Asianet Suvarna News Asianet Suvarna News

ಚುನಾವಣೆಯಲ್ಲಿ 'ಆ ಒಂದು' ಭರವಸೆ ನೀಡಿದ ಪಕ್ಷಗಳಿಗೆಲ್ಲಾ ಭರ್ಜರಿ ಗೆಲುವು!

ಚುನಾವಣೆಗಳಲ್ಲಿ ಗೆಲುವು ಸಾಧಿಸಲು ಪಕ್ಷಗಳು ನಾನಾ ಕಸರತ್ತು ನಡೆಸುತ್ತವೆ, ಮತದಾರರ ಮನವೊಲಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತವೆ. ಮತದಾರರ ಮನ ಗೆಲ್ಲುವುದು ಕಷ್ಟವಾದರೂ ಅಸಾಧ್ಯವಲ್ಲ. ಹೀಗಿದ್ದರೂ ಕಳೆದ ಕೆಲ ವರ್ಷಗಳಿಂದ ನಡೆದ ಚುನಾವಣೆಯಲ್ಲಿ ಪಕ್ಷಗಳು ನೀಡಿದ ಭರವಸೆಗಳು ಬಹಳಷ್ಟು ಮಹತ್ವ ಪಡೆದಿದೆ. ಅದರಲ್ಲೂ 'ಆ ಒಂದು' ಭರವಸೆ ನೀಡಿದ ಪಕ್ಷಗಳು ಚುನಾವಣೆಗಳಲ್ಲಿ ಭರ್ಜರಿ ಗೆಲುವು ಸಾಧಿಸಿವವೆ. ಅಷ್ಟಕ್ಕೂ ಆ ಒಂದು ಭರವಸೆ ಯಾವುದು? ಇಲ್ಲಿದೆ ವಿವರ

Loan waiving promise in madhya pradesh chhattisgarh and rajasthan played a major role to get more voted
Author
New Delhi, First Published Dec 16, 2018, 3:17 PM IST

ನವದೆಹಲಿ[ಡಿ.16]: 2018ರಲ್ಲಿ ರೈತರು ನಡೆಸಿದ 2 ಅತಿದೊಡ್ಡ ಆಂದೋಲನಗಳಿಂದ ಬಹುದೊಡ್ಡ ಅಸ್ತ್ರವೊಂದು ಕಾಂಗ್ರೆಸ್ ಕೈ ಸೇರಿತ್ತು. ಕಾಂಗ್ರೆಸ್ ರೈತರ ಈ ಸಮಸ್ಯೆಯನ್ನೇ ಮುಂದಿಟ್ಟುಕೊಂಡು ರಾಜಸ್ಥಾನ, ತೆಲಂಗಾಣ ಹಾಗೂ ಮಿಜೋರಂ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿತು. ಇಷ್ಟೇ ಅಲ್ಲದೇ, ಚುನಾವಣೆಗಳಲ್ಲಿ ಒಂದು ವೇಳೆ ತಮ್ಮ ಪಕ್ಷ ಗೆಲುವು ಸಾಧಿಸಿದರೆ, ಅಧಿಕಾರ ಪಡೆದ ಕೇವಲ 10 ದಿನಗಳೊಳಗೆ ಎಲ್ಲಾ ರೈತರ ಸಾಲಮನ್ನಾ ಮಾಡುವುದಾಗಿಯೂ ಕಾಂಗ್ರೆಸ್ ಘೋಷಿಸಿತ್ತು. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಖುದ್ದಾಗಿ ಹಲವಾರು ಸಮಾವೇಶಗಳಲ್ಲಿ ಈ ಭರವಸೆ ನೀಡಿದ್ದರು. ರೈತರ ಸಾಲಮನ್ನಾ ಮಡುವುದಾಗಿ ಚುನಾವಣೆಗೂ ಮುನ್ನ ಬಿಡುಗಡೆಗೊಳಿಸಿದ್ದ ಪ್ರಣಾಳಿಕೆಯಲ್ಲೂ ಉಲ್ಲೇಖಿಸಿತ್ತು. ಸಾಲದೆಂಬಂತೆ ರೈತರ ಸಮಸ್ಯೆಗಳನ್ನು ಮುಂದಿಟ್ಟು ಕೇಂದ್ರ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿತ್ತು. ಇವೆಲ್ಲದರ ಪರಿಣಾಮವೆಂಬಂತೆ ಬಳಿಕ ನಡೆದ ಪಂಚರಾಜ್ಯ ಚುನಾವಣೆಗಳಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಘಡ ಚುನಾವಣೆಗಳಲ್ಲಿ ಕಾಂಗ್ರೆಸ್ ಜಯ ಸಾಧಿಸಿತ್ತು.

