾದರೂ ಹೇಳಿದರೆ ನಂಬಬೇಡಿ.

ಡಯಟ್ ಮತ್ತು ವ್ಯಾಯಾಮ ಎರಡೂ ಮುಖ್ಯ

ಫಿಟ್'ನೆಸ್'ನಲ್ಲಿ ಡಯಟ್ ಮತ್ತು ವ್ಯಾಯಾಮ ಎರಡೂ ಮುಖ್ಯ. ಆದರೆ ನಮಗೆ ಎರಡರ ಕಡೆ ಒಟ್ಟಿಗೆ ಜಾಸ್ತಿ ಗಮನ ಕೊಡಲು ಸಾಧ್ಯವಾಗುವುದಿಲ್ಲ. ಜಿಮ್'ನಲ್ಲಿ 1 ತಾಸು ಜಾಸ್ತಿ ಕಸರತ್ತು ಮಾಡಿ. 80:20 ಸೂತ್ರವನ್ನು ಫಾಲೋ ಮಾಡಿ. ಅಂದರೆ 80 % ದಿನಗಳು ವರ್ಕೌಟ್ ಮಾಡಿದ್ರೆ 20 % ರೆಸ್ಟ್ ಮಾಡಿ.

ವಾರಕ್ಕೊಂದು ದಿನ ರೆಸ್ಟ್ ಮಾಡಿ

ಒಂದು ದಿನವೂ ಬಿಡದೇ ವರ್ಕೌಟ್ ಮಾಡಿದ್ರೆ ಬೇಗ ತೂಕ ಕಳೆದುಕೊಳ್ಳುತ್ತೇವೆ ನಂಬಿಕೆ ನಮ್ಮಲ್ಲಿದೆ. ಹಾಗಾಗಿ ಕೆಲವರು ಒಂದೂ ದಿನವೂ ಬಿಡದೇ ಮಾಡುತ್ತಾರೆ. ಇದು ತಪ್ಪು ಕಲ್ಪನೆ. ಪ್ರತಿದಿನ ವರ್ಕೌಟ್ ಮಾಡುವಾಗ ದೇಹದಿಂದ ಬೆವರು ಹೊ ಹೋಗಿರುತ್ತದೆ. ಇದು ರಿಕವರ್ ಆಗಲು ಸಮಯಾವಕಾಶ ಬೇಕು. ಸಂಶೋಧನೆ ಪ್ರಕಾರ ವಾರಕ್ಕೊಂದು ದಿನ ರೆಸ್ಟ್ ಮಾಡಿದ್ರೆ ಬೇಗ ತೂಕ ಕಳೆದುಕೊಳ್ಳುತ್ತೀರಿ.

Follow Us:
Download App:
  • android
  • ios