Asianet Suvarna News Asianet Suvarna News

ಕೇಂದ್ರ ಸರ್ಕಾರ ಬಿದ್ದರೂ ಪರವಾಗಿಲ್ಲ, ಮಂದಿರ ಕಟ್ಟಿ: ಪೇಜಾವರ ಶ್ರೀ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಕೇಂದ್ರ ಸರ್ಕಾರ ತಕ್ಷಣ ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕು. ಒಂದು ವೇಳೆ ಸರ್ಕಾರ ಬಿದ್ದು ಹೋದರೂ ಪರವಾಗಿಲ್ಲ. ಇದರಿಂದ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಲಾಭವೇ ಆಗುತ್ತದೆ ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. 

Pejawar seer of udupi mutt suggests to pass ordinance on ram mandir
Author
Udupi, First Published Nov 24, 2018, 7:58 AM IST

ಉಡುಪಿ[ನ.24]: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಕೇಂದ್ರ ಸರ್ಕಾರ ತಕ್ಷಣ ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕು. ಒಂದು ವೇಳೆ ಸರ್ಕಾರ ಬಿದ್ದು ಹೋದರೂ ಪರವಾಗಿಲ್ಲ. ಇದರಿಂದ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಲಾಭವೇ ಆಗುತ್ತದೆ ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ರಾಮಮಂದಿರ ನಿರ್ಮಾಣಕ್ಕೆ ಪೂರಕವಾದ ನಿರ್ಣಯವನ್ನು ತೆಗೆದುಕೊಳ್ಳುವುದು ಇದು ಸಕಾಲವಾಗಿದೆ. ಕಾಂಗ್ರೆಸ್‌ ರಾಮಮಂದಿರ ನಿರ್ಮಾಣಕ್ಕೆ ಬೆಂಬಲ ವ್ಯಕ್ತಪಡಿಸುತ್ತಿಲ್ಲವಾದರೂ, ಚುನಾವಣೆ ಮುಂದಿರುವುದರಿಂದ, ನಿರ್ಣಯ ವಿರೋಧಿಸುವ ಧೈರ್ಯ ಅದಕ್ಕೆ ಇಲ್ಲ. ಒಂದು ವೇಳೆ ಕೇಂದ್ರ ಸರ್ಕಾರ ರಾಮಮಂದಿರ ನಿರ್ಮಾಣದ ಬಗ್ಗೆ ನಿರ್ಣಯವನ್ನು ತೆಗೆದುಕೊಂಡರೆ ದೇಶದ ಸಮಸ್ತ ಹಿಂದುಗಳೂ ಒಗ್ಗಟ್ಟಾಗುತ್ತಾರೆ, ಆದ್ದರಿಂದ ಕೇಂದ್ರ ಸರ್ಕಾರಕ್ಕೆ ಇದು ಒಳ್ಳೆಯ ಅವಕಾಶ ಎಂದಿದ್ದಾರೆ.

ಇದನ್ನೂ ಓದಿ: ‘17 ನಿಮಿಷದಲ್ಲಿ ಮಸೀದಿ ಕೆಡವಿದ್ದೇವು: ಸುಗ್ರಿವಾಜ್ಞೆಗೆ ಏಕಿಷ್ಟು ಸಮಯ’?

ವಾಜಪೇಯಿ ನೇತೃತ್ವದ ಸರ್ಕಾರ ಇದ್ದಾಗಲೂ ನಾನು ಇದೇ ಸಲಹೆ ಕೊಟ್ಟಿದ್ದೆ, ಅದಕ್ಕೆ ಅವರು ನಕ್ಕು, ನಮ್ಮ ಪಕ್ಷದ ಬಗ್ಗೆ ನಮಗಿಂತ ನಿಮಗೆ ಹೆಚ್ಚು ಕಾಳಜಿ ಇದೆ ಎಂದು ತಮಾಷೆ ಮಾಡಿದ್ದರು, ನಮ್ಮ ಮಾತನ್ನು ಅವರು ಪರಿಗಣಿಸಲಿಲ್ಲ ಎಂದು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: ರಾಮಮಂದಿರ ಸುಗ್ರೀವಾಜ್ಞೆಗೆ ಅಭ್ಯಂತರವಿಲ್ಲ: ಇಕ್ಬಾಲ್‌ ಅನ್ಸಾರಿ

