Asianet Suvarna News Asianet Suvarna News

ಸಂತ್ರಸ್ತರ ವಿದ್ಯುತ್ ಟಿಸಿಗಳ ದುರಸ್ತಿ ಯಾವಾಗ?

ಪ್ರವಾಹ ಬಂದು ರೈತರ ಜೀವನ ದುಸ್ತರವಾಗಿ ಸುಧಾರಿಕೊಳ್ಳುವ ಹೊತ್ತಿನಲ್ಲಿಯೇ ವಿದ್ಯುತ್ ಟ್ರಾನಪಾರ್ಮ್‌ಗಳ ದುರಸ್ತಿಯಾಗದೇ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ| ತಾಲೂಕಿನ ಕೃಷ್ಣಾ ನದಿ ತೀರದ ಸುಮಾರು 23 ಗ್ರಾಮಗಳಲ್ಲಿ ವಿದ್ಯುತ್ ಕಂಬ ಮತ್ತು ಟ್ರಾನಪಾರ್ಮ್‌ಗಳು ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿವೆ| ಇದರಿಂದ ಹೆಸ್ಕಾಂ ಇಲಾಖೆಯ ಸುಮಾರು 25 ಕೋಟಿ ಮೌಲ್ಯದ ಪರಿಕರಗಳು ಹಾಳಾಗಿವೆ|  

Did Not Repair TC in Flood Affected Area in Athani Taluk
Author
Bengaluru, First Published Sep 30, 2019, 1:05 PM IST

ಅಥಣಿ(ಸೆ.30): ಪ್ರವಾಹ ಬಂದು ರೈತರ ಜೀವನ ದುಸ್ತರವಾಗಿ ಸುಧಾರಿಕೊಳ್ಳುವ ಹೊತ್ತಿನಲ್ಲಿಯೇ ವಿದ್ಯುತ್ ಟ್ರಾನಪಾರ್ಮ್‌ಗಳ ದುರಸ್ತಿಯಾಗದೇ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅಥಣಿ ತಾಲೂಕಿನ ಕೃಷ್ಣಾ ನದಿ ತೀರದ ಸುಮಾರು 23 ಗ್ರಾಮಗಳಲ್ಲಿ ವಿದ್ಯುತ್ ಕಂಬ ಮತ್ತು ಟ್ರಾನಪಾರ್ಮ್‌ಗಳು ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿ ಹೆಸ್ಕಾಂ ಇಲಾಖೆಯ ಸುಮಾರು 25 ಕೋಟಿ ಮೌಲ್ಯದ ಪರಿಕರಗಳು ಹಾಳಾಗಿದ್ದು, ನದಿ ತೀರದ ಜನರು ಮೇಣದಬತ್ತಿ ಬೆಳಕಿನಲ್ಲಿ ರಾತ್ರಿ ಕಳೆಯಬೇಕಾದ ಪರಿಸ್ಥಿತಿ ಅನಿವಾರ್ಯವಾಗಿದೆ. 

ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ

ಪ್ರವಾಹ ಬಂದು ಹೋಗಿ ಒಂದೂವರಿ ತಿಂಗಳು ಗತಿಸಿದರೂ ನದಿ ತೀರ ರೈತರಿಗೆ ಇನ್ನೂ ವಿದ್ಯುತ್ ಟ್ರಾನ್ಸಪಾಮ್ ಗರ್ಳು ದೊರಕದೇ ಅಥಣಿ ಹೆಸ್ಕಾಂ ಉಪವಿಭಾಗದ ಕಚೇರಿಗೆ ಅಲೆದಾಡುವುದು ಸಾಮಾನ್ಯವಾಗಿದೆ. 20 ದಿನಗಳಲ್ಲಿ ಎಲ್ಲ ದುರಸ್ತಿ ಕೆಲಸ ಮುಗಿಸಿ ಹಾಳಾದ ವಿದ್ಯುತ್ ತಂತಿ ದುರಸ್ತಿ ಮಾಡುವಾಗಿ ಹೇಳಿದ್ದ ಹೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿ ಸಕಾಲಕ್ಕೆ ಟ್ರಾನ್ಸಪಾರ್ಮ್‌ರ ನೀಡುತ್ತಿಲ್ಲ ಎಂದು ರೈತಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಹೆಸ್ಕಾಂ ಅಧಿಕಾರಿಗಳು ಯುದ್ಧೋಪಾದಿಯಲ್ಲಿ ದುರಸ್ತಿ ಕಾರ್ಯ ಮಾಡಿದರೂ ಇನ್ನೂ ಸಮಸ್ಯೆ ಬಗೆ ಹರಿಯುತ್ತಿಲ್ಲ. ರೈತಾಪಿ ಜನರಿಗೆ ತಮ್ಮ ಜಮೀನದಲ್ಲಿನ ಹಾಳಾದ ಪಂಪ್‌ಸೇಟ್‌ಗಳನ್ನು ಮತ್ತು ನೀರೆತ್ತುವ ಮೋಟರ್‌ಗಳನ್ನು ರಿಪೇರಿ ಮಾಡಿಕೊಂಡು ಬಂದರೂ ಹೆಸ್ಕಾಂ ಅಧಿಕಾರಿಗಳು ನಮಗೆ ರಿಪೇರಿ ಮಾಡಿ ಪೂರೈಸಬೇಕಾದ ಟ್ರಾನ್ಸಪಾರ್ಮ್‌ಗಳನ್ನು ಇನ್ನೂ ಪೂರೈಸದೇ ಇರುವುದರಿಂದ ತೊಂದರೆಯಾಗುತ್ತಿದೆ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ. 

