Asianet Suvarna News Asianet Suvarna News

ವಿಶ್ವದ ಅತೀ ದುಬಾರಿ ಚಾಕಲೇಟ್ ಇದು! ನೀವೂ ಒಮ್ಮೆ ಟೇಸ್ಟ್ ಮಾಡಿ

ಚಾಕಲೇಟ್ ಪ್ರಿಯರೇ ಗಮನಿಸಿ| ಐಟಿಸಿ ತಯಾರು ಮಾಡಿದೆ ವಿಶ್ವದ ಅತೀ ದುಬಾರಿ ಚಾಕಲೇಟ್ ಇದು | ಇದರ ಬೆಲೆ ಬರೋಬ್ಬರಿ 4.30 ಲಕ್ಷ 

ITC fabelle Launches world most expensive chocolate priced at RS 4.3 lakh
Author
Bengaluru, First Published Oct 23, 2019, 9:45 AM IST

ನವದೆಹಲಿ (ಅ.23): ವೈವಿಧ್ಯಮಯ ಉತ್ಪನ್ನಗಳನ್ನು ತಯಾರಿಸುವಲ್ಲಿ ಮನೆ ಮಾತಾಗಿರುವ ಭಾರತ ಐಟಿಸಿ ಕಂಪನಿ, ಮಂಗಳವಾರ ವಿಶ್ವದ ದುಬಾರಿ ಚಾಕಲೇಟ್‌ ತಯಾರಿಸುವ ಮೂಲಕ ಹೊಸ ದಾಖಲೆ ಬರೆದಿದೆ. ತನ್ನ ಫೇಬೆಲ್ಲೇ ಬ್ರಾಂಡ್‌ನಡಿ ‘ಟ್ರಿನಿಟಿ - ಟ್ರಫಲ್ಸ್‌ ಎಕ್ಸ್‌ಟ್ರಾಆರ್ಡಿನೇಟರ್‌’ ಎಂಬ ಹೆಸರಿನ ಬರೋಬ್ಬರಿ 4.30 ಲಕ್ಷ ಮೌಲ್ಯದ ಚಾಕಲೇಟ್‌ ಪರಿಚಯಿಸುವ ಮೂಲಕ ಗಿನ್ನಿಸ್‌ ದಾಖಲೆಗೆ ಪಾತ್ರವಾಗಿದೆ.

ಒಂದು ಕೆಜಿಗೆ ಈ ದರ ನಿಗದಿಪಡಿಸಿದೆ. ಸೀಮಿತ ಆವೃತ್ತಿಯ ಚಾಕಲೇಟ್‌ ಇದಾಗಿದ್ದು, 15 ಗ್ರಾಂ ತೂಕದ 15 ಟ್ರಫಲ್‌ಗಳಿರುವ ಚಾಕಲೇಟ್‌ ಅನ್ನು ಕೈ ಯಿಂದ ಮಾಡಿದ ಮರದ ಪೆಟ್ಟಿಗೆಯಲ್ಲಿ ಪ್ಯಾಕ್‌ ಮಾಡಲಾಗಿದ್ದು, ಒಂದು ಲಕ್ಷ ರುಪಾಯಿಗೆ ಗ್ರಾಹಕರು ಖರೀದಿ ