Asianet Suvarna News Asianet Suvarna News

ಸ್ವತಃ ಪ್ಲಾಸ್ಟಿಕ್ ಕಸ ಸಂಗ್ರಹಿಸಿ ಶ್ರಮದಾನ ಕಾರ್ಯಕ್ಕೆ ಚಾಲನೆ ನೀಡಿದ ಡಿಸಿ

ನಗರದಲ್ಲಿ ಮಹಾತ್ಮ ಗಾಂಧೀಜಿಯ 150 ನೇ ಜನ್ಮ ದಿನೋತ್ಸವದ ಗೌರವಾರ್ಥವಾಗಿ ಪ್ಲಾಸ್ಟಿಕ್ ಮುಕ್ತ ವಿಜಯಪುರ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಚಾಲನೆ| ವೈ.ಎಸ್ ಪಾಟೀಲ ಸತಃ ಪ್ಲಾಸ್ಟಿಕ್ ಕಸ ಸಂಗ್ರಹ ಶ್ರಮದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು| ಆನಂದ ಮಹಲ್ ಆವರಣದ ಕಟ್ಟಡ ವ್ಯಾಪ್ತಿ, ನಗರದ ಬಸ್ ನಿಲ್ದಾಣಗಳಲ್ಲಿ ಜಿಲ್ಲಾಧಿಕಾರಿಗಳು ಸ್ವತಃ ಪ್ಲಾಸ್ಟಿಕ್ ಕಸ ಸಂಗ್ರಹಿಸುವುದರ ಮೂಲಕ ಇತರರಿಗೂ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದರು| 
 

Plastic Free Vijayapur Campaign start at Saturday
Author
Bengaluru, First Published Sep 30, 2019, 3:00 PM IST

ವಿಜಯಪುರ(ಸೆ.30): ಮಹಾತ್ಮ ಗಾಂಧೀಜಿಯ 150 ನೇ ಜನ್ಮ ದಿನೋತ್ಸವದ ಗೌರವಾರ್ಥವಾಗಿ ಪ್ಲಾಸ್ಟಿಕ್ ಮುಕ್ತ ವಿಜಯಪುರ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಸತಃ ಪ್ಲಾಸ್ಟಿಕ್ ಕಸ ಸಂಗ್ರಹ ಶ್ರಮದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಶನಿವಾರ ಬೆಳಗ್ಗೆ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಆಶ್ರಯದಲ್ಲಿ ಪ್ಲಾಸ್ಟಿಕ್ ಮುಕ್ತ, ಕಸ ಮುಕ್ತ ಹಾಗೂ ಸ್ವಚ್ಛ ವಿಜಯಪುರ ನಿರ್ಮಾಣದ ಉದ್ದೇಶದೊಂದಿಗೆ ನಡೆದ ಪ್ಲಾಸ್ಟಿಕ್ ಕಸ ಸಂಗ್ರಹ ಶ್ರಮದಾನ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಸಂಗ್ರಹಿಸುವುದರ ಮೂಲಕ ಚಾಲನೆ ನೀಡಲಾಯಿತು. 

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣ, ನ್ಯಾಯವಾದಿಗಳ ಸಂಘದ ಕಚೇರಿ ಹಿಂಭಾಗ, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ವಾಹನಗಳ ಪಾರ್ಕಿಂಗ್ ಆವರಣದ ವ್ಯಾಪ್ತಿ, ಆನಂದ ಮಹಲ್ ಆವರಣದ ಕಟ್ಟಡ ವ್ಯಾಪ್ತಿ, ನಗರದ ಬಸ್ ನಿಲ್ದಾಣಗಳಲ್ಲಿ ಜಿಲ್ಲಾಧಿಕಾರಿಗಳು ಸ್ವತಃ ಪ್ಲಾಸ್ಟಿಕ್ ಕಸ ಸಂಗ್ರಹಿಸುವುದರ ಮೂಲಕ ಇತರರಿಗೂ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಮಹಾನಗರ ಪಾಲಿಕೆ ಆಯುಕ್ತ ಹರ್ಷ ಶಟ್ಟಿ, ಅಭಿಯಂತರ ಜಗದೀಶ ಸೇರಿದಂತೆ ಪಾಲಿಕೆ ಮತ್ತು ವಿವಿಧ ಇಲಾಖೆ ಸಿಬ್ಬಂದಿ ಮತ್ತು ಪೌರ ಕಾರ್ಮಿಕರೊಂದಿಗೆ ಪ್ಲಾಸ್ಟಿಕ್ ಕಸ ಸಂಗ್ರಹಿಸಿದರು. ಒಟ್ಟು ಒಂದು ಕ್ವಿಂಟಾಲ್‌ದಷ್ಟು ಪ್ಲಾಸ್ಟಿಕ್ ಕಸವನ್ನು ಬೆಳಗ್ಗೆಯಿಂದ ನಾಲ್ಕು ಗಂಟೆಗಳ ಅವಧಿಯಲ್ಲಿ ಕಸ ಸಂಗ್ರಹಿಸಿದರು. 

