Asianet Suvarna News Asianet Suvarna News

ಈ ಕೋಣದ ಬೆಲೆ ಬರೋಬ್ಬರಿ 14 ಕೋಟಿ, ಅಂಥಾದ್ದೇನಿದೆ ವಿಶೇಷ?

ಈ ಕೋಣದ ಬೆಲೆ ಎಷ್ಟಿರಬಹುದು? ಈ ಕೋಣದ ಪ್ರತಿದಿನದ ಖರ್ಚೆ 1.5 ಲಕ್ಷ/ ಭೀಮ ಕೋಣದ ಬೆಲೆ ಬರೋಬ್ಬರಿ 14 ಕೋಟಿ ರೂ.!

Meet Bhima The Buffalo worth Whopping RS 14 Crore
Author
Bengaluru, First Published Nov 6, 2019, 10:18 PM IST

ಜೈಪುರ[ನ. 06] ಅಬ್ಬಬ್ಬಾ ಎಂದರೆ ಒಂದು ಕೋಣದ ಬೆಲೆ ಎಷ್ಟಿರಬಹುದು? ಒಂದು 3 ಲ್ಷ.. ಇಲ್ಲಾ 10 ಲಕ್ಷ. ಆದರೆ ಈ ಕೋಣದ ಬೆಲೆ ಕೇಳಿದರೆ ನಿಮಗೆ ತಲೆ ತಿರುಗಿ ಬೀಳುವುದು ಖಂಡಿತ.

ಕೋಣ ವ್ಯಾಪಾರದ ಪುಷ್ಕರ್ ಮೇಳದಲ್ಲಿ ಕಂಗೊಳಿಸಿದ ಈ ಕೋಣದ ಬೆಲೆ ಬರೋಬ್ಬರಿ 14 ಕೋಟಿ ರೂ.! ಪುಷ್ಕರ್ ಜಾತ್ರಗೆ ಬಂದ 14 ಕೋಟಿ ರೂ. ಮೌಲ್ಯದ  ಭೀಮ ಕೋಣ ಇದೀಗ ದೇಶದೆಲ್ಲೆಡೆ ಸುದ್ದಿಮಾಡ್ತಿದೆ.

ಆರು ವರ್ಷದ ಕೋಣವಾಗಿದ್ದು, 1,300 ಕೆ.ಜಿ.ತೂಕ ಹೊಂದಿದೆ. ಈ ವಿಶಿಷ್ಟ ಕೋಣವನ್ನು ಜೋಧಪುರದಿಂದ ಮಾಲೀಕ ಜವಾಹರ್ ಲಾಲ್ ಜಂಗಿದ್, ಅವರ ಮಗ ಅರವಿಂದ್ ಜಂಗಿದ್ ಹಾಗೂ ಅವರ ಕುಟುಂಬದ ಸದಸ್ಯರು ಪುಷ್ಕರ್ ಜಾತ್ರೆಗೆ ಕರೆ ತಂದಿದ್ದಾರೆ.

ರೇಣುಕಾಚಾರ್ಯಗೆ ತಿವಿದ ಹೋರಿ

ಜಾತ್ರೆಯ ಮೊದಲ ದಿನವೇ ಕೋಣವನ್ನು ನೋಡಲು ಜನ ಮುಗಿಬಿದ್ದಿದ್ದು, ಸಾಲುಗಟ್ಟಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಕೋಣದ ಮಾಲೀಕ ಜಂಗಿದ್ ಈ ಕುರಿತು ಪ್ರತಿಕ್ರಿಯಿಸಿ, ಭೀಮಾನ ನಿರ್ವಹಣೆಗೆ ಹಾಗೂ ಆಹಾರಕ್ಕಾಗಿ ಪ್ರತಿ ತಿಂಗಳು 1.5 ಲಕ್ಷ ರೂ. ಖರ್ಚು ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಶ್ರೀಗಳ ಎಚ್ಚರಿಕೆಯಿಂದ ಶಿವಮೊಗ್ಗ ಮತ್ತಯು ದಾವಣಗೆರೆ ಜಿಲ್ಲೆ ನಡುವೆ ಕಿಚ್ಚು ಹಚ್ಚಿದ್ದ ಕೋಣದ ಕತೆಗೆ ಕೊನೆ

ಪ್ರತಿ ದಿನ ಒಂದು ಕೆ.ಜಿ.ತುಪ್ಪ, ಅರ್ಧ ಕೆ.ಜಿ. ಬೆಣ್ಣೆ, 200 ಗ್ರಾಂ.ಜೇನುತುಪ್ಪ, 25 ಲೀಟರ್ ಹಾಲು, ಒಂದು ಕಿಲೋ ಗೋಡಂಬಿ-ಬಾದಾಮಿ ಸಹ ಈ ಕೋಣಕ್ಕೆ ಬೇಕಾಗುತ್ತದೆ.

ಜಾತ್ರೆಗೆ ಬರುವುದಕ್ಕೂ ಮೊದಲು ಈ ಕೋಣಕ್ಕೆ 14 ಕೋಟಿ ರೂ.ಗಳ ಪ್ರಸ್ತಾಪವನ್ನು ನಾವು ಸ್ವೀಕರಿಸಿದ್ದೇವೆ. ಆದರೆ ನಾವು ಭೀಮನನ್ನು ಮಾರಾಟ ಮಾಡಲು ಬಯಸುವುದಿಲ್ಲ. ಜಾತ್ರೆಯಲ್ಲಿಯೂ ಕೋಣಗಳನ್ನು ಮಾರಾಟಕ್ಕೆ ತರುವುದಿಲ್ಲ. ಬದಲಿಗೆ ಮರ‍್ರಾ ತಳಿಯನ್ನು ಸಂರಕ್ಷಿಸುವ ಹಾಗೂ ಉತ್ತೇಜಿಸಲು ಈ ಕೋಣದ ಪ್ರದರ್ಶನ ಮಾತ್ರ ಮಾಡುತ್ತಿದ್ದೇವೆ ಎಂದು  ಹೇಳಿದ್ದಾರೆ.

ಭೀಮನ ತೂಕವು ಕಳೆದ ವರ್ಷಕ್ಕಿಂತ ಈ ಬಾರಿ 100 ಕೆ.ಜಿ. ಹೆಚ್ಚಿದ್ದು, ಬೆಲೆ ಸಹ 2 ಕೋಟಿ ರೂ. ಹೆಚ್ಚಿಸಲಾಗಿದೆ. ಕಳೆದ ವಾರ್ಷವೂ ಕೋಣ ಮೇಳಕ್ಕೆ ಮಾಲೀಕರೊಂದಿಗೆ ಆಗಮಿಸಿತ್ತು.

Follow Us:
Download App:
  • android
  • ios