ಟಿಸಿಗಳುಂಟು ಕೊಡುವುದು ಯಾವಾಗ?

ಸಾಕಷ್ಟು ಟಿಸಿಗಳು ಹೆಸ್ಕಾಂ ಆವರಣದಲ್ಲಿದ್ದು, ಅಥಣಿ ಹೆಸ್ಕಾಂ ಕಚೇರಿಯಲ್ಲಿ ಸಾಕಷ್ಟು ಟಿಸಿ ಬಂದಿಳಿದರೂ ಇದುವರೆಗೂ ಹಲವಾರು ರೈತರಿಗೆ ಹಳೆಯ ಹಾಳಾದ ಟಿಸಿ ಬದಲಿಗೆ ಹೊಸ ಟಿಸಿ ಶೀಘ್ರ ತಲುಪಿಸುವ ಕೆಲಸ ನಡೆದಿಲ್ಲ. ಹಾಳಾದ ಟಿಸಿ ರಿಪೇರಿ ಮಾಡವವರಿಲ್ಲ. ಹಾಳಾದ ಟಿಸಿಗಳನ್ನು ಕೇವಲ ಎರಡು ಮೂರು ದಿನಗಳಲ್ಲಿ ರಿಪೇರಿ ಮಾಡಿ ವಾಪಾಸ್ ಮಾಡಬಹುದು. ಆದರೆ, ರಿಪೇರಿ ಮಾಡುವರೇ ಗತಿಯಿಲ್ಲದೆ ಹೆಸ್ಕಾಂ ಕಚೇರಿಯ ಆವರಣದಲ್ಲಿ ರೈತರು ತಂದು ಇಟ್ಟಿರುವ ಸ್ಥಿತಿಯಲ್ಲೇ ಈಗಲೂ ಇವೆ. ಹೆಸ್ಕಾಂ ಅಧಿಕಾರಿಗೆ ಕೇಳಿದಾಗ ವಿದ್ಯುತ್ ಪರಿವರ್ತಕಗಳನ್ನು ಇಲ್ಲಿ ರಿಪೇರಿ ಮಾಡುವುದಿಲ್ಲ. ನಾವು ಇವುಗಳನ್ನು ಹಾವೇರಿಗೆ ಕಳುಹಿಸಿ ರಿಪೇರಿ ಮಾಡಿಸಿಕೊಂಡು ಬರುತ್ತೇವೆ ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ ಅಥಣಿ ಹೆಸ್ಕಾಂ ಉಪವಿಭಾಗದ ಮುಖ್ಯ ಅಭಿಯಂತರ ಶೇಕರ ಬಹುರೂಪಿ ಅವರು, ನದಿ ತೀರದ ಸುಮಾರು 23 ಗ್ರಾಮಗಳಲ್ಲಿ 25 ಕೋಟಿ ರುಪಾಯಿಯಷ್ಟು ವಿದ್ಯುತ್ ಪರಿಕರಗಳು ಹಾನಿ ಆಗಿವೆ. ನಮ್ಮ ಇಲಾಖೆ ಸಿಬ್ಬಂದಿ ರೈತರ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡುತ್ತಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿರುವುದರಿಂದ ಸ್ವಲ್ಪ ವಿಳಂಬವಾಗುತ್ತಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಪ್ರವಾಹದಲ್ಲಿ ಸುಮಾರು 2163 ಕ್ಕೂ ಮೇಲ್ಪಟ್ಟು ವಿದ್ಯುತ್ ಕಂಬಗಳು ಬಿದ್ದಿವೆ. ಕೇವಲ ಎರಡು ಮೂರು ದಿನಗಳಲ್ಲಿ ಅರ್ಧಕ್ಕಿಂತ ಹೆಚ್ಚು ವಿದ್ಯುತ್ ಕಂಬಗಳನ್ನು ಬದಲಾವಣೆ ಮಾಡಲಾಗಿದ್ದು, ಇನ್ನು ಕೇವಲ 638 ಕಂಬಗಳು ಬಾಕಿ ಉಳಿದಿವೆ ಮತ್ತು 1524 ವಿದ್ಯುತ್ ಟಿಸಿಗಳು ಹಾನಿಯಾಗಿವೆ. ಇವುಗಳಲ್ಲಿ 937 ಬದಲಾಯಿಸಿ ರೈತರಿಗೆ ಕೊಡಲಾಗಿದೆ. ಇನ್ನು 587 ಟಿಸಿಗಳನ್ನು ಕೊಡಬೇಕಾಗಿದೆ ಎಂದು ಹೇಳಿದ್ದಾರೆ. 

