ರಾಜ್ಯದ ಶ್ರೀಮಂತ ದೇಗುಲದಲ್ಲಿನ್ನು ವಸ್ತ್ರ ಸಂಹಿತೆ..!

ಹಲವು ಪ್ರಸಿದ್ಧ ದೇವಾಲಗಳಲ್ಲಿ ವಸ್ತ್ರ ಸಂಹಿತೆಯನ್ನು ಸನುಸರಿಸುವುದು ಎಲ್ಲರಿಗೂ ಗೊತ್ತು. ಜೀನ್ಸ್ ಪ್ಯಾಂಟ್, ಟೀಶರ್ಟ್‌ನಂತಹ ಮಾಡರ್ನ್ ಡ್ರೆಸ್ ಧರಿಸಿದರೆ ಹಲವು ದೇವಸ್ಥಾನಗಳಲ್ಲಿ ಒಳಗೆ ಪ್ರವೇಶ ಅನುಮತಿಸಿರುವುದಿಲ್ಲ. ಇದೀಗ ಇಂಹದ್ದೇ ವಸ್ತ್ರ ಸಂಹಿತೆ ಕರ್ನಾಟಕದ ದೇವಾಲಯದಲ್ಲೂ ಜಾರಿಯಾಗಲಿದೆ ಎಂಬ ಮಾತು ಕೇಳಿ ಬರ್ತಿದೆ. ಏನು..? ಯಾವಾಗಿಂದ..? ಇಲ್ಲಿ ಓದಿ.

dress code to be implemented in Kukke Shri Subrahmanya Temple

ಮಂಗಳೂರು(ಜ.14): ಹಲವು ಪ್ರಸಿದ್ಧ ದೇವಾಲಗಳಲ್ಲಿ ವಸ್ತ್ರ ಸಂಹಿತೆಯನ್ನು ಸನುಸರಿಸುವುದು ಎಲ್ಲರಿಗೂ ಗೊತ್ತು. ಜೀನ್ಸ್ ಪ್ಯಾಂಟ್, ಟೀಶರ್ಟ್‌ನಂತಹ ಮಾಡರ್ನ್ ಡ್ರೆಸ್ ಧರಿಸಿದರೆ ಹಲವು ದೇವಸ್ಥಾನಗಳಲ್ಲಿ ಒಳಗೆ ಪ್ರವೇಶ ಅನುಮತಿಸಿರುವುದಿಲ್ಲ. ಇದೀಗ ಇಂಹದ್ದೇ ವಸ್ತ್ರ ಸಂಹಿತೆ ಕರ್ನಾಟಕದ ದೇವಾಲಯದಲ್ಲೂ ಜಾರಿಯಾಗಲಿದೆ ಎಂಬ ಮಾತು ಕೇಳಿ ಬರ್ತಿದೆ.

ರಾಜ್ಯದ ಶ್ರೀಮಂತ ದೇಗುಲ ಕುಕ್ಕೆ ಸುಬ್ರಮಣ್ಯದಲ್ಲಿ ವಸ್ತ್ರಸಂಹಿತೆ ಜಾರಿಯಾಗಲಿದೆ ಎನ್ನಲಾಗುತ್ತಿದೆ. ಕುಕ್ಕೆಗೆ ಆಗಮಿಸುವ ಕೆಲ ಭಕ್ತರ ಉಡುಪಿನ ಬಗ್ಗೆ ವಿಶ್ವಹಿಂದೂ ಪರಿಷತ್ -ಬಜರಂಗದಳ ಅಕ್ಷೇಪ ವ್ಯಕ್ತಪಡಿಸಿದ್ದು, ಕುಕ್ಕೆ ದೇಗುಲದಲ್ಲಿ ವಸ್ತ್ರಸಂಹಿತೆ ಜಾರಿಗೆ ವಿಎಚ್‌ಪಿ ಹಾಗೂ ಬಜರಂಗದಳ ಆಗ್ರಹಿಸಿದೆ.

ಮಂಗಳೂರು ಗಲಭೆ ಬಗ್ಗೆ ಸಮಗ್ರ ದಾಖಲೆ: ಪೊಲೀಸ್‌ ಕಮಿಷನರ್‌ ಡಾ.ಹರ್ಷ

ಕುಕ್ಕೆ ಸುಬ್ರಮಣ್ಯದ ಆಡಳಿತಾಧಿಕಾರಿಗೆ ಸುಬ್ರಮಣ್ಯದ ವಿಎಚ್‌ಪಿ ಹಾಗೂ ಬಜರಂಗದಳ ಮನವಿ ಮಾಡಿದ್ದು, ಇತ್ತೀಚಿನ ದಿನಗಳಲ್ಲಿ ಭಕ್ತರು ಡ್ರೆಸ್ ಕೋಡ್ ಇಲ್ಲದೇ ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ಇದರಿಂದ ಭಕ್ತಿ ಭಾವದಿಂದ ಬರುವ ಭಕ್ತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ.

ದ.ಕ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಭೇಟಿ ಸಂದರ್ಭ ಹಿಂದೂ ಸಂಸ್ಕೃತಿಯ ಉಡುಗೆಯನ್ನು ಕಡ್ಡಾಯವಾಗಿ ಧರಿಸುವ ಬಗ್ಗೆ ಮನವಿ ಮಾಡಲಾಗಿದೆ. ಈ ರೀತಿಯ ವಸ್ತ್ರ ಸಂಹಿತೆ ಪಾಲಿಸುವ ನಿಯಮ ಹಲವು ದೇಗುಲಗಳಲ್ಲಿ ಜಾರಿಯಲ್ಲಿದೆ. ಕೇರಳದ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನ, ಗುರುವಾಯೂರು ಕೃಷ್ಣ ದೇವಾಲಯ, ತಮಿಳುನಾಡು ದಕ್ಷಿಣ ಭಾಗದ ಬಹುತೇಕ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆಯನ್ನು ಅನುಸರಿಸಲಾಗುತ್ತದೆ.

ನ್ಯಾಯಾಲಯದಲ್ಲಿ ಡ್ರೆಸ್ ಕೋಡ್ ಕಡ್ಡಾಯ

Latest Videos
Follow Us:
Download App:
  • android
  • ios