Asianet Suvarna News Asianet Suvarna News

ಮಂದಿರ ನಿರ್ಮಾಣಕ್ಕೆ ನಮ್ಮ ಬೆಂಬಲ: ಕಾಂಗ್ರೆಸ್

ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಅಖಿಲ ಭಾರತೀಯ ಕಾಂಗ್ರೆಸ್ ಪಕ್ಷ ಸ್ವಾಗತ ಮಾಡಿದ್ದು, ರಾಮ ಮಂದಿರ ನಿರ್ಮಾಣಕ್ಕೆ ಬೆಂಬಲ ನೀಡುವುದಾಗಿ ಹೇಳಿದೆ. 
 

support to build rama mandir says congress
Author
Bangalore, First Published Nov 10, 2019, 8:18 AM IST

ನವದೆಹಲಿ(ನ.10): ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಅಖಿಲ ಭಾರತೀಯ ಕಾಂಗ್ರೆಸ್ ಪಕ್ಷ ಸ್ವಾಗತ ಮಾಡಿದ್ದು, ರಾಮ ಮಂದಿರ ನಿರ್ಮಾಣಕ್ಕೆ ಬೆಂಬಲ ನೀಡುವುದಾಗಿ ಹೇಳಿದೆ.

ಶನಿವಾರ ಕಾಂಗ್ರೆಸ್ ಕಚೇರಿ ಯಲ್ಲಿ, ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದ ಕಾರ್ಯನಿ ರ್ವಾಹಕ ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಮಾಡಲಾಗಿದ್ದು, ಸಂಬಂಧಪಟ್ಟ ಎಲ್ಲಾ ಪಕ್ಷಗಳು ಹಾಗೂ ಸಮುದಾಯಗಳು ಸಂವಿಧಾನದಲ್ಲಿ ಪ್ರತಿ ಪಾದಿಸಲಾಗಿರುವ ಜಾತ್ಯತೀತ ಮೌಲ್ಯಗಳು ಮತ್ತು ಭ್ರಾತೃತ್ವದ ಮನೋಭಾವವನ್ನು ಪಾಲಿಸಬೇಕು ಎಂದು ಹೇಳಿದೆ.

ಮಸೀದಿ ಒಡೆದಿದ್ದು ತಪ್ಪು ಎಂದಾದ್ರೆ ಪರಿಹಾರ ಹೇಳ್ಬೋದಿತ್ತು: ದೇವೇಗೌಡ

ಸಮಾಜದಲ್ಲಿ ಪರಸ್ಪರ ಗೌರವ ಮತ್ತು ಐಕ್ಯತೆಯ ಸಂಪ್ರದಾಯ ವನ್ನು ಪುನರುಚ್ಚರಿಸುವುದು ಪ್ರತಿ ಯೊಬ್ಬರ ಜವಾಬ್ದಾರಿಯಾಗಿದೆ . ಈ ತೀರ್ಪು ಯಾರ ಸೋಲೂ ಅಲ್ಲ ಗೆಲುವೂ ಅಲ್ಲ. ರಾಮ ಮಂದಿತ ನಿರ್ಮಾಣಕ್ಕೆ ಬೆಂಬಲ ಇದೆ ಎಂದು ಕಾಂಗ್ರೆಸ್ ವಕ್ತಾರ ರಂದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.

7 ದಶಕಗಳ ಅಯೋಧ್ಯೆ ರಾಮ ಜನ್ಮ ಭೂಮಿ ವಿವಾದಕ್ಕೆ ಶನಿವಾರ ತೆರೆ ಬಿದ್ದಿದ್ದು, ಸುಪ್ರೀಂ ಇಂದು ಐತಿಹಾಸಿಕ ತೀರ್ಪು ಪ್ರಕಟಿಸಿದೆ. ವಿವಾದಿತ 2.77 ಎಕರೆ ಜಾಗವನ್ನು ರಾಮಲಲ್ಲಾಗೆ ವಹಿಸಿ ಸುಪ್ರೀಂ ತೀರ್ಪು ನೀಡಿದೆ. ಯಾರ ಭಾವನೆಗೂ ಧಕ್ಕೆಯಾಗದಂತೆ ಬಾಬರಿ ಮಸೀದಿಗೂ ಅಯೋಧ್ಯೆಯಲ್ಲೇ ಪ್ರತ್ಯೇಕ ಜಾಗವನ್ನು ಕಲ್ಪಿಸುವಂತೆ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.

ವಿವಾದಿತ ಸ್ಥಳ ರಾಮಮಂದಿರಕ್ಕೆ ಸಿಕ್ಕಿದ್ದು ಹೇಗೆ?

Follow Us:
Download App:
  • android
  • ios