Asianet Suvarna News Asianet Suvarna News

ಮೈಸೂರು: ಅರಮನೆ ಸುತ್ತ ಏಕಮುಖ ವಾಹನ ಸಂಚಾರ

ದಸರಾ ಮಹೋತ್ಸವ ಅಂಗವಾಗಿ ಮೈಸೂರು ಅರಮನೆ ಸುತ್ತಲಿನ ರಸ್ತೆಗಳಲ್ಲಿ ಏಕಮುಖ ವಾಹನ ಸಂಚಾರ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್‌ ಆಯುಕ್ತ ಕೆ.ಟಿ. ಬಾಲಕೃಷ್ಣ ತಿಳಿಸಿದ್ದಾರೆ. ಅರಮನೆಯನ್ನು ಮದ್ಯಬಿಂದುವನ್ನಾಗಿ ಪರಿಗಣಿಸಿ ಗಡಿಯಾರದ ಮುಳ್ಳು ಸುತ್ತುವ ದಿಕ್ಕಿಗೆ ವಿರುದ್ಧ ದಿಕ್ಕಿನಲ್ಲಿ ವಾಹನಗಳು ಸಂಚರಿಸುವಂತೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

vehicles diverted to different roads in mysore as dasara celebrations begins
Author
Bangalore, First Published Sep 29, 2019, 2:26 PM IST

ಮೈಸೂರು(ಸೆ.29): ದಸರಾ ಮಹೋತ್ಸವ ಅಂಗವಾಗಿ ಮೈಸೂರು ಅರಮನೆ ಸುತ್ತಲಿನ ರಸ್ತೆಗಳಲ್ಲಿ ಏಕಮುಖ ವಾಹನ ಸಂಚಾರ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್‌ ಆಯುಕ್ತ ಕೆ.ಟಿ. ಬಾಲಕೃಷ್ಣ ತಿಳಿಸಿದ್ದಾರೆ.

ಸೆ.28 ರಿಂದ ಅ.8 ರವರೆಗೆ ಪ್ರತಿದಿನ ಮಧ್ಯಾಹ್ನ 3 ರಿಂದ ರಾತ್ರಿ 9.30 ರವರೆಗೆ ಅರಮನೆಯ ಸುತ್ತಲಿನ ರಸ್ತೆಗಳಲ್ಲಿ ಅರಮನೆಯ ಸುತ್ತಲಿನ ರಸ್ತೆಗಳಲ್ಲಿ ಜೆಎಸ್‌ಎಸ್‌ ವೃತ್ತ- ಕುಸ್ತಿ ಅಖಾಡ ಜಂಕ್ಷನ್‌- ಬಿಎನ್‌ ರಸ್ತೆ- ಹಾರ್ಡಿಂಜ್‌ ವೃತ್ತ- ಎವಿ ರಸ್ತೆ- ಹಳೆಪ್ರತಿಮೆ ವೃತ್ತ- ಎವಿ ರಸ್ತೆ- ಕೆ.ಆರ್‌. ವೃತ್ತ- ನ್ಯೂ ಎಸ್‌ಆರ್‌ ರಸ್ತೆ- ಪಾಠಶಾಲಾ ವೃತ್ತ- ಚಾಮರಾಜ ರಸ್ತೆ- ಜೆಎಸ್‌ಎಸ್‌ ವೃತ್ತ ಈ ರಸ್ತೆಗಳಲ್ಲಿ ಅರಮನೆಯನ್ನು ಮದ್ಯಬಿಂದುವನ್ನಾಗಿ ಪರಿಗಣಿಸಿ ಗಡಿಯಾರದ ಮುಳ್ಳು ಸುತ್ತುವ ದಿಕ್ಕಿಗೆ ವಿರುದ್ಧ ದಿಕ್ಕಿನಲ್ಲಿ ವಾಹನಗಳು ಸಂಚರಿಸುವಂತೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

