ಕರ್ನಾಟಕದಲ್ಲಿನ ಕೊಲೆಗಳಿಗೆ ಪ್ರೇಮ ಸಂಬಂಧವೇ 2ನೇ ಕಾರಣ!
ಕೊಲೆ: ಪ್ರೀತಿ, ಪ್ರೇಮದ ಕೇಸುಗಳೇ ಹೆಚ್ಚು!| ದ್ವೇಷ, ಆಸ್ತಿಗಾಗಿ ಹತ್ಯೆ ಇಳಿಕೆ | ಕರ್ನಾಟಕದಲ್ಲಿನ ಕೊಲೆಗಳಿಗೆ ಪ್ರೇಮ ಸಂಬಂಧವೇ 2ನೇ ಕಾರಣ!
ನವದೆಹಲಿ[ನ.18]: ದೇಶಾದ್ಯಂತ ಕೊಲೆ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದ್ದರೂ, ಪ್ರೇಮ ಸಂಬಂಧ ಕಾರಣಗಳಿಂದಾಗಿ ಹತ್ಯೆ ಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ. ವೈಯಕ್ತಿಕ ದ್ವೇಷ, ಆಸ್ತಿ ವಿವಾದದ ನಂತರ ಅತಿ ಹೆಚ್ಚು ಮಂದಿಯನ್ನು ಬಲಿ ಪಡೆಯುತ್ತಿರುವುದು ಪ್ರೀತಿ ಎಂದು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (ಎನ್‌ಸಿಆರ್‌ಬಿ) ಅಂಕಿ-ಅಂಶಗಳು ಹೇಳುತ್ತವೆ
ಪ್ರೇಮ ವಿವಾಹವಾಗಿದ್ದ ನವ ವರನನ್ನು ಕೊಲೆ ಮಾಡಿ ನದಿಗೆಸೆದ್ರು..!
ಡೆದಿದ್ದವು. ಅವುಗಳ ಸಂಖ್ಯೆ 2018ರಲ್ಲಿ ಶೇ.21ರಷ್ಟು ಇಳಿಕೆಯಾಗಿ 28,653ಕ್ಕೆ ಕುಸಿದಿದೆ. ವೈಯಕ್ತಿಕ ದ್ವೇಷ (ಶೇ.4.3ರಷ್ಟು ಕುಸಿತ), ಆಸ್ತಿಗಾಗಿ (ಶೇ.12ರಷ್ಟು ಇಳಿಕೆ) ನಡೆಯುವ ಕೊಲೆಗಳ ಸಂಖ್ಯೆಯಲ್ಲೂ ಇಳಿಮುಖವಾಗಿದೆ. ಆದರೆ ಅಕ್ರಮ ಸಂಬಂಧ ಸೇರಿದಂತೆ ಇನ್ನಿತರೆ ಪ್ರೇಮ ಕಾರಣಗಳಿಗಾಗಿ ನಡೆಯುವ ಹತ್ಯೆ ಪ್ರಕರಣಗಳಲ್ಲಿ ಶೇ.28ರಷ್ಟು ಹೆಚ್ಚಳ ಕಂಡುಬಂದಿದೆ.
ಪತ್ನಿಯ ಕೊಂದು 3 ದಿನ ಮಂಚದ ಕೆಳಗೆ ಮುಚ್ಚಿಟ್ಟ ಭೂಪ..!
ಕೊಲೆಗೆ ಪ್ರೇಮ ಸಂಬಂಧವೇ ಪ್ರಮುಖ ಕಾರಣವಾಗಿರುವ ರಾಜ್ಯಗಳ ಪಟ್ಟಿಯಲ್ಲಿ ಆಂಧ್ರ ಪ್ರದೇಶ, ಗುಜರಾತ್, ಮಹಾರಾಷ್ಟ್ರ ಹಾಗೂ ಪಂಜಾಬ್ ಇವೆ. ಕರ್ನಾಟಕ, ತಮಿಳು ನಾಡು, ದೆಹಲಿ ಹಾಗೂ ಉತ್ತರಪ್ರದೇಶದಲ್ಲಿ ಸಂಭವಿಸುವ ಕೊಲೆಗಳಿಗೆ ಪ್ರೀತಿ- ಪ್ರೇಮವೇ ಎರಡನೇ ಕಾರಣವಾಗಿದೆ ಎಂದು ವರದಿ ವಿವರಿಸಿದೆ. 2018ರಲ್ಲಿ ಕರ್ನಾಟಕದಲ್ಲಿ ವೈಯಕ್ತಿಕ ದ್ವೇಷಕ್ಕೆ 156 ಕೊಲೆಗಳು ಸಂಭವಿಸಿದ್ದರೆ, ಪ್ರೇಮ ಕಾರಣಗಳಿಂದ 113 ಮಂದಿ ಹತ್ಯೆಯಾಗಿದ್ದಾರೆ ಎಂದು ಅಂಕಿ-ಅಂಶಗಳು ತಿಳಿಸಿವೆ.