Asianet Suvarna News Asianet Suvarna News

ದಸರಾ: ಸಾಂಸ್ಕೃತಿಕ ಕಾರ್ಯಕ್ರಮದ ಮೊದಲ ದಿನವೇ ಕುರ್ಚಿಗಳೆಲ್ಲ ಖಾಲಿ

ಮಡಿಕೇರಿ ದಸರಾ ಸಾಂಸ್ಕೃತಿ ಕಾರ್ಯಕ್ರಮಗಳ ಮೊದಲ ದಿನವೇ ಪ್ರೇಕ್ಷರ ಕೊರತೆ ಉಂಟಾಗಿತ್ತು. ದಸರಾ ಪ್ರಯುಕ್ತ ಬಹಳಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಮೊದಲ ದಿನವೇ ಕುರ್ಚಿಗಳು ಖಾಲಿ ಇದ್ದು, ಬೆರಳೆಣಿಕೆ ಸಂಖ್ಯೆಯಲ್ಲಿ ವೀಕ್ಷಕರಿದ್ದರು.

less number of audience in first day cultural programme in dasara
Author
Bangalore, First Published Oct 2, 2019, 12:01 PM IST

ಮಡಿಕೇರಿ(ಅ.02): ಮಡಿಕೇರಿ ದಸರಾ ಜನೋತ್ಸವ ಅಂಗವಾಗಿ ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಸೋಮವಾರ ರಾತ್ರಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಆರಂಭಗೊಂಡಿತು. ಆದರೆ ಮೊದಲ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ಬೆರಳೆಣಿಕೆ ಸಂಖ್ಯೆಯಲ್ಲಿ ಮಾತ್ರ ಪ್ರೇಕ್ಷಕರು ಕಂಡುಬಂದರು.

ಮಡಿಕೇರಿಯ ನಾಟ್ಯಾನಿಕೇತನ ಸಂಗೀತ ನೃತ್ಯ ಶಾಲೆಯ ತಂಡದಿಂದ ಗಜಾನನ ನೃತ್ಯ ಮತ್ತು ನೃತ್ಯ ರೂಪಕ, ಮಂಗಳೂರಿನ ಅಮೇಂಜಿಗ್‌ ಡಾನ್ಸ್‌ ಕಂಪೆನಿ ತಂಡದಿಂದ ನೃತ್ಯ ಪ್ರದರ್ಶನ, ವಿರಾಜಪೇಟೆ ಜಗನ್ಮೋಹನ ನಾಟ್ಯಾಲಯ ತಂಡದಿಂದ ಶಾಸ್ತ್ರೀಯ ನೃತ್ಯ ಪ್ರದರ್ಶನ, ಮೈಸೂರಿನ ಬದ್ರಿ ದಿವ್ಯಭೂಷಣ್‌ ತಂಡದಿಂದ ನಿಯೋ ಭರತನಾಟ್ಯಂ, ಮಡಿಕೇರಿಯ ತನುಶ್ರೀ ಮತ್ತು ತಂಡದಿಂದ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ ನಡೆಯಿತು.

ಇಂದಿನ ಕಾರ್ಯಕ್ರಮ

ಬುಧವಾರ ಮಕ್ಕಳ ದಸರಾ ನಡೆಯಲಿದ್ದು, ಸಂಜೆ 6 ಗಂಟೆಯಿಂದ ಮಕ್ಕಳ ತಂಡಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಝಿ ಚಾನೆಲ್‌ನ ಸರಿಗಮಪ ಸೀಸನ್‌ 18ರ ತಂಡದಿಂದ ಗಾನ ಸಂಭ್ರಮ, ಶ್ಯಾಂ ಜಾದೂಗರ್‌ ತಂಡದಿಂದ ಜಾದೂ ಪ್ರದರ್ಶನ ನಡೆಯಲಿದೆ.

Follow Us:
Download App:
  • android
  • ios