ರೈತರ ಎಲ್ಲಾ ಸಾಲವೂ ಮನ್ನಾ : ಎಚ್‌ಡಿಕೆ

ಛತ್ತೀಸ್‌ಘಡದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಸಾಧಿಸಿದ್ದರೆ, ಮಧ್ಯಪ್ರದೆಶ ಹಾಗೂ ರಾಜಸ್ಥಾನದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸೋಮವಾರದಂದು ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಳೆದ ಕೆಲ ವರ್ಷಗಳ ಅಂಕಿ ಅಂಶಗಳನ್ನು ಗಮನಿಸಿದರೆ, ಯಾವಾಗೆಲ್ಲ, ಯಾವೆಲ್ಲಾ ಪಕ್ಷಗಳು ರೈತರ ಸಾಲಮನ್ನಾ ಮಾಡುವ ಭರವಸೆ ವ್ಯಕ್ತಪಡಿಸಿದ್ದಾರೋ ವರೆಲ್ಲಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಹಾಗಿದ್ದರೆ ರೈತರ ಸಾಲಮನ್ನಾ ವಿಚಾರ ಪಕ್ಷಗಳಿಗೆ ಜಯ ತಂದು ಕೊಡುವುದು ಖಚಿತವೇ ಎಂಬ ಪ್ರಶ್ನೆ ಮೂಡುತ್ತದೆ. ಅಲ್ಲದೇ ಇದೇ ವಿಚಾರ 2019ರ ಲೋಕಸಭಾ ಚುನಾವಣೆಯಲ್ಲಿ ಅಷ್ಟೇ ಜೋಶ್‌ನಲ್ಲಿ ಉಲ್ಲೇಖಿಸಲಾಗುತ್ತದಾ? ಎಂಬುವುದೂ ಮಹತ್ವದ ಪ್ರಶ್ನೆಯಾಗಿದೆ.

2017ರಲ್ಲಿ ಉತ್ತರ ಪ್ರದೇಶ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯು ರೈತರ ಸಾಲಮನ್ನಾ ಮಾಡುವುದಾಗಿ ಭರವಸೆ ನೀಡಿತ್ತು. ಇದಾದ ಬಳಿಕ ನಡೆದ ಚುನಾವಣೆಯಲ್ಲಿ ಬಿಜೆಪಿಯು ಒಟ್ಟು 400 ಕ್ಷೇತ್ರಗಳಲ್ಲಿ ಬರೋಬ್ಬರಿ 325 ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಸಿಎಂ ಯೋಗಿ ಅಧಿಕಾರ ಸ್ವೀಕರಿಸಿದ ಬಳಿಕ ರೈತರ ಮೇಲಿದ್ದ 36 ಸಾವಿರ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡುವ ಘೋಷಣೆಯನ್ನೂ ಮಾಡಿದ್ದರು. ಇದೇ ಸಂದರ್ಭದಲ್ಲಿ ಅತ್ತ ಪಂಜಾಬ್‌ನಲ್ಲಿ ನಡೆದ ವಿಧಾಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರೈತರ ಸಾಲಮನ್ನಾ ಮಾಡುವುದಾಗಿ ಘೋಷಿಸಿತ್ತು. ಕಾಂಗ್ರೆಸ್ ಈ ರಾಜ್ಯದಲ್ಲಿ 117 ಕ್ಷೇತ್ರಗಳಲ್ಲಿ ಒಟ್ಟು 77 ರಲ್ಲಿ ಜಯ ಗಳಿಸಿತ್ತು. ಧಿಕಾರ ಪಡೆದ ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದ ಸರ್ಕಾರ ರೈತರ ಹೆಸರಿನಲ್ಲಿದ್ದ ಒಟ್ಟು 10 ಸಾವಿರ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಿತ್ತು. 

ಸರ್ಕಾರದಿಂದ ರೈತರಿಗೆ ಮತ್ತೊಂದು ಬಂಪರ್

2018ರಲ್ಲಿ ನಡೆದ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲೂ ಜೆಡಿಎಸ್ ಸಾಲಮನ್ನಾ ಮಾಡುವ ಭರವಸೆ ನೀಡಿತ್ತು. ಇದಾದ ಬಳಿಕ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದವು. ಜೆಡಿಎಸ್ ಪಕ್ಷದ ನಾಯಕ ಎಚ್. ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು ಹಾಗೂ ಸಾಲಮನ್ನಾ ಕೂಡಾ ಮಾಡಿದರು. 

