Asianet Suvarna News Asianet Suvarna News

ಉಪಚುನಾವಣೆ ನೀತಿ ಸಂಹಿತೆ ಜಾರಿ: ಈ ಬಾರಿ ದಸರಾಗೆ ಜನಪ್ರತಿನಧಿಗಳಿಲ್ಲ!

ದಸರಾ ಮೇಲೆ ಉಪಚುನಾವಣೆ ಕರಿನೆರಳು!| ಉಪಚುನಾವಣೆ ನೀತಿ ಸಂಹಿತೆ ಜಾರಿ| ಈ ಬಾರಿ ದಸರಾಗೆ ಜನಪ್ರತಿನಧಿಗಳಿಲ್ಲ!

Karnataka By Election Politicians May Not Take Part In Mysore Dasara Due To Code Of Conduct
Author
Bangalore, First Published Sep 22, 2019, 8:37 AM IST

ಮೈಸೂರು[ಸೆ.22]: ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಈವರೆಗೆ ಬಂದ ಆದೇಶದ ಪ್ರಕಾರ ಇಡೀ ಜಿಲ್ಲೆಗೆ ನೀತಿ ಸಂಹಿತೆ ಜಾರಿಯಲ್ಲಿದೆ ಎಂದು ಮೈಸೂರು ಜಿಲ್ಲಾ ಚುನಾವಣಾಧಿಕಾರಿ ಅಭಿರಾಮ್ ಜಿ.ಶಂಕರ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಂದಿನ ಆದೇಶದವರೆಗೆ ಜನಪ್ರತಿನಿಧಿಗಳು ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗುವಂತಿಲ್ಲ. ಮೈಸೂರು ದಸರಾ ಪೋಸ್ಟರ್‌ ಸೇರಿದಂತೆ ಎಲ್ಲಿಯೂ ಜನಪ್ರತಿನಿಧಿಗಳ ಭಾವಚಿತ್ರ ಬಳಸುವಂತಿಲ್ಲ. ಹುಣಸೂರು ಗ್ರಾಮೀಣ ದಸರಾ ಬಗ್ಗೆ ಇನ್ನಷ್ಟೇ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಮೈಸೂರು ದಸರಾಕ್ಕಾಗಿ ವಿನಾಯಿತಿ ಕೇಳಿದ್ದೇವೆ. ಚುನಾವಣಾ ಆಯೋಗದಿಂದ ಇನ್ನೆರಡು ದಿನದಲ್ಲಿ ಸಂಪೂರ್ಣ ಮಾಹಿತಿ ಸಿಗಲಿದೆ ಎಂದು ಹೇಳಿದರು.

ದಸರಾ ಕಾರ್ಯಕ್ರಮದಲ್ಲಿ ಬದಲಾವಣೆ ಇರೋಲ್ಲ. ಆದ್ರೆ ವಿನಾಯಿತಿ ಪಡೆದು ಕಾರ್ಯಕ್ರಮಗಳನ್ನ ನಡೆಸುತ್ತೇವೆ. ದಸರಾ ಉಪಸಮಿತಿಗಳ ಮೇಲೂ ನೀತಿ ಸಂಹಿತೆ ಜಾರಿಯಲ್ಲಿರಲಿದೆ. ಸದ್ಯಕ್ಕೆ ನೀತಿಸಂಹಿತೆ ಇಡೀ ಜಿಲ್ಲೆಗೆ ಜಾರಿಯಲ್ಲಿದೆ. ಮುಂದಿನ ಆದೇಶ ಬಂದ ನಂತರವಷ್ಟೆಮುಂದಿನ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್‌ ಹೇಳಿದರು.

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, ಅ.24ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.

 

Follow Us:
Download App:
  • android
  • ios