Asianet Suvarna News Asianet Suvarna News

'ದಸರಾಗೆ ಗೈರಾದ ಸಚಿವರಿಗೂ ಚಾಮುಂಡೇಶ್ವರಿ ಒಳ್ಳೇದು ಮಾಡ್ಲಿ'

ದಸರಾ ಮಹೋತ್ಸವಕ್ಕೆ ಗೈರಾಗಿರೋ ಸಚಿವರಿಗೂ ಚಾಮುಂಡೇಶ್ವರಿ ಒಳ್ಳೇದು ಮಾಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ದಸರೆಗೆ ಬಂದವರಿಗೆ ದೇವರು ಬೇಗ ಆರ್ಶಿವಾದ ಮಾಡುತ್ತಾರೆ. ಬಾರದೆ ಇರುವವರಿಗೆ ದೇವರು ನಿಧಾನವಾಗಿ ಆರ್ಶಿವಾದ ಮಾಡುತ್ತದೆ. ಇಲ್ಲಿ ಯಾರು ಬಂದರೂ ಯಾರು ಹೋದರು ಎಂಬುದು ಮುಖ್ಯವಲ್ಲ. ಇಲ್ಲಿ ಕೇವಲ ದಸರಾ ಮಾತ್ರ ಮುಖ್ಯ ಎಂದಿದ್ದಾರೆ.

goddess chamundeshwari may bless all says v somanna in mysore
Author
Bangalore, First Published Oct 4, 2019, 10:18 AM IST

ಮೈಸೂರು(ಅ.30): ದಸರಾ ಮಹೋತ್ಸವ ಕಾರ್ಯಕ್ರಮಗಳಿಗೆ ಬಂದ ಸಚಿವರಿಗೆ ಹಾಗೂ ಗೈರಾದ ಸಚಿವರಿಗೂ ಚಾಮುಂಡೇಶ್ವರಿ ಒಳ್ಳೆಯದು ಮಾಡಲಿ. ಬಂದವರಿಗೆ ಜಾಸ್ತಿ ಆಶೀರ್ವಾದ, ಬಾರದವರಿಗೆ ನಿಧಾನವಾಗಿ ಆಶೀರ್ವಾದ ಸಿಗುತ್ತದೆ ಎಂದು ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

ಮೈಸೂರು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗ ದಸರಾ ದರ್ಶನಕ್ಕೆ ಗುರುವಾರ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಇರುವುದೇ 17 ಜನ ಸಚಿವರು ಮಾತ್ರ. ಈವರೆಗಿನ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿ ಸೇರಿದಂತೆ 8 ಸಚಿವರು ಭಾಗವಹಿಸಿದ್ದಾರೆ. ಉಳಿದವರು ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗ್ರಾಮೀಣ, ಹಾಡಿ ಜನರ ದಸರಾ ದರ್ಶನ ಆರಂಭ.

ದಸರೆಗೆ ಬಂದವರಿಗೆ ದೇವರು ಬೇಗ ಆರ್ಶಿವಾದ ಮಾಡುತ್ತಾರೆ. ಬಾರದೆ ಇರುವವರಿಗೆ ದೇವರು ನಿಧಾನವಾಗಿ ಆರ್ಶಿವಾದ ಮಾಡುತ್ತದೆ. ಇಲ್ಲಿ ಯಾರು ಬಂದರೂ ಯಾರು ಹೋದರು ಎಂಬುದು ಮುಖ್ಯವಲ್ಲ. ಇಲ್ಲಿ ಕೇವಲ ದಸರಾ ಮಾತ್ರ ಮುಖ್ಯ. ಕೆಲವು ಸಚಿವರು ಕಾರ್ಯನಿಮಿತ್ತ ಬಂದಿಲ್ಲ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಸೋಮಣ್ಣ ಇಲ್ಲಿ ನೇಪಮಾತ್ರಕ್ಕೆ ಇರುವುದು, ಇದು ಜನರ ದಸರಾ ಎಂದು ಅವರು ಹೇಳಿದರು.

