Asianet Suvarna News Asianet Suvarna News

SDA,FDA ಹುದ್ದೆಗಳ ನೇಮಕಾತಿಗೆ KPSC ಅರ್ಜಿ ಆಹ್ವಾನ

ಕರ್ನಾಟಕ ಲೋಕಸೇವಾ ಆಯೋಗವು ಎಸ್‌ಡಿಎ ಹಾಗೂ ಎಫ್‌ಡಿಎ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಇದಕ್ಕೆ ಬೇಕಾದ ಅರ್ಹತೆಗಳು ಸೇರಿದಂತೆ ಇನ್ನಿತರ ಮಾಹಿತಿ ಈ ಕೆಳಗಿನಂತಿದೆ.

KPSC Recruitment 2019 apply For FDA and SDA Posts
Author
Bengaluru, First Published Feb 12, 2019, 3:39 PM IST

ಬೆಂಗಳೂರು, (ಫೆ.12): ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಪ್ರಥಮ ದರ್ಜೆ ಹಾಗೂ ಹಿರಿಯ ಸಹಾಯಕರ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ ಅರ್ಜಿ ಆಹ್ವಾನಿಸಿದೆ.

219 ಪ್ರಥಮ ದರ್ಜೆ ಹುದ್ದೆ ಹಾಗೂ 494  ದ್ವಿತೀಯ ದರ್ಜೆ ಹುದ್ದೆಗಳ ನೇಮಕಾತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ನೇಮಕಾತಿ, ಅರ್ಜಿ ಹಾಕಿ

ಎಸ್‌ಡಿಎ ಹಾಗೂ ಎಫ್‌ಡಿಎ ಹುದ್ದೆಗಳಿಗೆ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಕೊನೆ ದಿನಾಂಕ 12-03-2019ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಕರ್ನಾಟಕ ತೋಟಗಾರಿಕೆ ಇಲಾಖೆಯಲ್ಲಿ ನೇರ ನೇಮಕಾತಿ

ವಿದ್ಯಾರ್ಹತೆ:
* ದ್ವಿತೀಯ ದರ್ಜೆ ಹುದ್ದೆಗೆ-ಪದವಿ ಪೂರ್ವ ಶಿಕ್ಷಣ ಮಂಡಳಿ ನಡೆಸುವ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಪೂರ್ಣಗೊಳಿಸಿರಬೇಕು.
*ಪ್ರಥಮ ದರ್ಜೆ ಹುದ್ದೆ: ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳಲ್ಲಿ ಪದವಿ ತೇರ್ಗಡೆಯಾಗಿರಬೇಕು.

ವಯೋಮಿತಿ: ಸಾಮಾನ್ಯ ಅಭ್ಯರ್ಥಿಗಳಿಗೆ ಕನಿಷ್ಟ 18 ಗರಿಷ್ಠ 35 ವರ್ಷ, ಪ್ರವರ್ಗ 2ಎ/2ಬಿ/3ಬಿ ಅಭ್ಯರ್ಥಿಗಳಿಗೆ 38 ವರ್ಷ, ಇನ್ನು ಎಸ್ಸಿ,ಎಸ್ಟಿ ಹಾಗೂ ಪ್ರವರ್ಗ 1 ಅಭ್ಯರ್ಥಿಗಳಿಗೆ 40 ವರ್ಷ ನಿಗದಿಪಡಿಸಲಾಗಿದೆ.

ನೇಮಕಾತಿ ಪ್ರಕ್ರಿಯೆ: ಆಯೋಗವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳ ಮೆರಿಟ್ ಮತ್ತು ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳನ್ವಯ ಹಾಗೂ ನೀಡಿರುವ ಆಧ್ಯತೆಯನ್ವಯ ಪ್ರಕಟಸಿರುವ ಹುದ್ದೆಗಳ ಸಂಖ್ಯೆಯ ಅನುಗುಣವಾಗಿ ಆಯ್ಕೆ ಪಟ್ಟಿ ತಯಾರಿಸಾಗುತ್ತದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

* ದ್ವಿತೀಯ ದರ್ಜೆ ವೇತನ ಶ್ರೇಣಿ: ರೂ.21400-500-22400-550-24600-600- 27000-650-29600-750-32600-850-36000-950-39800-1100-42000/-
* ಪ್ರಥಮ ದರ್ಜೆ ವೇತನ:  ರೂ. 27650-650-29600-750-32600-850-36000-950-39800-1100-46400-1250-52650/- 

ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳಿಗೆ 600, ಪ್ರವರ್ಗ 2ಎ/2ಬಿ/3ಬಿ ಅಭ್ಯರ್ಥಿಗಳಿಗೆ 300, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

* ಅರ್ಜಿ ಸಲ್ಲಿಸುವ ಕೊನೆ ದಿನಾಂಕ- 12-03-2019 
* ಶುಲ್ಕ ಪಾವತಿ ಕೊನೆ ದಿನಾಂಕ -13-03-2019 
* ಸ್ಪರ್ಧಾತ್ಮಕ ಪರೀಕ್ಷೆಗಳು ಏಪ್ರಿಲ್ 7,13 ಹಾಗೂ 28ರಂದು ನಡೆಯಲಿವೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
* ಮುಖ್ಯ ಕಚೇರಿಯ ಮಾಹಿತಿ ಕೇಂದ್ರ 080-30574957/ 30574901  
*ಪ್ರಾಂತೀಯ ಕಚೇರಿ ಮೈಸೂರು : 0821-2545956  

*ಪ್ರಾಂತೀಯ ಕಚೇರಿ ಬೆಳಗಾವಿ : 0831-2475345  

*ಪ್ರಾಂತೀಯ ಕಚೇರಿ ಕಲಬುರಗಿ  :  08472-227944  

*ಪ್ರಾಂತೀಯ ಕಚೇರಿ ಶಿವಮೊಗ್ಗ:  08182-228099 .

ಇನ್ನುಷ್ಟು ಮಾಹಿತಿಗಾಗಿ KPSC ವೆಬ್‌ಸೈಟ್‌ನಲ್ಲಿ ತಿಳಿಯಲು ಇಲ್ಲಿ ಕ್ಲಿಕ್ಕಿಸಿ.

Follow Us:
Download App:
  • android
  • ios