ಸರ್ಕಾರದ ಆದೇಶದ ಪ್ರಕಾರ ಸುಮಾರು 72 ಗಂಟೆಗಳಲ್ಲಿ ರೈತರಿಗೆ ಹಾಳಾಗಿರುವ ವಿದ್ಯುತ್ ಪರಿವರ್ತಕಗಳನ್ನು ಬದಲಾಯಿಸಕೊಡಬೇಕು. ಆದರೆ, ರೈತರು ಹಾಳಾದ ವಿದ್ಯುತ್ ಪರಿವರ್ತಕಗಳನ್ನು ತಂದು ಸುಮಾರು 20 ದಿನಗಳ ಹಿಂದೆಯೇ ವಿದ್ಯುತ್ ಸರಬರಾಜು ಕೇಂದ್ರದಲ್ಲಿ ಹಾಗೆಯೇ ಹೊರಗಡೆಗೆ ಇಟ್ಟಿದ್ದು, ಇವತ್ತಿನವರೆಗೂ ಅವರಿಗೆ ಮರಳಿ ವಿದ್ಯುತ್ ಪರಿವರ್ತಕಗಳು ಸಿಗದೆ ಇರುವುದು ಹಾಗೂ ಅವುಗಳಿಗಾಗಿ ದಿನನಿತ್ಯವೂ ತಮ್ಮ ಕೆಲಸ ಕಾಯಕವನ್ನು ಬಿಟ್ಟು ಹೆಸ್ಕಾಂ ಕಚೇರಿಗೆ ಅಲೆದಾಡುವುದು ಬೇಸರದ ಸಂಗತಿ ಎಂದು ರೈತಮುಖಂಡ ಮಹಾದೇವ ಮಡಿವಾಳ ಅವರು ಹೇಳಿದ್ದಾರೆ. 

ನಾನು ಇವತ್ತಿಗೆ 20 ದಿನದ ಹಿಂದೆ ನನ್ನ ಭಾಗದ ಹಾಳಾದ ವಿದ್ಯುತ್ ಪರಿವರ್ತಕವನ್ನು ತಂದು ಹೆಸ್ಕಾಂಗೆ ಒಪ್ಪಿಸಿದ್ದೇನೆ. ಆದರೂ ಈವರೆಗೂ ನನಗೆ ವಿದ್ಯುತ್ ಪರಿವರ್ತ ಕವನ್ನು ನೀಡಿಲ್ಲ. ನಾವು ಕುಟುಂಬ ಸಮೇತವಾಗಿ ಹೊಲಗಳಲ್ಲಿ ಇರುತ್ತೇವೆ. ಈ ವರೆಗೂ ನಮಗೆ ವಿದ್ಯುತ್ತ ಪರಿವರ್ತಕ ನೀಡದೆ ಇರುವುದರಿಂದ ನಾವು ದಿನಾಲೂ ಕತ್ತಲೆಯಲ್ಲೇ ಕಾಲ ಕಳೆಯುತ್ತಿದ್ದೇವೆ. ಮೊಬೈಲ್‌ಗಳಿಗೆ ಚಾರ್ಚ್ ಕೂಡ ಇಲ್ಲ ಎಂದು ಅಶ್ವಥ ಪಾಟೀಲ ಝುಂಜುರವಾಡದ ರೈ ತಿಳಿಸಿದ್ದಾರೆ.  

Follow Us:
Download App:
  • android
  • ios