Asianet Suvarna News Asianet Suvarna News

ಕೊಪ್ಪಳ: ಬಿಈಡಿ ಫಲಿತಾಂಶ ಪ್ರಕಟ

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಿ.ಈಡಿ. ಪ್ರಥಮ ಮತ್ತು ತೃತೀಯ ಸೆಮಿಸ್ಟರಿನ ಪರೀಕ್ಷೆಗಳ ಫಲಿತಾಂಶ ಪ್ರಕಟ|  ಪರೀಕ್ಷೆಗೆ ಹಾಜರಾದ ಒಟ್ಟು 93 ವಿದ್ಯಾರ್ಥಿಗಳಲ್ಲಿ 89 ವಿದ್ಯಾರ್ಥಿಗಳು ಉತ್ತೀರ್ಣ| 

Vijayanagara Shrikrishnadevaraya University: B.Ed Result Announced
Author
Bengaluru, First Published Oct 25, 2019, 7:57 AM IST

ಕೊಪ್ಪಳ[ಅ.25]:  ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಿ.ಈಡಿ. ಪ್ರಥಮ ಮತ್ತು ತೃತೀಯ ಸೆಮಿಸ್ಟರಿನ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಿದ್ದು, ರಾಜೀವ ಗಾಂಧಿ ರೂರಲ್‌ ಬಿ.ಈಡಿ. ಕಾಲೇಜಿನ ಪ್ರಥಮ ಸೆಮಿಸ್ಟರಿನಲ್ಲಿ ಪ್ರತಿಭಾ ಸಂಗಟಿ 600 ಅಂಕಕ್ಕೆ 508(84.66%) ಪ್ರಥಮ, ರಾಜರಾಜೇಶ್ವರಿ ಬಳ್ಳೊಳ್ಳಿ 600 ಅಂಕಕ್ಕೆ 506 (84.33%) ದ್ವಿತೀಯ ಸ್ಥಾನ, ಯಂಕಮ್ಮ600 ಅಂಕಕ್ಕೆ 504 (84%) ತೃತೀಯ ಸ್ಥಾನ ಪಡೆದಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪರೀಕ್ಷೆಗೆ ಹಾಜರಾದ ಒಟ್ಟು 93 ವಿದ್ಯಾರ್ಥಿಗಳಲ್ಲಿ 89 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಮಹಾವಿದ್ಯಾಲಯದ ಪ್ರಥಮ ಸೆಮಿಸ್ಟರಿನ ಫಲಿತಾಂಶವು ಶೇ.95.69 ಆಗಿರುತ್ತದೆ. ತೃತೀಯ ಸೆಮಿಸ್ಟರಿನಲ್ಲಿ ಹುಲಿಗೆವ್ವ ಸಿದ್ನೆಕೊಪ್ಪ ಮತ್ತು ವೆಂಕಟೇಶ 600 ಅಂಕಕ್ಕೆ 503 (83.83%) ಪ್ರಥಮ, ಮಂಜುಳಾ ಕುಷ್ಠಗಿ 600 ಅಂಕಕ್ಕೆ 499 (83.16%) ದ್ವಿತೀಯ ಸ್ಥಾನ, ಕೃಷ್ಣಾ ತಳವಾರ ಮತ್ತು ಲಕ್ಷ್ಮೀ ಗಜಪತಿ 600 ಅಂಕಕ್ಕೆ 493 (82.16%) ತೃತೀಯ ಸ್ಥಾನ ಪಡೆದಿದ್ದಾರೆ. ಪರೀಕ್ಷೆಗೆ ಹಾಜರಾದ ಒಟ್ಟು 58 ವಿದ್ಯಾರ್ಥಿಗಳೆಲ್ಲರೂ ಉತ್ತೀರ್ಣರಾಗಿದ್ದು ಮಹಾವಿದ್ಯಾಲಯದ ತೃತೀಯ ಸೆಮಿಸ್ಟರಿನಲ್ಲಿ 100 ಕ್ಕೆ 100 ರಷ್ಟುಪರೀಕ್ಷಾ ಫಲಿತಾಂಶವು ಬಂದಿರುತ್ತದೆ.

ಉಭಯ ಸೆಮಿಸ್ಟರಿನ ಪರೀಕ್ಷಾ ಫಲಿತಾಂಶದಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ಮತ್ತು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಕರಿಯಣ್ಣ ಸಂಗಟಿ ಹಾಗೂ ಆಡಳಿತಾಧಿಕಾರಿ ಮಹಾಂತೇಶ ಸಂಗಟಿ ಹಾಗೂ ಸಂಸ್ಥೆಯ ಸಂಯೋಜಕ ಬಾಳಪ್ಪ ಸಂಗಟಿ ಮತ್ತು ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಪ್ರಾಚಾರ್ಯ ವಿನೋದ ಹೂಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Follow Us:
Download App:
  • android
  • ios