Asianet Suvarna News Asianet Suvarna News

ಬಿಬಿಎಂಪಿ ಬಜೆಟ್ ನಿಂದ ಬೆಂಗಳೂರಿಗರ ನಿರೀಕ್ಷೆಗಳೇನು..?

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಬಜೆಟ್ ಮಂಡನೆಯಾಗುತ್ತಿದ್ದು, ಇದರಿಂದ ಬೆಂಗಳೂರಿಗರು ಹಲವು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಬೃಹತ್ ಮೊತ್ತದಲ್ಲಿ ಬಜೆಟ್ ಮಂಡನೆಯಾಗುವ ಸಾಧ್ಯತೆ ಇದೆ. 

Expectations Of Bengaluru Citizen from BBMP Budget 2019
Author
Bengaluru, First Published Feb 18, 2019, 11:16 AM IST

ಬೆಂಗಳೂರು :  ಬೃಹತ್' ಬಜೆಟ್ ಮಂಡನೆಗೆ ಬಿಬಿಎಂಪಿ ಸಿದ್ಧವಾಗಿದ್ದು,  ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ  ಹೇಮಲತಾ ಗೋಪಾಲಯ್ಯ  ಬಜೆಟ್ ಮಂಡನೆ ಮಾಡಲಿದ್ದಾರೆ. 

ಬಜೆಟ್  ಮಂಡನೆ ನಿಟ್ಟಿನಲ್ಲಿ ಹೇಮಲತಾ ಗೋಪಾಲಯ್ಯ ಆದಿಶಕ್ತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಆಗಮಿಸಿದರು.

ಅಂದಾಜು 10,600 ಕೋಟಿಯ ಬಜೆಟ್ ಮಂಡನೆ ಮಾಡುವ ಸಾಧ್ಯತೆ ಇದ್ದು,  ಭಾರೀ ಕುತೂಹಲ ಕೆರಳಿಸಿದೆ.   ಬಿಬಿಎಂಪಿ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳೆ ಬಜೆಟ್ ಮಂಡನೆ ಮಾಡುತ್ತಿದ್ದು, ಲೋಕಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಬಜೆಟ್ ತಯಾರಿ ಮಾಡಲಾಗಿದೆ. 

ಬಿಬಿಎಂಪಿಯ ಕೆಂಪೇಗೌಡ ಪೌರ ಸಭಾಂಗಣದಲ್ಲಿ  ಬಜೆಟ್ ಮಂಡನೆಯಾಗಲಿದ್ದು,  2018-19 ರಲ್ಲಿ 10132 ಕೋಟಿ ಬಜೆಟ್ ಮಂಡಿಸಿದ್ದ ಪಾಲಿಕೆ ಈ ಬಾರಿ ಅದಕ್ಕಿಂತಲೂ ಹೆಚ್ಚಿನ ಮೊತ್ತದಲ್ಲಿ ಮಂಡಿಸುವ ಸಾಧ್ಯತೆ ಇದೆ. 

  • ಬಿಬಿಎಂಪಿ ಬಜೆಟ್ ನಲ್ಲಿನ ನಿರೀಕ್ಷೆಗಳು
  • ಪಿಂಕ್ ಬೇಬಿ ಯೋಜನೆ ವರ್ಷವಿಡೀ ವಿಸ್ತರಣೆ..!
  • ಮಹಿಳೆಯರಿಗೆ ಕಿರು ಸಾಲ..!
  • ಪ್ರತಿ ವಾರ್ಡಿಗೆ ತಲಾ 20 ಮಹಿಳೆಯರಿಗೆ ಸ್ಕೂಟಿ..!
  • ಮಹಿಳೆಯರ ಅಭಿವೃದ್ಧಿ, ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಒತ್ತು 
  • ಡಾ ಶಿವಕುಮಾರ ಸ್ವಾಮೀಜಿ ಹೆಸರಲ್ಲಿ ಶಿಕ್ಷಣ ಸಂಸ್ಥೆಗೆ ಪ್ರಶಸ್ತಿ
  • ಭಾರೀ ಗಾತ್ರದ ಯೋಜನೆಗಳಿಗೆ ಈ ಬಾರಿ ಕಡಿವಾಣ..?
  • ವೈಜ್ಞಾನಿಕ ಮತ್ತು ವಾರ್ಡ್‌ ಮಟ್ಟದಲ್ಲಿ ತ್ಯಾಜ್ಯ ವಿಲೇವಾರಿಗೆ ಆದ್ಯತೆ
  • ಉದ್ಯಾನಗಳಲ್ಲಿ ಸಾವಯವ ಗೊಬ್ಬರವಾಗಿ ಮಾರ್ಪಾಡಿಸುವುದು, ಹಸಿರೀಕರಣ, ಮಾಲಿನ್ಯ ನಿಯಂತ್ರಣಕ್ಕೆ ಕ್ರಮ
  • ಟ್ರಾಫಿಕ್‌, ವಾಹನ ಪಾರ್ಕಿಂಗ್‌ ಸಮಸ್ಯೆ ಪರಿಹಾರ
  • ಬಿಬಿಎಂಪಿ ಶಾಲಾ ಕಾಲೇಜುಗಳ ಕಾಯಕಲ್ಪಕ್ಕೆ ಚಿಂತನೆ
  • ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗದಂತೆ ಕ್ರಮ
  • ಪಾಲಿಕೆ ಆಸ್ಪತ್ರೆಗಳಿಗೆ ಅತ್ಯಾಧುನಿಕ ಲೈಫ್‌ ಸಪೋರ್ಟರ್‌ ಆಂಬ್ಯುಲೆನ್ಸ್‌ಗಳ ಖರೀದಿ
  • 198 ವಾರ್ಡ್‌ಗಳಲ್ಲಿ ಡಯಾಲಿಸಿಸ್‌ ಕೇಂದ್ರ
  • ಹೊಸ ರೆಫೆರಲ್‌ ಆಸ್ಪತ್ರೆಗಳ ನಿರ್ಮಾಣ
  • ಹಾಲು, ಪೇಪರ್‌ ಹಾಕುವವರಿಗೆ ಪ್ರತಿವಾರ್ಡ್‌ನಲ್ಲಿ 50 ಸೈಕಲ್‌
  • ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌
  • 110 ಹಳ್ಳಿಗಳ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ
Follow Us:
Download App:
  • android
  • ios