Asianet Suvarna News Asianet Suvarna News

ನಿದ್ರೆ ಬರುತ್ತಿಲ್ಲವಾ..? ನೆನಪಿಡಿ 4:7:8 - ಒಂದೇ ನಿಮಿಷದಲ್ಲಿ ನಿದ್ರಾವಶರಾಗುವ ಟ್ರಿಕ್ ಇದು

ಅಮೆರಿಕದ ಡಾ| ಆಂಡ್ರ್ಯೂ ವೇಲ್ ಎಂಬುವವರು ಈ ಉಸಿರಾಟದ ಫಾರ್ಮುಲಾವನ್ನ ಜನಪ್ರಿಯಗೊಳಿಸಿದ್ದಾರೆ. ಇದು ಕೇವಲ ನಿದ್ರೆಗೆ ಅಷ್ಟೇ ಅಲ್ಲ, ಒತ್ತಡದಿಂದ ದೂರವಾಗಲೂ ಇದನ್ನ ಪ್ರಯೋಗಿಸಬಹುದು.

4 7 8 formula for instant sleep

ಅನೇಕ ಮಂದಿಗೆ ನಿದ್ರೆಯೇ ತಲೆಗೆ ಹತ್ತದು; ಕೆಲವರಿಗೆ ನಿದ್ರೆ ಬಂದರೂ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಹಾಸಿಗೆಯಲ್ಲಿ ಮಲಗಿ ವಿಲವಿಲ ಒದ್ದಾಡುತ್ತಾರೆ. ಅನೇಕರು ಗಂಟೆಗಟ್ಟಲೆ ಹೊರಳಾಡಿದ ಬಳಿಕ ನಿದ್ದೆ ಹತ್ತುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರಿಗೂ ಉಪಯೋಗವಾಗುವ ಐಡಿಯಾ ಇಲ್ಲಿದೆ. ಒಂದೇ ನಿಮಿಷದಲ್ಲಿ ನಿದ್ರಾವಸ್ಥೆಗೆ ಜಾರುವ ಅಮೋಘ ಟ್ರಿಕ್'ವೊಂದು ಇಲ್ಲಿದೆ. ಅದೇ 4:7:8 ಫಾರ್ಮುಲಾ. ಇದು ಹೇಳಿದರೆ ನಂಬೋದು ಕಷ್ಟ. ನೀವಾಗೇ ಮಾಡಬೇಕು.

ಏನಿದು 4:7:8 ಫಾರ್ಮುಲಾ..?
ಇದೊಂದು ಬ್ರೀಥಿಂಗ್ ಟೆಕ್ನಿಕ್. ಪ್ರಾಣಾಯಾಮ ಅಭ್ಯಾಸವಿದ್ದವರಿಗೆ ಇಂಥ ಟೆಕ್ನಿಕ್'ಗಳು ಗೊತ್ತಿರುತ್ತವೆ. 4 ಸೆಕಂಡ್ ಮೂಗಿನ ಮೂಲಕ ಉಸಿರು ಒಳಗೆಳೆಯಿರಿ; 7 ಸೆಕೆಂಡ್ ಉಸಿರು ತಡೆದಿಟ್ಟುಕೊಳ್ಳಿ; 8 ಸೆಕೆಂಡ್ ಬಾಯಿಯಿಂದ ಉಸಿರು ಹೊರಹಾಕಿ. ಹೀಗೆ ಸತತವಾಗಿ 4 ಬಾರಿ ಮಾಡಿ.

ಹೀಗೆ ಮಾಡಿ....
ಮೊದಲು ಸಂಪೂರ್ಣವಾಗಿ ಉಸಿರನ್ನು ನಿಮ್ಮ ಬಾಯಿಯಿಂದ ಹುಷ್ ಎಂದು ಶಬ್ದ ಮಾಡುತ್ತಾ ಹೊರಹಾಕಿರಿ. ನಂತರ ಈ ಕೆಳಗೆ ನೀಡಿರುವಂತೆ ಉಸಿರಾಡಿ....
1) ಬಾಯಿಯನ್ನ ಮುಚ್ಚಿ, ಮೂಗಿನ ಮೂಲಕ ಉಸಿರೆಳೆದುಕೊಳ್ಳುತ್ತಾ ಹೋಗಿ. 4 ಎಣಿಕೆಯವರೆಗೂ ಹೀಗೇ ಉಸಿರೆಳೆದುಕೊಳ್ಳಿ.
2) ಬಳಿಕ ಉಸಿರೆಳೆದುಕೊಳ್ಳುವುದನ್ನ ನಿಲ್ಲಿಸಿ ಹಾಗೇ ಉಸಿರನ್ನ ತಡೆದಿಟ್ಟುಕೊಳ್ಳಿ. 7 ಎಣಿಕೆಯವರೆಗೆ ಈ ಸ್ಥಿತಿಯಲ್ಲೇ ಇರಿ.
3) ಇದಾದ ಬಳಿಕ ಬಾಯಿಯಿಂದ ಹುಷ್ ಎಂದು ಶಬ್ದ ಮಾಡುತ್ತಾ 8 ಎಣಿಕೆಯವರೆಗೆ ಉಸಿರನ್ನ ಹೊರಹಾಕಿ.

ಇಲ್ಲಿಗೆ ಒಂದು ಉಸಿರಾಟದ ಸೈಕಲ್ ಮುಕ್ತಾಯವಾಗುತ್ತದೆ. ಕೂಡಲೇ ಮತ್ತೊಂದು ಸೈಕಲ್ ಪ್ರಾರಂಭಿಸಿ. ಹೀಗೆ 4 ಬಾರಿ ಮಾಡಿದರೆ ನಿಮಗರಿವಿಲ್ಲದಂತೆಯೇ ನಿದ್ರಾದೇವಿಯ ವಶವಾಗಿರುತ್ತೀರಿ. ಒಂದೇ ಎಚ್ಚರಿಕೆ ಎಂದರೆ, ಒಂದು ಸೈಕಲ್'ನಿಂದ ಮತ್ತೊಂದು ಸೈಕಲ್'ಗೆ ಗ್ಯಾಪ್ ಇರಕೂಡದು.

ಯಾರು ಕಂಡುಹಿಡಿದರು..?
ಮೊದಲೇ ಹೇಳಿದಂತೆ ಇಂಥ ಬ್ರೀಥಿಂಗ್ ಟೆಕ್ನಿಕ್'ಗಳು ಪ್ರಾಣಾಯಾಮದಲ್ಲಿವೆ. ಆದರೆ, ಅಮೆರಿಕದ ಡಾ| ಆಂಡ್ರ್ಯೂ ವೇಲ್ ಎಂಬುವವರು ಈ ಉಸಿರಾಟದ ಫಾರ್ಮುಲಾವನ್ನ ಜನಪ್ರಿಯಗೊಳಿಸಿದ್ದಾರೆ. ಇದು ಕೇವಲ ನಿದ್ರೆಗೆ ಅಷ್ಟೇ ಅಲ್ಲ, ಒತ್ತಡದಿಂದ ದೂರವಾಗಲೂ ಇದನ್ನ ಪ್ರಯೋಗಿಸಬಹುದು.

Follow Us:
Download App:
  • android
  • ios