vehicles diverted to different roads in mysore as dasara celebrations begins

ವಾಹನಗಳ ನಿಲುಗಡೆ ನಿಷೇಧ

ಅ.28 ರಿಂದ ಅ.8 ರವರೆಗೆ ಪ್ರತಿದಿನ ಮಧ್ಯಾಹ್ನ 3 ರಿಂದ ರಾತ್ರಿ 9.30 ರವರೆಗೆ ಎಸ್‌.ಆರ್‌. ರಸ್ತೆಯಲ್ಲಿ ಕೆ.ಆರ್‌. ವೃತ್ತದಿಂದ ಬಸವೇಶ್ವರ ವೃತ್ತದವರೆಗೆ, ಪುರಂದರ ರಸ್ತೆಯಲ್ಲಿ ನಗರ ಪಾಲಿಕೆ ವೃತ್ತದಿಂದ ಬಿ.ಎನ್‌. ರಸ್ತೆ ಜಂಕ್ಷನ್‌ವರೆಗೆ, ಬಿ.ಎನ್‌. ರಸ್ತೆಯಲ್ಲಿ ಜೆಎಸ್‌ಎಸ್‌ ವೃತ್ತದಿಂದ ಹಾರ್ಡಿಂಜ್‌ ವೃತ್ತದವರೆಗೆ, ಎ.ವಿ. ರಸ್ತೆಯಲ್ಲಿ ಹಾರ್ಡಿಂಜ್‌ ವೃತ್ತದಿಂದ ಕೆ.ಆರ್‌. ವೃತ್ತದವರೆಗೆ, ಅಶೋಕ ರಸ್ತೆಯಲ್ಲಿ ನೆಹರು ವೃತ್ತದಿಂದ ಮಹಾವೀರ ವೃತ್ತದವರೆಗೆ, ಅಶೋಕ ರಸ್ತೆಯಲ್ಲಿ ಮಹಾವೀರ ವೃತ್ತದಿಂದ ಜಯಚಾಮರಾಜ ವೃತ್ತದವರೆಗೆ ಹಾಗೂ ಬಲರಾಮ ದ್ವಾರದ ಮುಂಭಾಗ ಇರುವ ಖಾಲಿಸ್ಥಳ ಸೇರಿದಂತೆ, ಫೌಂಟೇನ್‌ ವೃತ್ತದಿಂದ ಮಿಲೇನಿಯಂ ವೃತ್ತದವರೆಗೆ, ವಸ್ತುಪ್ರರ್ದಶನದ ಮುಂಭಾಗದ ಟ್ಯಾಂಕ್‌ ಬಂಡ್‌ ರಸ್ತೆಯಲ್ಲಿ ಬಿಎನ್‌ ರಸ್ತೆ ಜಂಕ್ಷನಿಂದ ಶಾಲಿವಾಹನ (ಮೃಗಾಲಯದ ರಸ್ತೆ) ರಸ್ತೆ ಜಂಕ್ಷನ್‌ವರೆಗೆ, ಇಟ್ಟಿಗೆಗೂಡಿನ ಹೊಸ ಬೀದಿ 5ನೇ ತಿರುವು ರಸ್ತೆಯಲ್ಲಿ ಶಾಲಿವಾಹನ (ಮೃಗಾಲಯದ ರಸ್ತೆ) ರಸ್ತೆ ಜಂಕ್ಷನ್‌ನಿಂದ ವಸ್ತು ಪ್ರರ್ದಶನದ ಪೂರ್ವ ದ್ವಾರದವರೆಗೆ, ಮಾನಸರ ರಸ್ತೆಯಲ್ಲಿ ವಾಣಿವಿಲಾಸ ರಸ್ತೆ ಜಂಕ್ಷನ್‌ನಿಂದ ಲೋಕರಂಜನ್‌ರಸ್ತೆ ಜಂಕ್ಷನ್‌ವರೆಗೆ, ಮಲೈ ಮಹದೇಶ್ವರ ರಸ್ತೆಯಲ್ಲಿ ಬಿ.ಎನ್‌.ರಸ್ತೆ ಜಂಕ್ಷನ್‌ನಿಂದ (ಛತ್ರಿಮರ) ಪೂರ್ವಕ್ಕೆ ಚನ್ನಯ್ಯ ವೃತ್ತದವರೆಗೆ, ಸರ್ಕಾರಿ ಭವನದ ರಸ್ತೆಯಲ್ಲಿ, ಸರ್ಕಾರಿ ಭವನದ ದಕ್ಷಿಣ ದ್ವಾರದ ಜಂಕ್ಷನ್‌ನಿಂದ ದಕ್ಷಿಣಕ್ಕೆ ಹಾರ್ಡಿಂಜ್‌ ವೃತ್ತದವರೆಗೆ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.

Follow Us:
Download App:
  • android
  • ios