Asianet Suvarna News Asianet Suvarna News

ಮಹಿಷ ಜಯಂತಿ ವಿಚಾರ : ಎಂಪಿ ಪ್ರತಾಪ ಸಿಂಹ ಬಂಧನಕ್ಕೆ ಒತ್ತಾಯ

ಪ್ರತಾಪ್‌ ಸಿಂಹ ತಾವೊಬ್ಬ ಜನಪ್ರತಿನಿಧಿ ಎಂಬುದನ್ನು ಮರೆತು ಮಹಿಷ ಜಯಂತಿ ಆಯೋಜಕರು ಹಾಗೂ ಪೊಲೀಸರ ವಿರುದ್ಧ ತೀರ ಕೆಳಮಟ್ಟದ ಪದಬಳಸಿ ಗೂಂಡಾ ವರ್ತನೆ ತೋರಿದ್ದಾರೆ ಎಂದು ದೂರಿದ್ದು, ಅವರ ಬಂಧನಕ್ಕೆ ಆಗ್ರಹಿಸಲಾಗಿದೆ.

Dalit Organisation Demands To Arrest MP Pratap Simha
Author
Bengaluru, First Published Oct 1, 2019, 12:51 PM IST

ಸಕಲೇಶಪುರ [ಅ.01]:  ಮೂಲನಿವಾಸಿಗಳ ಆಚರಣೆ ಹತ್ತಿಕ್ಕಲು ಮುಂದಾಗಿರುವ ಮೈಸೂರು ಸಂಸದ ಪ್ರತಾಪ್‌ ಸಿಂಹ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸೋಮವಾರ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ದಲಿತ ಮುಖಂಡರು ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಪ್ರತಿಭಟನಾಕಾರರು ಮಾತನಾಡಿ, ಮೈಸೂರಿನ ದಸರಾ ವೇಳೆ ಮೂಲನಿವಾಸಿಗಳು ಚಾಮುಂಡಿಬೆಟ್ಟದಲ್ಲಿ ಮಹಿಷಾಸುರ ದಸರಾ ಆಚರಣೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ಸ್ಥಳಕ್ಕೆ ಆಗಮಿಸಿದ ಸಂಸದ ಪ್ರತಾಪ್‌ ಸಿಂಹ ತಾವೊಬ್ಬ ಜನಪ್ರತಿನಿಧಿ ಎಂಬುದನ್ನು ಮರೆತು ಮಹಿಷ ಜಯಂತಿ ಆಯೋಜಕರು ಹಾಗೂ ಪೊಲೀಸರ ವಿರುದ್ಧ ತೀರ ಕೆಳಮಟ್ಟದ ಪದಬಳಸಿ ಗೂಂಡಾ ವರ್ತನೆ ತೋರಿದ್ದಾರೆ ಎಂದು ದೂರಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮೂಲನಿವಾಸಿಗಳ ಆಚರಣೆ ಹತ್ತಿಕ್ಕುವ ಮೂಲಕ ಸಾವಿರಾರು ವರ್ಷಗಳಿಂದ ಮರೆಮಾಚಿರುವ ಇತಿಹಾಸವನ್ನು ಶಾಶ್ವತವಾಗಿ ಹತ್ತಿಕ್ಕಲು ಪ್ರಯತ್ನಿಸಿ ರಾಜ್ಯದಲ್ಲಿ ಕೋಮುಗಲಭೆಗೆ ಕಾರಣರಾಗುತ್ತಿದ್ದಾರೆ. ಆದ್ದರಿಂದ, ಈ ಕೂಡಲೇ ಸಂಸದರನ್ನು ಬಂದಿಸಬೇಕು ಎಂದು ಆಗ್ರಹಿಸಿದ ಮನವಿಯನ್ನು ಉಪವಿಭಾಗಧಿಕಾರಿ ಕಚೇರಿ, ತಹಸೀಲ್ದಾರ್‌ ಮನೋಹರಿ ಅವರಿಗೆ ಸಲ್ಲಿಸಿದರು.

ಈ ವೇಳೆ ತಾಲೂಕು ದಲಿತ ಮುಖಂಡರಾದ ಕಾಡಪ್ಪ, ಜೈಭೀಮ್‌ ಮಂಜು, ಮಳಲಿ ಶಿವಣ್ಣ, ದೊಡ್ಡಯ್ಯ, ನಿರ್ವಾಣಯ್ಯ,ದೊಡ್ಡನಹಳ್ಳಿ ಈರಯ್ಯ, ನಲ್ಲುಳ್ಳಿ ಈರಯ್ಯ, ಕೋಮಾರಯ್ಯ, ಹಾನುಬಾಳ್‌ ಗೋಪಾಲ್‌, ಕೌಡಹಳ್ಳಿ ತಿಮ್ಮಯ ಇತರರು ಇದ್ದರು.

Follow Us:
Download App:
  • android
  • ios