ರೈತರಿಗೆ ನೀಡುವ ಭರವಸೆಗಳು:

ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವು ಪಕ್ಷ ಅಧಿಕಾರ ಸ್ವೀಕರಿಸಿದ 10 ದಿನಗಳೊಳಗೆ ಸಾಲಮನ್ನಾ ಮಾಡುವುದರೊಂದಿಗೆ, ಕೃಷಿ ಉಪಕರಣಗಳ ಮೇಲೆ ಜಿಎಸ್‌ಟಿ ನಿಷೇಧಿಸುವ ಭರವಸೆ ನೀಡಿತ್ತು. ಅತ್ತ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಾಲ ಮನ್ನಾ ಮಾಡುವುದರೊಂದಿಗೆ ಧಾನ್ಯಗಳ ಮೇಲಿನ ಕನಿಷ್ಟ ಬೆಂಬಲ ಬೆಲೆ ಏರಿಕೆ ಮಾಡುವ ಭರವಸೆ ನೀಡಿದ್ದರು. ಛತ್ತೀಸ್‌ಘಡದಲ್ಲೂ ಸಾಲಮನ್ನಾ ಜೊತೆಗೆ ಬೆಂಬಲ ಬೆಲೆಯನ್ನು 2 ಸಾವಿರ ರೂಪಾಯಿಯಿಂದ ಎರಡೂವರೆ ಸಾವಿರಕ್ಕೇರಿಸುವುದಾಗಿ ಮಾತು ಕೊಟ್ಟಿದ್ದರು. ಅತ್ತ ತೆಲಂಗಾಣದಲ್ಲಿ ಟಿಆರ್‌ಎಸ್‌ ಕೂಡಾ ಒಂದು ವೇಳೆ ತಮ್ಮದೇ ಸರ್ಕಾರ ಮತ್ತೊಮ್ಮೆ ಅಸ್ತಿತ್ವಕ್ಕೆ ಬಂದರೆ ರೈತ ಬಂಧು ಯೋಜನೆಯಡಿಯಲ್ಲಿ ರೈತರಿಗೆ ಒಂದು ವರ್ಷಕ್ಕೆ ಪ್ರತಿ ಎಕ್ರೆಗೆ ಸಿಗುವ 8 ಸಾವಿರ ರೂಪಾಯಿಯನ್ನು ಏರಿಕೆ ಮಾಡಿ 10 ಸಾವಿರ ರೂಪಾಯಿ ಕೊಡುವುದಾಗಿ ಘೋಷಿಸಿದ್ದರು. ಇದು ರಾಜ್ಯ ಸರ್ಕಾರ ರೈತರಿಗೆ ಸಾಲಕ್ಕಾಗಿ ನೀಡುವ ಮೊತ್ತವಾಗಿದೆ.

ಚುನಾವಣೆಗೂ ಮುನ್ನ ಮೋದಿ ಸಾಲ ಮನ್ನಾ ಮಾಡ್ತಾರಾ?

ಛತ್ತೀಸ್‌ಘಡದಲ್ಲಿ ಸರ್ಕಾರ ರಚಿಸುವುದಕ್ಕೂ ಮೊದಲೇ ಸಾಲಮನ್ನಾಗೆ ನಡೆಯಿತು ಸಿದ್ಧತೆ!

ಛತ್ತೀಸ್‌ಘಡದಲ್ಲಿ ಕಾಂಗ್ರೆಸ್‌ಗೆಲುವಿನ ಬಳಿಕ ರಾಜ್ಯಾಡಳಿತ ಅಧಿಕಾರಿಗಳು ರೈತರ ಸಾಲಮನ್ನಾ ಮಾಡಲು ತಯಾರಿ ಆರಂಭಿಸಿದ್ದಾರೆ. ರಾಜ್ಯಾಡಳಿತ ಅಧಿಕಾರಿಗಳಿಂಧ ಲಭ್ಯವಾದ ಮಾಹಿತಿ ಅನ್ವಯ ಅಹಕಾರಿ ವಿಛಾಗದ ಉಪ ಸಚಿವ ಪಿ. ಎಂ ಸರ್ಪರಾಜ್ ರೈತರ ಸಾಲಮನ್ನಾ ಮಾಡುವ ವಿಚಾರವಾಗಿ ಚರ್ಚೆ ನಡೆಸಿದ್ದು, ಇದಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನೀಡಲೂ ಸೂಚಿಸಿದ್ದಾರೆನ್ನಲಾಗಿದೆ. 

Follow Us:
Download App:
  • android
  • ios