Asianet Suvarna News Asianet Suvarna News

ಪ್ಯಾರಮೋಟರಿಂಗ್‌, ಹಾಟ್‌ ಬಲೂನ್‌ ಏರ್‌ ಶೋಗೆ ಚಾಲನೆ

ಮೈಸೂರು ದಸರಾ ಮಹೋತ್ಸವ ಅಂಗವಾಗಿ ಭಾನುವಾರ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪ್ಯಾರಮೋಟರಿಂಗ್‌ ಹಾಗೂ ಹಾಟ್‌ ಬಲೂನ್‌ ಏರ್‌ ಷೋ ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣಚಾಲನೆ ನೀಡಿದ್ದಾರೆ.

Paramotoring hot balloon air show in mysore
Author
Bangalore, First Published Oct 7, 2019, 10:08 AM IST

ಮೈಸೂರು(ಅ.07): ಮೈಸೂರು ದಸರಾ ಮಹೋತ್ಸವ ಅಂಗವಾಗಿ ಭಾನುವಾರ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪ್ಯಾರಮೋಟರಿಂಗ್‌ ಹಾಗೂ ಹಾಟ್‌ ಬಲೂನ್‌ ಏರ್‌ ಷೋ ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ವಿ ಸೋಮಣ್ಣ ಅವರು ಚಾಲನೆ ನೀಡಿದರು.

ಚಾಲನೆ ನೀಡಿ ಮಾತನಾಡಿದ ಅವರು ದಸರಾ ಜಂಬೂಸವಾರಿಗೆ ಒಂದು ದಿನ ಮಾತ್ರ ಬಾಕಿ ಇದ್ದು, ಈ ಸಂದರ್ಭದಲ್ಲಿ ಪ್ಯಾರಮೋಟರಿಂಗ್‌ ಸಾಹಸ ಕ್ರೀಡಾ ಪ್ರದರ್ಶನ ಹಾಗೂ ಹಾಟ್‌ ಬಲೂನ್‌ ಶೋ ಮಕ್ಕಳು ಹಾಗೂ ಪ್ರವಾಸಿಗರ ಆಕರ್ಷಣೆಯನ್ನು ಹೆಚ್ಚಿಸಲಿದೆ ಎಲ್ಲರೂ ಈ ಸಾಹಸ ಕ್ರೀಡೆಯನ್ನು ಕಣ್ತುಂಬಿಕೊಳ್ಳಿ ಎಂದು ತಿಳಿಸಿದರು.

ಸತತ 8ನೇ ಬಾರಿ ಅರ್ಜುನ ಮೇಲೆ ಚಿನ್ನದ ಅಂಬಾರಿ

ದೇಶದ ಹಲವಾರು ಭಾಗಗಳಿಂದ ತರಬೇತಿ ಪಡೆದವರು ಪ್ಯಾರಮೋಟರಿಂಗ್‌ ಸಾಹಸ ಮಾಡಲಿದ್ದು, ಇದು ಮೊದಲ ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸಿದೆ. ನಾಳೆ ಹಾಗೂ ನಾಡಿದ್ದು ಕೂಡ ಈ ಪ್ರದರ್ಶನವಿದ್ದು ಎಲ್ಲ ಸಾರ್ವಜನಿಕರು ಇದರ ವೀಕ್ಷಣೆ ಮಾಡಬಹುದು ಎಂದು ಅವರು ಹೇಳಿದರು.

ಜಂಬೂಸವಾರಿಯಲ್ಲಿ ಆನೆಗಳಿಗೆ ಕುಸುರೆ ಆಹಾರ

ದಸರಾ ಹಬ್ಬದ ಅಂತಿಮ ಹಂತದ ಎಲ್ಲಾ ಕಾರ್ಯ ಕೆಲಸಗಳು ಮುಗಿದಿದ್ದು, ಇಂದಿನಿಂದ ಪ್ರವಾಸಿಗರ ಸಂಖ್ಯೆ ಅಧಿಕವಾಗಲಿದ್ದು, ಸುಮಾರು 25 ಸಾವಿರ ಪೋಲೀಸ್‌ ಸಿಬ್ಬಂದಿ ಈಗಾಗಲೇ ಸೂಕ್ತ ಬಂದೂಬಸ್ತ್‌ ಮಾಡಿಕೊಂಡಿದ್ದು ಯಾವುದೇ ಲೋಪದೋಷವಾಗದೇ ಯಶಸ್ವಿಯಾಗಿ ಜಂಬೂ ಸವಾರಿ ನಡೆಯಲಿದೆ ಎಂದು ಅವರು ತಿಳಿಸಿದರು.

'ಚಂದನ್ ಶೆಟ್ಟಿಯಿಂದ ನನ್ನ ಬಿಪಿ, ಶುಗರ್ ಹೆಚ್ಚಾಗಿದೆ'

ಈ ಸಂದರ್ಭದಲ್ಲಿ ಹಾಟ್‌ ಬಲೂನ್‌ ಮೇಲೆ ಸಂಸದ ಪ್ರತಾಪ್‌ ಸಿಂಹ, ಸೋಮಣ್ಣ, ಕುಳಿತು ಮೇಲಿನಿಂದ ಮೈಸೂರನ್ನು ಕಣ್ತುಂಬಿಕೊಂಡರು.

ಕ್ರೀಡಾ ಉಪಸಮಿತಿಯ ಕಾರ್ಯದರ್ಶಿ ಜೆ. ಸುರೇಶ್‌, ಕಾರ್ಯಾಧ್ಯಕ್ಷ ಕೆ.ಎಲ್‌. ಸುಭಾಷ್‌ ಚಂದ್ರ, ಮುಖಂಡರಾದ ರಾಜೀವ್‌, ಅರ್ಪಿತಾ ಸಿಂಹ ಇದ್ದರು.

Follow Us:
Download App:
  • android
  • ios