Asianet Suvarna News Asianet Suvarna News

ರೈತನ ನಿವೇಶನ ಗುಳುಂ : ಜೆಡಿಎಸ್ ಮುಖಂಡನ ವಿರುದ್ಧ FIR

ಜೆಡಿಎಸ್ ಮುಖಂಡರೋರ್ವರ ವಿರುದ್ಧ FIR ದಾಖಲಿಸಲು ACJM ಕೋರ್ಟ್ ಆದೇಶ ನೀಡಿದೆ. 

ACJM Court Orders To File FIR Against JDS Leader Satish
Author
Bengaluru, First Published May 17, 2019, 2:07 PM IST

ಬೆಂಗಳೂರು : ಅಕ್ರಮವಾಗಿ ಆಸ್ತಿ ಲಪಟಾಯಿಸಿದ ಹಿನ್ನೆಲೆ ಜೆಡಿಎಸ್ ಮುಖಂಡ ಸತೀಶ್ ವಿರುದ್ಧ ಎಫ್ ಐ ಆರ್ ದಾಖಲಿಸಲು ಬೆಂಗಳೂರಿನ ಎಸಿಜೆಎಂ ನ್ಯಾಯಾಲಯ ಆದೇಶಿಸಿದೆ. 

ರೈತ ಅಪ್ಪಣ್ಣ ಎನ್ನುವವರ ನಿವೇಶನವನ್ನು ಅವರಿಗೆ ತಿಳಿಯದ ಹಾಗೆ ಅವರ ಸಹಿ ಪಡೆದು ಮೋಹನ್ ಡೆವಲಪರ್ಸ್ ಗೆ ಮಾರಿದ್ದಾರೆ.  ಅಷ್ಟೇ ಅಲ್ಲದೇ ಅಪ್ಪಣ್ಣ ಹೆಸರನಲ್ಲಿ ಬ್ಯಾಂಕ್  ಖಾತೆ ತೆಗೆದು ಹಣವನ್ನು ಗುಳುಂ ಮಾಡಿದ್ದಾರೆ. 

ಬ್ಯಾಂಕ್ ಆಫ್ ಬರೋಡಾದಲ್ಲಿ ಅಕೌಂಟ್ ತೆರೆದ ಸತೀಶ್ 1.7 ಕೋಟಿ ಹಣಕ್ಕೆ ಪಂಗನಾಮ ಹಾಕಿದ್ದಾರೆ. ಈ ಬಗ್ಗೆ ಅವಲಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಎಸಿಜೆಎಂ ಕೋರ್ಟ್ ನಲ್ಲಿ ದೂರು ಸಲ್ಲಿಸಿದ್ದರು. 

ರೈತ ಅಪ್ಪಣ್ಣ ಬೆಂಗಳೂರು ಹೊರವಲಯದ ಕೋನ ದಾಸನಪುರದ ನಿವಾಸಿಯಾಗಿದ್ದು, ಖಾಸಗಿ ವಕೀಲರ ಮೂಲಕ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಸತೀಶ್ ವಿರುದ್ಧ FIR ದಾಖಲಿಸಲು ಆದೇಶ ನೀಡಿದೆ. 

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

Follow Us:
Download App:
  • android
  • ios