500 ಗೋಲ್ಡ್‌ ಕಾರ್ಡ್‌ ಮಾತ್ರ ಮಾರಾಟಕ್ಕೆ:

ಈ ಬಾರಿ ದಸರೆಗಾಗಿ 2 ಸಾವಿರ ಗೋಲ್ಡ್‌ ಕಾರ್ಡ್‌ ಮಾಡಲಾಗಿದ್ದು, ಇದರಲ್ಲಿ 500 ಗೋಲ್ಡ್‌ ಕಾರ್ಡ್‌ ಮಾತ್ರ ಮಾರಾಟಕ್ಕೆ ನೀಡಲಾಗಿದೆ. ಉಳಿದ ಕಾರ್ಡ್‌ಗಳನ್ನು ದೇಶ, ವಿದೇಶಗಳಿಂದ ಬರುವ ಗಣ್ಯರಿಗಾಗಿ ಉಳಿಸಿಕೊಳ್ಳಲಾಗಿದೆ. 1700 ಮಂದಿ ಗಣ್ಯರಿಗೆ ಆಸನ ವ್ಯವಸ್ಥೆ ಕಲ್ಪಿಸಬೇಕಿದೆ ಎಂದು ಸಚಿವ ವಿ. ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.

ಮೈಸೂರು: ನೇಪಾಳ, ಮುಕ್ತಿನಾಥ್‌ಗೆ ಎಸಿ ರೈಲು ಪ್ರವಾಸ

ಯುವ ದಸರಾ ಕಾರ್ಯಕ್ರಮಗಳಿಗೆ ಪಾಸ್‌ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಉಂಟಾದ ಗೊಂದಲ, ಮುಜುಗರದಿಂದಾಗಿ ಪಾಸ್‌ ವ್ಯವಸ್ಥೆಯನ್ನು ರದ್ದುಗೊಳಿಸಿ, ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬ ನಿಟ್ಟಿನಲ್ಲಿ ಪ್ರವೇಶ ಅವಕಾಶ ಕಲ್ಪಿಸಲಾಗಿದೆ. ಜಂಬೂ ಸವಾರಿ ಹಾಗೂ ಪಂಜಿನ ಕವಾಯತು ಪ್ರದರ್ಶನಕ್ಕೂ ಪಾಸ್‌ ವ್ಯವಸ್ಥೆ ರದ್ದುಗೊಳಿಸಬೇಕೆಂಬ ಚಿಂತನೆ ಇದೆ. ಆದರೆ, ಈ ವರ್ಷ ಅದು ಸಾಧ್ಯವಿಲ್ಲ. ಮುಂದಿನ ವರ್ಷವೂ ನಾನೇ ಇದ್ದರೇ ಈ ಬಗ್ಗೆ ಕ್ರಮ ವಹಿಸುತ್ತೇನೆ ಎಂದರು.

ಮೈಸೂರು: ಮಹಿಷ ದಸರಾ ರದ್ದತಿ ಖಂಡಿಸಿ ಗ್ರಾಮೀಣ ದಸರಾಗೆ ಅಡ್ಡಿ

ರಾಜಕಾರಣಿಗಳು, ಗಣ್ಯರು ಮಾತ್ರವಲ್ಲದೇ ಜನ ಸಾಮಾನ್ಯರು ಸಹ ದಸರೆ ನೋಡಲು ಅನುವಾಗುವಂತೆ ಪಾಸ್‌ ವ್ಯವಸ್ಥೆ ಮಾಡಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ. ಮೈಸೂರು ಅರಮನೆಯಲ್ಲಿ 26 ಸಾವಿರ ಹಾಗೂ ಪಂಜಿನ ಕವಾಯತು ಮೈದಾನಕ್ಕೆ 32 ಸಾವಿರ ಪಾಸ್‌ ವ್ಯವಸ್ಥೆ ಮಾಡಲಾಗುತ್ತಿದೆ. ಗೊಂದಲಕ್ಕೆ ಎಡೆ ಇಲ್ಲದೆ ಪಾಸ್‌ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

Follow Us:
Download App:
  • android
  • ios