Asianet Suvarna News Asianet Suvarna News

ಕಾಶಿ-ಮಥುರಾ ಬೇಡಿಕೆ ಘೋಷಣೆ: ಅಂತರ ಕಾಯ್ದುಕೊಂಡ RSS!

ಅಯೋಧ್ಯೆ ಭೂವಿವಾದದ ಸುಪ್ರೀಂಕೋರ್ಟ್ ತೀರ್ಪು ಹಿನ್ನೆಲೆ/ ವಿವಾದಿತ ಸ್ಥಳದಲ್ಲಿ ಮಂದಿರ ಕಟ್ಟಲು ಘನ ನ್ಯಾಯಲಯ ಅನುಮತಿ/ ಸುಪ್ರೀಂಕೋರ್ಟ್ ತೀರ್ಪು ಸ್ವಾಗತಿಸಿದ RSS ಮುಖ್ಯಸ್ಥ ಮೋಹನ್ ಭಾಗವತ್/ ಅಯೋಧ್ಯೆ ತೀರ್ಪು ಪ್ರಕಟವಾಗುತ್ತಿದ್ದಂತೇ ಕಾಶಿ-ಮಥುರಾ ಮಂದಿರಗಳಿಗಾಗಿ ಬೇಡಿಕೆ ಆರಂಭ/ ಕಾಶಿ-ಮಥುರಾ ಮಂದಿರ ಬೇಡಿಕೆಯಿಂದ ಅಂತರ ಕಾಯ್ದುಕೊಂಡ RSS/ ಕಾಶಿ-ಮಥುರಾ ಮಂದಿರ ಬೇಡಿಕೆಗೂ ಸಂಘಕ್ಕೂ ಸಂಬಂಧವಿಲ್ಲ ಎಂದ ಭಾಗವತ್/ 

RSS Distances From Kashi-Mathura Slogan Says Mohan Bhagwat
Author
Bengaluru, First Published Nov 10, 2019, 5:13 PM IST

ನಾಗ್ಪುರ್(ನ.10): ಅಯೋಧ್ಯೆ ಭೂವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ವಿವಾದಿತ ಸ್ಥಳದಲ್ಲಿ ಮಂದಿರ ಕಟ್ಟಲು ಘನ ನ್ಯಾಯಲಯ ಅನುಮತಿ ನೀಡಿದೆ.

ರಾಮನಿಗೆ ದೊರೆತ ಅಯೋಧ್ಯೆ: ಶತಮಾನಗಳ ನಂಬಿಕೆಗೆ ಸುಪ್ರೀಂ ತೀರ್ಪಿನ ನೈವೇದ್ಯೆ!
ಇನ್ನು ಅಯೋಧ್ಯೆ ತೀರ್ಪು ಪ್ರಕಟವಾಗುತ್ತಿದ್ದಂತೇ ಕಾಶಿ-ಮಥುರಾ ಮಂದಿರಗಳಿಗಾಗಿ ಬೇಡಿಕೆ ಆರಂಭವಾಗಿದ್ದು, ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS) ಈ ಘೋಷಣೆಯಿಂದ ಅಂತರ ಕಾಯ್ದುಕೊಂಡಿದೆ.

ಬಾಬರ್ ಅಯೋಧ್ಯೆ(5 ಎಕರೆ)ಯಲ್ಲೇ ಇರಲಿದ್ದಾನೆ: ಸಹೋದರರ ನಂಬಿಕೆ ಮುಖ್ಯ ಎಂದ ಸುಪ್ರೀಂ!

ಅಯೋಧ್ಯೆ ತೀರ್ಪು ಪ್ರಕಟವಾದ ಬೆನ್ನಲ್ಲೇ, ಕೆಲವು ಬಲಪಂಥೀಯ ಸಂಘಟನೆಗಳು ಕಾಶಿ-ಮಥುರಾ ಮಂದಿರಕ್ಕಾಗಿ ಬೇಡಿಕೆ ಮಂಡಿಸಿದ್ದು, ಇದಕ್ಕೂ ಸಂಘಟನೆಗೂ ಸಂಬಂಧವಿಲ್ಲ ಎಂದು RSS ಮುಖ್ಯಸ್ಥ ಮೋಹನ್ ಭಾಗವತ್ ಸ್ಪಷ್ಟಪಡಿಸಿದ್ದಾರೆ.

ವಿವಾದ ಇತ್ಯರ್ಥ ಬಯಸಿದ್ದೇವು, ಬಗೆಹರಿದಿದೆ: ಮೋಹನ್ ಭಾಗವತ್!
ಅಯೋಧ್ಯೆ ತೀರ್ಪಿನ ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಮೋಹನ್ ಭಾಗವತ್, ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸುವುದಾಗಿ ಸ್ಪಷ್ಟಪಡಿಸಿದರು.

ರಾಮ ಮಂದಿರ ಸಂಕಲ್ಪದ ಮಹಾಯಜ್ಞ: ವರ್ಷ ಕಳೆದು ಅದೇ ದಿನ ಪ್ರಕಟವಾಯ್ತು ತೀರ್ಪು

ಆದರೆ ಕಾಶಿ-ಮಥುರಾ ಮಂದಿರ ಬೇಡಿಕೆಗೆ ಪ್ರತಿಕ್ರಿಯೆ ನಡೆಸಲು ನಿರಾಕರಿಸಿರುವ ಮೋಹನ್ ಭಾಗವತ್, ಈ ಬೇಡಿಕೆಗೂ ಸಂಘಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.

ಅಯೋಧ್ಯೆ ತೀರ್ಪು: ಜಾಲತಾಣದಲ್ಲೂ ಸೌಹಾರ್ದತೆ!

Follow Us:
Download App:
  • android
  • ios