ಸುಪ್ರೀಂ ಕೋರ್ಟ್‌ ರಾಮಮಂದಿರ ವಿಷಯದ ಬಗ್ಗೆ ತೀರ್ಪು ನೀಡುವುದಕ್ಕೆ ಕಾಲಾವಧಿಯನ್ನು ಘೋಷಿಸಲಿ. ಒಂದು ವೇಳೆ ಸುಪ್ರೀಂ ಕೋರ್ಟ್‌ನಿಂದ ತೀರ್ಮಾನ ಆಗದಿದ್ದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೇ ಈ ವಿಷಯವನ್ನು ಇತ್ಯರ್ಥ ಮಾಡುವುದಕ್ಕೆ ಅವಕಾಶ ಇದೆ, ಉಭಯ ಕಡೆಯವರನ್ನು ಕರೆದು ನ್ಯಾಯಾಲಯದ ಹೊರಗೆ ನಿರ್ಣಯ ಕೈಗೊಳ್ಳಬಹುದು ಅಥವಾ ಕೇಂದ್ರ ಸರ್ಕಾರ ಲೋಕಸಭೆ ಮತ್ತು ರಾಜ್ಯ ಸಭೆಗಳೆರಡರಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಬಹುಮತದಿಂದ ಶಾಸಕಾಂಗ ನಿರ್ಣಯವನ್ನು ತೆಗೆದುಕೊಳ್ಳಬಹುದು, ಸರ್ಕಾರಕ್ಕೆ ಬಹುಮತವೂ ಇದೆ, ಕಾಂಗ್ರೆಸ್‌ ಕೂಡ ಈಗ ವಿರೋಧಿಸುವುದಿಲ್ಲ ಅಥವಾ ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ರಾಮಮಂದಿರ ನಿರ್ಮಾಣಕ್ಕೆ ಅಗತ್ಯ ನಿರ್ಣಯ ಕೈಗೊಳ್ಳಬಹುದು ಎಂದು ಶ್ರೀಗಳು ಹೇಳಿದ್ದಾರೆ.

ಇದನ್ನೂ ಓದಿ: ರಾಮಮಂದಿರ ನಿರ್ಮಾಣಕ್ಕೆ ಬೇಗ ಸುಗ್ರೀವಾಜ್ಞೆ ಹೊರಡಿಸಿ: ಸಿ. ಎಂ. ಇಬ್ರಾಹಿಂ

ನಮಗೆ ರಾಜಕೀಯ ಪಕ್ಷ ಅಥವಾ ಚುನಾವಣೆಯ ಹಂಗಿಲ್ಲ. ಕೇಂದ್ರ ಸರ್ಕಾರ ರಾಮಮಂದಿರ ನಿರ್ಮಾಣದ ಬಗ್ಗೆ ಸರಿಯಾದ ನಿರ್ಣಯ ಕೈಗೊಳ್ಳುತ್ತದೆ ಎಂದು ಇದುವರೆಗೆ ಕಾದೆವು. ಆದರೆ ಸರ್ಕಾರ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ, ಆದ್ದರಿಂದ ಇದೀಗ ಸರ್ಕಾರಕ್ಕೆ ಒತ್ತಡ ಹೇರಲು ಸರಿಯಾದ ಕಾಲ, ಈ ಅವಕಾಶವನ್ನು ಬಿಡಬಾರದು ಎಂದು ಈ ಒತ್ತಾಯ ಮಾಡುತ್ತಿದ್ದೇವೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದರೆ.

Follow Us:
Download App:
  • android
  • ios