Asianet Suvarna News Asianet Suvarna News

ಅ.8 ರಂದು ಶಿರೋಳದ ಯಚ್ಚರಸ್ವಾಮಿ ಗವಿಮಠದ ಮಹಾರಥೋತ್ಸವ

ಶಿರೋಳ ಗ್ರಾಮದ ಯಚ್ಚರಸ್ವಾಮಿ ಗವಿಮಠದ ಮಹಾರಥೋತ್ಸವವು ಯಚ್ಚರಸ್ವಾಮಿ ಶ್ರೀ ನೇತೃತ್ವದಲ್ಲಿ ಅ. 8ರ ಮಂಗಳವಾರ ಸಂಜೆ 5 ಗಂಟೆಗೆ ನಡೆಯಲಿದೆ| ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠ ಶಾಂತಲಿಂಗ ಶ್ರೀ ಸಮ್ಮುಖದಲ್ಲಿ ಸಕಲವಾದ್ಯ ವೈಭವಗಳೊಂದಿಗೆ ಹಾಗೂ ಪುರವಂತರ ಸೇವೆ ಜೊತೆಗೆ ಮಹಾರಥೋತ್ಸವ ಹಾಗೂ 6 ಗಂಟೆಗೆ ಬನ್ನಿ ಮುಡಿಯುವ ಕಾರ್ಯಕ್ರಮ ಜರುಗುವುದು|

Yechchraswami Gavimath's Fair Will be Held on Oct. 8th in Shirol
Author
Bengaluru, First Published Oct 6, 2019, 10:24 AM IST

ನರಗುಂದ(ಅ.5): ತಾಲೂಕಿನ ಶಿರೋಳ ಗ್ರಾಮದ ಯಚ್ಚರಸ್ವಾಮಿ ಗವಿಮಠದ ಮಹಾರಥೋತ್ಸವವು ಯಚ್ಚರಸ್ವಾಮಿ ಶ್ರೀ ನೇತೃತ್ವದಲ್ಲಿ ಅ. 8ರ ಮಂಗಳವಾರ ಸಂಜೆ 5 ಗಂಟೆಗೆ ಭೈರನಹಟ್ಟಿದೊರೆಸ್ವಾಮಿ ವಿರಕ್ತಮಠ ಶಾಂತಲಿಂಗ ಶ್ರೀ ಸಮ್ಮುಖದಲ್ಲಿ ಸಕಲವಾದ್ಯ ವೈಭವಗಳೊಂದಿಗೆ ಹಾಗೂ ಪುರವಂತರ ಸೇವೆ ಜೊತೆಗೆ ಮಹಾರಥೋತ್ಸವ ಹಾಗೂ 6 ಗಂಟೆಗೆ ಬನ್ನಿ ಮುಡಿಯುವ ಕಾರ್ಯಕ್ರಮ ಜರುಗುವುದು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅ. 11ರ ಶುಕ್ರವಾರ ಬೆಳಗ್ಗೆ 10.30ಕ್ಕೆ ಸಂಸ್ಕಾರ ಎಂಬ ವಿಷಯದ ಮೇಲೆ ಧಾರ್ಮಿಕ, ಸಂಗೀತ, ಸನ್ಮಾನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಬಾಗಲಕೋಟೆ ಪರಮರಾಮಾರೂಢ ಶ್ರೀ, ಶಾಂತಲಿಂಗ ಶ್ರೀಗಳು, ಹೊಳೆಆಲೂರ ಅಲಮೇಂದ್ರ ಶ್ರೀ, ಯರಗಟ್ಟಿಗಣಪತಿ ಮಹಾರಾಜರು, ವೇ.ಮೂ. ವೀರಯ್ಯ ಹೀರೇಮಠ, ಮುಖ್ಯ ಅಥಿತಿಗಳಾಗಿ ಗಣಿ ಮತ್ತು ಭೂ ವಿಜ್ಞಾನ ಪರಿಸರ ಖಾತೆ ಸಚಿವ ಸಿ.ಸಿ. ಪಾಟೀಲ, ಗ್ರಾಪಂ ಅಧ್ಯಕ್ಷ ಹನಮಂತ ಕಾಡಪ್ಪನವರ, ನಾಗನಗೌಡ ತಿಮ್ಮನಗೌಡ್ರ, ಕಸ್ತೂರಿಬಾಯಿ ಕಮ್ಮಾರ, ಪ್ರಕಾಶಗೌಡ ತಿರಕನಗೌಡ್ರ, ನವೀನ ಪತ್ತಾರ, ರಾಮಕೃಷ್ಣ ಗಂಗೋಜಿ, ಶಿವಲಿಂಗಪ್ಪ ದೇಸಾಯಿ, ವಿ.ಕೆ. ಮರಿಗುದ್ದಿ, ಶೇಖರಪ್ಪ ಗಟ್ಟಿ, ಎಮ್‌.ವ್ಹಿ. ಶಾಲ್ದಾರ, ಸೊಲಬನ್ನ ಕಲಹಾಳ, ಮಲ್ಲನಗೌಡ ತಿರಕನಗೌಡ್ರ, ಎಮ್‌.ಎಮ್‌. ಕೋಡಬಳ್ಳಿ, ಜಾತ್ರಾಮಹೋತ್ಸವ ಸಮಿತಿಯ ಅಧ್ಯಕ್ಷ ವ್ಹಿ.ಎಸ್‌. ಚವಡಿ, ಉಪಾಧ್ಯಕ್ಷ ಪ್ರವೀಣ್‌ ಶೆಲ್ಲಿಕೇರಿ, ಕಾರ್ಯದರ್ಶಿ ಜಕಣಾಚಾರಿ ಬಡಿಗೇರ, ಸಹ ಕಾರ್ಯದರ್ಶಿ ಮಂಜುನಾಥ ಕವಡಿಮಟ್ಟಿ ಇರುವರು.

ರಥೋ​ತ್ಸ​ವ​ದಲ್ಲಿ ನಿವೃತ್ತ ಪೊಲೀಸ್‌ ಅಧೀ​ಕ್ಷ​ಕ ಎ.ಆರ್‌. ಬಡಿಗೇರ, ಡಾ. ಛಾಯಾದೇವಿ ಬಡಿಗೇರ ಇವರಿಗೆ ಸನ್ಮಾನ ನಡೆಯಲಿದೆ ಎಂದು ಭಕ್ತರು ಪ್ರಕ​ಟ​ಣೆ​ಯಲ್ಲಿ ತಿಳಿಸಿದ್ದಾರೆ.

Follow Us:
Download App:
  • android
  • ios