Asianet Suvarna News Asianet Suvarna News

ನನಗೆ ಕೊಟ್ಟ ಸಾಲ ತೆಗೆದುಕೊಳ್ಳಿ, ಕೊರೋನಾ ಸಮರಕ್ಕೆ ಬಳಸಿ: ಮತ್ತೆ ಮಲ್ಯ ಮನವಿ!

ಭಾರತದ ಬ್ಯಾಂಕ್‌ಗಳಿಂದ ಸಾಲ ಪಡೆದು, ಮರುಪಾವತಿಸದೆ ವಿದೇಶಕ್ಕೆ ಪರಾರಿಯಾಗಿದ್ದ ಮಲ್‌ಯ| ಎರಡನೇ ಬಾರಿ ಹಣ ಹಿಂಪಡೆಯಿರಿ ಎಂದು ಸರ್ಕಾರಕ್ಕೆ ಮಲ್ಯ ಮನವಿ| ಮಲ್ಯ ಮನವಿಗೆ ಮೌನ ತಾಳಿದ ಸರ್ಕಾರ
Take my money and use it to fight coronavirus says Vijay Mallya
Author
Bangalore, First Published Apr 16, 2020, 4:04 PM IST
ಲಂಡನ್(ಏ.16): ಭಾರತ ಸೇರಿದಂತೆ ಇಡೀ ವಿಶ್ವವೇ ಕೊರೋನಾ ಅಟ್ಟಹಾಸಕ್ಕೆ ನಉಗಿದೆ. ಹೀಗಿರುವಾಗ ಭಾರತೀಯ ಬ್ಯಾಂಕ್‌ಗಳಿಂದ ಕೋಟ್ಯಂತರ ರೂಪಾಯಿ ಸಾಲ ಮಾಡಿ, ಮರು ಪಾವತಿಸದೆ ವಿದೇಶಕ್ಕೆ ಪರಾರಿಯಾಗಿದ್ದ ಮದ್ಯ ದೊರೆ ವಿಜಯ್ ಮಲ್ಯ ನನಗೆ ಕೊಟ್ಟ ಹಣ ಹಿಂಪಡೆಯಿರಿ, ಕೊರೋನಾ ಸಮರಕ್ಕೆ ಬಳಸಿಕೊಳ್ಳಿ ಎಂದು ಸರ್ಕಾರಕ್ಕೆ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ಇದು ಕೊರೋನಾ ಹಾವಳಿ ಬಳಿಕ ಮಲ್ಯ ಸರ್ಕಾರಕ್ಕೆ ಮಾಡುತ್ತಿರುವ ಎರಡನೇ ಮನವಿಯಾಗಿದೆ.

ಕೊರೋನಾ ಸಂಕಷ್ಟ: ಸಾಲ ಮರು ಪಾವತಿಸ್ತೀನಿ, ದಯವಿಟ್ಟು ಸ್ವೀಕರಿಸಿ ಎಂದ ಮದ್ಯ ದೊರೆ ಮಲ್ಯ!

ಈ ಹಿಂದೆಯೂ  ಒಂದು ಬಾರಿ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್‌ ಉದ್ದೇಶಿಸಿ ಟ್ವೀಟ್ ಮಾಡಿದ್ದ ವಿಜಯ್ ಮಲ್ಯ ನಾನು ಪದೇ ಪದೇ ಭಾರತದ ಬ್ಯಾಂಕ್‌ಗಳಿಂದ ಕೆಎಫ್‌ಎಯಿಂದ ಸಾಲ ಪಡೆದ ಮೊತ್ತದ ಶೇ. 100ರಷ್ಟು ಪಾವತಿಸಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದೇನೆ. ಆದರೆ ಬ್ಯಾಂಕ್‌ಗಳಾಗಲೀ, ಜಾರಿ ನಿರ್ದೇಶನಾಲಯವಾಗಲಿ ಈ ಕುರಿತು ಗಮನ ಹರಿಸುತ್ತಿಲ್ಲ. ಮುಟ್ಟುಗೋಲು ಹಾಕಿಕೊಂಡಿರುವ ನನ್ನ ಆಸ್ತಿಗಳನ್ನು ಬಿಡುಗಡೆ ಮಾಡಲು ಮುಂದಾಗುತ್ತಿಲ್ಲ. ಹೀಗಾಗಿ ಹಣಕಾಸು ಸಚಿವರು ಇಂತಹ ಸಂಕಷ್ಟದ ಸಮಯದಲ್ಲಿ ನನ್ನ ಮನವಿಯನ್ನು ಆಲಿಸಬೇಕೆಂದು ಮನವಿ ಮಾಡಿದ್ದರು. ಅಲ್ಲದೇ ಭಾರತದಲಲಿ ವಿಧಿಸಲಾಗಿದ್ದ ಲಾಖ್‌ಡೌನ್‌ ಕ್ರಮವನ್ನು ಶ್ಲಾಘಿಸಿದ್ದರು
  ಇನ್ನು ಕಿಂಗ್‌ಫಿಷರ್‌ ಏರ್‌ಲೈನ್ಸ್‌ ಗಾಗಿ ಭಾರತದ ವಿವಿಧ ಬ್ಯಾಂಕುಗಳಿಂದ ವಿಜಯ ಮಲ್ಯ ಸುಮಾರು 9,000 ಕೋಟಿ ರೂ. ಸಾಲ ಪಡೆದಿದ್ದರು. ಅಲ್ಲದೆ, ಆ ಹಣವನ್ನು ತೀರಿಸಲಾಗದೆ ಲಂಡನ್‌ನಲ್ಲಿ ತಲೆ ಮರೆಸಿಕೊಂಡಿದ್ದರು. ಆದರೆ, ಭಾರತ ಸರ್ಕಾರ ಅವರನ್ನು ವಾಪಸ್‌ ದೇಶಕ್ಕೆ ಕರೆತರಲು ಸಾಕಷ್ಟು ಪ್ರಯತ್ನ ನಡೆಸಿದ ಬೆನ್ನಿಗೆ ವಿಜಯ ಮಲ್ಯ ತಾನು ಸಾಲವಾಗಿ ಪಡೆದ ಸಂಪೂರ್ಣ ಹಣವನ್ನು ಬಡ್ಡಿ ಸಮೇತ ಮರುಪಾವತಿ ಮಾಡಲು ಸಿದ್ದನಿದ್ದೇನೆ ಎಂದು ಒಂದು ವರ್ಷದಿಂದ ಸತತವಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಆದರೆ, ಸರ್ಕಾರ ಈ ಮನವಿಯನ್ನು ಈವರೆಗೆ ಸ್ವೀಕರಿಸಿಲ್ಲ. ಇದಕ್ಕೆ ನಿಖರ ಕಾರಣವನ್ನೂ ತಿಳಿಸಿಲ್ಲ. 
Follow Us:
Download App:
  • android
  • ios