Asianet Suvarna News Asianet Suvarna News

ಆಲಮಟ್ಟಿಯಲ್ಲಿ ಸಿಎಂ ಯಡಿ​ಯೂ​ರ​ಪ್ಪಗೆ ಮನ​ವಿ​ಗಳ ಸುರಿ​ಮಳೆ

ಆಲಮಟ್ಟಿಯಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಅವಳಿ ಜಿಲ್ಲೆಯ ನಾನಾ ಸಂಘಟನೆಗಳ ಸದಸ್ಯರು ಮನವಿ ಸಲ್ಲಿಸಿದರು|  ಬಸವನಬಾಗೇವಾಡಿ ಜಿಲ್ಲಾ ಕೇಂದ್ರಕ್ಕೆ ಆಗ್ರಹಿಸಿ ಮನವಿ| ಆಲಮಟ್ಟಿ ಗ್ರಾಪಂ ವ್ಯಾಪ್ತಿಯಿರುವ ಆಲಮಟ್ಟಿಯಲ್ಲಿ ಒಟ್ಟಾರೆ 22 ಸಾವಿರ ಜನಸಂಖ್ಯೆ ಹೊಂದಿದ್ದು, ತಾಪಂ, ಜಿಪಂ ಕ್ಷೇತ್ರಗಳ ಕೇಂದ್ರ ಸ್ಥಾನ ಹೊಂದಿದೆ. ಹೀಗಾಗಿ ಆಲಮಟ್ಟಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೇಗೇರಿಸಬೇಕು| ಆಲಮಟ್ಟಿ-ನಿಡಗುಂದಿ ಸಂಯುಕ್ತ ತಾಲೂಕು ಕೇಂದ್ರವೆಂದು ಘೋಷಿಸಬೇಕು|

Bagalkot And Vijayapura District People Demands to CM BS Yediyurappa
Author
Bengaluru, First Published Oct 6, 2019, 11:14 AM IST

ಆಲಮಟ್ಟಿ(ಅ.5): ಆಲಮಟ್ಟಿಯ ಪ್ರವಾಸಿ ಮಂದಿರದೊಳಗೆ ಶನಿ​ವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರೇ ಸ್ವತಃ ಮನವಿ ಸ್ವೀಕ​ರಿ​ಸಿದರು. ಆದರೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಅವಳಿ ಜಿಲ್ಲೆಯ ನಾನಾ ಸಂಘಟನೆಗಳ ಸದಸ್ಯರು ಈ ಸಂದ​ರ್ಭ​ದಲ್ಲಿ ಮನವಿ ಸಲ್ಲಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ವಿಶ್ವ ಗುರು ಬಸವಣ್ಣ ಜನಿಸಿದ ಬಸವನಬಾಗೇವಾಡಿಯಲ್ಲಿ ಕೂಡಲಸಂಗಮದಂತೆ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. 12ನೇ ಶತಮಾನದಲ್ಲಿ ಅಗ್ರಹಾರಗಳಾಗಿದ್ದ ಮುತ್ತಗಿ, ಮನಗೂಳಿ, ಇಂಗಳೇಶ್ವರ (ಬಸವಣ್ಣನವರ ತಾಯಿಯ ಊರು), ಮಸಬಿನಾಳ (ಹಡಪದ ಅಪ್ಪಣ್ಣ ಜನಿಸಿದ ಗ್ರಾಮ), ಮಡಿವಾಳ ಮಾಚಿದೇವ ಜನಿಸಿದ ದೇವರಹಿಪ್ಪರಗಿ ಒಳಗೊಂಡು ಬಸವನಬಾಗೇವಾಡಿ ಪ್ರತ್ಯೇಕ ಪ್ರಾಧಿಕಾರ ರಚಿಸಬೇಕು ಎಂದು ರಾಷ್ಟ್ರೀಯ ಬಸವಸೈನ್ಯದ ಶಂಕರಗೌಡ ಬಿರಾದಾರ, ಶ್ರೀಕಾಂತ ಕೊಟ್ರಶೆಟ್ಟಿಸೇರಿದಂತೆ ಹಲವರು ಮನವಿ ಸಲ್ಲಿಸಿದರು.

ಬ.​ಬಾ​ಗೇ​ವಾಡಿ ಜಿಲ್ಲೆಗೆ ಆಗ್ರ​ಹ:

ಬಸವನಬಾಗೇವಾಡಿಯನ್ನು ಜಿಲ್ಲೆ ಎಂದು ಘೋಷಿಸಬೇಕು, ಜಮೀನಿಗೆ ಹೋಗುವ ದಾರಿ ಸಮಸ್ಯೆ ಬಗೆಹರಿಸಲು ತಹಸೀಲ್ದಾ​ರ್‌ಗೆ ಅಧಿಕಾರ ನೀಡಬೇಕು, ರೈತರ ಜಮೀನುಗಳನ್ನು ಬ್ರಿಟಿಷ್‌ ಆಳ್ವಿಕೆಯಲ್ಲಿ ಸರ್ವೆ ಮಾಡಿದ್ದು, ಅಲ್ಲಿಂದ ಇಲ್ಲಿಯವರೆಗೂ ಸಂಪೂರ್ಣ ಸರ್ವೆ ಕಾರ್ಯ ನಡೆಸಿಲ್ಲ, ಅದಕ್ಕಾಗಿ ಶೀಘ್ರ ಸರ್ವೆ ನಡೆಸಬೇಕು, ನೆರೆ ಹಾನಿ ಪರಿ​ಹಾ​ರಕ್ಕೆ ಕೇಂದ್ರ ನೀಡಿರುವ 1200 ಕೋಟಿ ಯಾವುದಕ್ಕೂ ಸಾಲಲ್ಲ ಎಂದು ಅಖಂಡ ಕರ್ನಾಟಕ ರೈತ ಸಂಘದ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಸಿದ್ರಾಮ ಅಂಗಡೇರಿ, ಸದಾಶಿವ ಬರಟಗಿ, ಅಶೋಕ ಹಾರಿವಾಳ ಸೇರಿ ಮನವಿ ಸಲ್ಲಿಸಿದರು.

ಆಲಮಟ್ಟಿ ಪಪಂಗೆ ಆಗ್ರಹ:

ಗ್ರಾಪಂ ವ್ಯಾಪ್ತಿಯಿರುವ ಆಲಮಟ್ಟಿಯಲ್ಲಿ ಒಟ್ಟಾರೆ 22 ಸಾವಿರ ಜನಸಂಖ್ಯೆ ಹೊಂದಿದ್ದು, ತಾಪಂ, ಜಿಪಂ ಕ್ಷೇತ್ರಗಳ ಕೇಂದ್ರ ಸ್ಥಾನ ಹೊಂದಿದೆ. ಹೀಗಾಗಿ ಆಲಮಟ್ಟಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೇಗೇರಿಸಬೇಕು, ಆಲಮಟ್ಟಿ-ನಿಡಗುಂದಿ ಸಂಯುಕ್ತ ತಾಲೂಕು ಕೇಂದ್ರವೆಂದು ಘೋಷಿಸಬೇಕು, ಯುಕೆಪಿ ಸಂತ್ರಸ್ತರ ಮಕ್ಕಳಿಗೆ ಸರ್ಕಾರಿ ಪದವಿ ಕಾಲೇಜು ಮಂಜೂರು ಮಾಡಬೇಕು, ಆಲಮಟ್ಟಿಗೆ ಹೈಟೆಕ್‌ ಬಸ್‌ ನಿಲ್ದಾಣ ನಿರ್ಮಿಸಬೇಕು, ರಸ್ತೆ ಸುಧಾರಣೆ ಸೇರಿ ಅನೇ​ಕ ಬೇಡಿಕೆಗಳ ಬಗ್ಗೆ ತಾಪಂ ಸದಸ್ಯ ಮಲ್ಲೇಶಿ ರಾಠೋಡ, ಎಸ್‌.ಎಂ. ಜಲ್ಲಿ, ಬಿ.ಜೆ. ನದಾಫ್‌, ರವಿ ಜಟಗಿಮಠ ಅನೇ​ಕರು ಮನವಿ ಸಲ್ಲಿ​ಸಿ​ದರು.

ಬಸವಣ್ಣನ ಮೂರ್ತಿ ನಿರ್ಮಿ​ಸಿ:

ವಲ್ಲಭಬಾಯಿ ಪಟೇಲರ ಪುತ್ಥಳಿಯಂತೆ ಬಸವನಬಾಗೇವಾಡಿಯಲ್ಲಿ ಅಣ್ಣ ಬಸವಣ್ಣನವರ 200 ಅಡಿ ಎತ್ತರದ ಪುತ್ಥಳಿ ನಿರ್ಮಿಸಬೇಕು. ಕೃಷ್ಣಾ ನ್ಯಾಯಾಧಿಕರಣ ಪ್ರಾಧಿಕಾರದ ಅಂತಿಮ ತೀರ್ಪು ಇನ್ನೂವರೆಗೂ ಗೆಜೆಟ್‌ ಹೊರಡಿಸಿಲ್ಲ, ಅದಕ್ಕಾಗಿ ಕೇಂದ್ರ ಸರ್ಕಾರ ಶೀಘ್ರ ಗೆಜೆಟ್‌ ಹೊರಡಿಸಲು ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಮಾಜಿ ಸಚಿವ ಎಸ್‌.ಕೆ. ಬೆಳ್ಳುಬ್ಬಿ ಮನವಿ ಸಲ್ಲಿಸಿದರು.

ಅರಣ್ಯ ದಿನಗೂಲಿಗಳ ಕಾಯಂಗೆ ಆಗ್ರಹ:

ದಿನಗೂಲಿ ನೌಕರರನ್ನು ಕಾಯಂಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ಅರಣ್ಯ ಇಲಾಖೆ ದಿನಗೂಲಿಗಳ ನೌಕರರ ಸಂಘದ ಆಶ್ರಯದಲ್ಲಿ ಹಲವು ದಿನಗೂಲಿಗಳು ವಿರೂಪಾಕ್ಷಿ ಮಾದರ, ಬಸವರಾಜ ಗುಡಿಮನಿ ನೇತೃತ್ವ​ದಲ್ಲಿ ಮನವಿ ಸಲ್ಲಿಸಿದರು.

ತಾಂಬಾ ಗ್ರಾಮಸ್ಥರ ಮನವಿ:

ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಯ ಕೆಂಭಾವಿ ಬಳಿ ಇರುವ ಜಾಕ್ವೆಲ್‌ಗೆ ಹೊಸ ಪಂಪ್‌ಹೌಸ್‌ ಅಳವಡಿಸಬೇಕು, ಇದರಿಂದ ಕಾಲುವೆಯ 97 ಕಿಮೀದಿಂದ 128 ಕಿಮೀವರೆಗೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗಲಿದೆ ಎಂದು ತಾಂಬಾ ಹಾಗೂ ಶಿರಕನಹಳ್ಳಿ ಗ್ರಾಮಸ್ಥರು, ಗುತ್ತಿ ಬಸವಣ್ಣ ಏತ ನೀರಾವರಿ ರೈತ ಹಿತರಕ್ಷಣಾ ಸಮಿತಿ ಸದಸ್ಯರು ಮನವಿ ಸಲ್ಲಿಸಿದರು.

3 ತಿಂಗಳಿಗೊಮ್ಮೆ ಕೆರೆ ಭರ್ತಿಗೆ ಆಗ್ರಹ:

ಆಲಮಟ್ಟಿ ಜಲಾಶಯದ ಕಾಲುವೆಯ ವ್ಯಾಪ್ತಿಯ ಕೆರೆಗಳಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಭರ್ತಿ ಮಾಡಬೇಕು, ರೈತರು ಬೆಳೆದ ಪ್ರತಿ ಬೆಳೆಗೂ ಬೆಂಬಲ ಬೆಲೆ ಘೋಷಿಸಬೇಕು ಎಂದು ನವದೆಹಲಿಯ ಭಾರತೀಯ ಕೃಷಿಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಎಂ. ರಾಮಚಂದ್ರ ಬೊಮ್ಮನಜೋಗಿ, ಸಾಬಣ್ಣ ಹೊಕ್ರಾಣಿ, ಸಂತೋಷ ಕಡಿ, ಮಾರುತಿ ಮಾದರ, ಲಕ್ಷ್ಮಣ ಚಳ್ಳಮರದ, ಹನುಮಂತ ನಡುವಿನಮನಿ ಮನವಿ ಸಲ್ಲಿ​ಸಿ​ದರು.

ಕರ್ನಾಟಕ ಗಾಂಧಿ ಹಡೇಕರ ಮಂಜಪ್ಪ ಜಯಂತಿಯನ್ನು ಸರ್ಕಾರದಿಂದ ಆಚರಿಸುವಂತೆ ಕರ್ನಾಟಕ ಗಾಂಧಿ ಹಡೇಕರ ಮಂಜಪ್ಪ ಪ್ರತಿಷ್ಠಾನ ಆಲಮಟ್ಟಿಯ ಪದಾಧಿಕಾರಿಗಳು ಮನವಿ ಅರ್ಪಿಸಿದರು. ಅತಿವೃಷ್ಟಿ​ಯಿಂದ ಬಾಧಿತವಾದ ಜಮಖಂಡಿಯ ತಾಲೂಕಿನ ಹಿರೇಪಡಸಲಿ, ನಿಡಗುಂದಿ ತಾಲೂಕಿನ ಮಸೂತಿ ಗ್ರಾಮವನ್ನು ಸ್ಥಳಾಂತರಿಸುವಂತೆ ಮನವಿ ಸಲ್ಲಿಸಿದರು.

ನ್ಯಾಯವಾದಿಗಳ ಮನವಿ:

ಯುಕೆಪಿ ಅಡಿ ರಾಜ್ಯ ಸರ್ಕಾರವೂ ಅನೇಕ ಗ್ರಾಮಗಳ, ಮನೆ, ಜಮೀನು ಸ್ವಾಧೀನ ಪಡಿಸಿಕೊಂಡಿದೆ. ಸಂತ್ರಸ್ತರು ಹೆಚ್ಚುವರಿ ಪರಿಹಾರ ಕೋರಿ ನ್ಯಾಯಾಯಲಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಂತಹ 10,000ಕ್ಕೂ ಹೆಚ್ಚು ಅರ್ಜಿಗಳು ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿವೆ. ಅದಕ್ಕಾಗಿ ಬಾಗಲಕೋಟೆಯಲ್ಲಿ ಹೆಚ್ಚುವರಿ ನ್ಯಾಯಾಲಯ ಸ್ಥಾಪಿಸಲು ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ ರಾಜ್ಯ ಹೈಕೋರ್ಟ್‌ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಸ್ಥಾಪಿಸಲು ಅನುಮತಿ ನೀಡಿದೆ. ಆದರೆ ಪ್ರಸ್ತಾವನೆ ಸರ್ಕಾರದ ಹಣಕಾಸು ಇಲಾಖೆ ಮುಂದಿದೆ. ಶೀಘ್ರ ಅನುಮೋದನೆ ನೀಡಬೇಕು ಬಾಗಲಕೋಟೆ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸಿ.ಬಿ. ಪಾಟೀಲ, ಶ್ರೀಶೈಲ ಹಾವರಗಿ ಸೇರಿ ಅನೇ​ಕರು ಮನವಿ ಸಲ್ಲಿಸಿದರು.

ಆದೇಶ ಹಿಂಪಡೆಯಿರಿ:

ಗದಗ ಬಳಿಯ ಕಪ್ಪತಗುಡ್ಡ ವನ್ಯಜೀವಿ ಅಭಯಾರಣ್ಯ ಮಾಡುವುದಾಗಿ ಸರ್ಕಾರ ಮುಂದಾಗಿದ್ದು, ಅಲ್ಲಿರುವ ಗ್ರಾಮಗಳ ಜನರ ಅಭಿಪ್ರಾಯ ಪಡೆಯದೇ ಆದೇಶಿಸಿದೆ. ಇದರಿಂದ ತಲೆತಲಾಂತರಗಳಿಂದ ಕಪ್ಪತಗುಡ್ಡ ವ್ಯಾಪ್ತಿಯ ಪ್ರದೇಶದಲ್ಲಿ ಉಳುಮೆ ಮಾಡುತ್ತಿರುವ ಬಗರಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ಹಾಗೂ ಪಟ್ಟಾನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಅಪ್ಪಣ್ಣಗೌಡ ದೇಸಾಯಿ, ಮಲ್ಲಮ್ಮ ಹೆಬಸೂರ, ಬಸವಣ್ಣೆಯ್ಯ ಹಿರೇಮಠ ಮನವಿ ಸಲ್ಲಿಸಿದರು.

ಸದಾಶಿವ ಆಯೋಗ ವರದಿ ಜಾರಿಗೆ ಒತ್ತಾಯಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ, ನಿಡಗುಂದಿ ಪಟ್ಟಣ ಹೊಸ ತಾಲೂಕು ಕೇಂದ್ರವಾಗಿದೆ, ಅಲ್ಲಿ ಎಲ್ಲಾ ಕಚೇರಿ ಆರಂಭಿಸುವಂತೆ ಬಿಜೆಪಿ ಮುಖಂಡ ಶಿವಾನಂದ ಅವಟಿ ನೇತೃತ್ವ​ದಲ್ಲಿ ಹಲವರು ಇದೇ ಸಂದರ್ಭದಲ್ಲಿ ಮನವಿ ಸಲ್ಲಿ​ಸಿ​ದರು.
 

Follow Us:
Download App:
  • android
  • ios