Asianet Suvarna News Asianet Suvarna News

ಗಜೇಂದ್ರಗಡದಲ್ಲಿ ಅನಧಿಕೃತ ಅಂಗಡಿಗಳ ತೆರವು

ರೋಣ ರಸ್ತೆಯ ಪುರಸಭೆ ಬಯಲು ಜಾಗೆಯಲ್ಲಿ ಅತಿಕ್ರಮಣವಾಗಿ ಆರಂಭಿಸಿದ್ದ 20ಕ್ಕೂ ಅಧಿಕ ಅಂಗಡಿಗಳ ತೆರವು ಕಾರ್ಯಾಚರಣೆ| ಎಪಿಎಂಸಿ ಎದುರಿಗಿರುವ ಪುರಸಭೆಯ ಬಯಲು ಜಾಗೆಯ ವ್ಯಾಜ್ಯದ ಅರ್ಜಿ ನ್ಯಾಯಾಲಯದಲ್ಲಿದೆ|  ನಿಯಮದ ಅನುಸಾರವಾಗಿ ಇಲ್ಲಿ ಯಾವುದೇ ರೀತಿಯ ವಹಿವಾಟು ಹಾಗೂ ಅಂಗಡಿಗಳನ್ನು ಆರಂಭಿಸಲು ಅವಕಾಶವಿಲ್ಲ| ಆದರೆ ಕೆಲವರು ಅನಧಿಕೃತವಾಗಿ ತೆರೆದಿದ್ದ ಅಂಗಡಿಗಳನ್ನು ಸ್ಥಳಾಂತರಿಸುವಂತೆ ಪುರಸಭೆಯಲ್ಲಿ ಸಭೆ ನಡೆಸುವುದರ ಜೊತೆಗೆ ಕಾಲಾವಕಾಶ ನೀಡಿ ನೋಟಿಸ್‌ ನೀಡಲಾಗಿತ್ತು| 

Clearance of Unauthorized Shops in Gajendragada
Author
Bengaluru, First Published Oct 2, 2019, 9:11 AM IST

ಗಜೇಂದ್ರಗಡ(ಅ.2): ಇಲ್ಲಿನ ರೋಣ ರಸ್ತೆಯ ಪುರಸಭೆ ಬಯಲು ಜಾಗೆಯಲ್ಲಿ ಅತಿಕ್ರಮಣವಾಗಿ ಆರಂಭಿಸಿದ್ದ 20ಕ್ಕೂ ಅಧಿಕ ಅಂಗಡಿಗಳನ್ನು ಮಂಗಳವಾರ ಪುರಸಭೆ ಮುಖ್ಯಾಧಿಕಾರಿ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಹನಮಂತಮ್ಮ ನಾಯಕ ಅವರು, ಎಪಿಎಂಸಿ ಎದುರಿಗಿರುವ ಪುರಸಭೆಯ ಬಯಲು ಜಾಗೆಯ ವ್ಯಾಜ್ಯದ ಅರ್ಜಿಯು ಈಗಾಗಲೇ ನ್ಯಾಯಾಲಯದಲ್ಲಿದೆ. ಹೀಗಾಗಿ ನಿಯಮದ ಅನುಸಾರವಾಗಿ ಇಲ್ಲಿ ಯಾವುದೇ ರೀತಿಯ ವಹಿವಾಟು ಹಾಗೂ ಅಂಗಡಿಗಳನ್ನು ಆರಂಭಿಸಲು ಅವಕಾಶವಿಲ್ಲ. ಆದರೆ ಕೆಲವರು ಅನಧಿಕೃತವಾಗಿ ತೆರೆದಿದ್ದ ಅಂಗಡಿಗಳನ್ನು ಸ್ಥಳಾಂತರಿಸುವಂತೆ ಪುರಸಭೆಯಲ್ಲಿ ಸಭೆ ನಡೆಸುವುದರ ಜೊತೆಗೆ ಕಾಲಾವಕಾಶ ನೀಡಿ ನೋಟಿಸ್‌ ನೀಡಲಾಗಿತ್ತು. ಆದರೆ ಪುರಸಭೆ ನೀಡಿದ್ದ ನೋಟಿಸ್‌ಗೆ ಸ್ಪಂದಿಸದ ಹಿನ್ನಲೆಯಲ್ಲಿ ಇಲಾಖೆಯ ಸೂಚನೆ ಮೇರೆಗೆ ಇಂದು ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದರು. 

ಗಜೇಂದ್ರಗಡದಲ್ಲಿ ಅನಧಿಕೃತ ಅಂಗಡಿಗಳ ತೆರವು

ಈ ಸಂದರ್ಭದಲ್ಲಿ ಪುರಸಭೆ ಅಧಿಕಾರಿಗಳಾದ ಬಸವರಾಜ ಬಳಗಾನೂರು, ಪಿ.ಎನ್‌. ದೊಡ್ಡಮನಿ, ಸಿ.ಡಿ. ದೊಡ್ಡಮನಿ, ಎಂ.ಬಿ. ದೊಡ್ಡಮನಿ, ರಾಘು ಮಂತಾ, ನಜೀರಸಾಬ ಸಾಂಗ್ಲೀಕರ, ನೀಲಿ ಅಜ್ಜಪ್ಪ, ರಾಜು ನಿಶಾನದಾರ ಸೇರಿ ಪೌರಕಾರ್ಮಿಕರು ಇದ್ದರು.

Follow Us:
Download App:
  • android
  • ios