ಜಿಲ್ಲಾಧಿಕಾರಿ ಪಾಟೀಲ ಮಾತನಾಡಿ, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ವಾಹನಗಳ ಪಾರ್ಕಿಂಗ್ ಹತ್ತಿರದ ಸ್ಥಳ ಖಾಲಿ ಇರುವುದರಿಂದ ಮಲೀನವಾಗುತ್ತಿದ್ದು, ಈ ಸ್ಥಳವನ್ನು ಸಂಪೂರ್ಣ ಸ್ವಚ್ಛಗೊಳಿಸಿ ಸಮತಟ್ಟುಗೊಳಿಸುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಸಲಹೆ ನೀಡಿದರು. ಅದರಂತೆ ಪಾಲಿಕೆಯು ಸ್ಥಾಪಿಸಿರುವ ಪೇ ಆ್ಯಂಡ್ ಯೂಸ್ ಶೌಚಾಲಯದ ಸ್ವಚ್ಛತೆ ಮತ್ತು ಶುಲ್ಕದ ಬಗ್ಗೆ ಪರಿಶೀಲಿಸಿ, ಗಗನ್ ಮಹಲ್ ವ್ಯಾಪ್ತಿ ವಿವಿಧ ಮಾರಾಟಗಾರರು ನಿಯಮಾವಳಿ ಅನ್ವಯ ಬಳಸಬೇಕಾದ ಪ್ಲಾಸ್ಟಿಕ್ ಹೊರತುಪಡಿಸಿ ಇತರೆ ಪ್ಲಾಸ್ಟಿಕ್ ಬಳಸದಿರಲು ಸೂಚಿಸಿದರು. 

ಆನಂದ ಮಹಲ್ ಇಂಟರ್‌ಪೆಟೇಷನ್ ಕೇಂದ್ರವಾಗಿ ಅಭಿವೃದ್ಧಿಗೊಳಿಸುವ ಮುನ್ನ ಕಟ್ಟಡದಲ್ಲಿ ಪ್ರವೇಶ ಹಾಗೂ ಒಳ ಪ್ರವೇಶ ಮತ್ತು ಹೊರ ಪ್ರವೇಶಕ್ಕೆ ಗುರುತುಗಳು, ಆಂತರಿಕ ಸ್ವಚ್ಛತೆ, ಚಾವ ಣಿ ಮೇಲೆ ಬೆಳೆದ ಸಣ್ಣಪುಟ್ಟ ಸಸಿಗಳ ಕಟಾವಿಗೆ ಹಾಗೂ ಅಲ್ಲಿನ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದರು. 

ನಗರದ ಆನಂದ್ ಮಹಲ್ ಹತ್ತಿರ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಅವರೊಂದಿಗೆ ಜಿಲ್ಲಾಧಿಕಾರಿಗಳು ನಗರದ ವಿವಿಧ ವೃತ್ತಗಳಲ್ಲಿ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ನಿಯಮ ಬಾಹಿರವಾಗಿ ಅಳವಡಿಸಿರುವ ಪ್ಲೆಕ್ಷಗಳನ್ನು ತೆರವುಗೊಳಿಸ ಕುರಿತು ಚರ್ಚಿಸಿದರು.

ನಂತರ ನಗರದ ಬಸ್ ನಿಲ್ದಾಣದಲ್ಲಿ ಬೇಕರಿಗಳಲ್ಲಿ ಬಳಸಲಾಗುತ್ತಿರುವ ಪ್ಲಾಸ್ಟಿಕ್‌ಗಳ ಬಗ್ಗೆ ಪರಿಶೀಲಿಸಿ, ಕಾನೂನು ಉಲ್ಲಂಘಿಸಿ ಪ್ಲಾಸ್ಟಿಕ್ ಬಳಸಿದ್ದಲ್ಲಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. 
 

Follow Us:
Download App:
  • android
  • ios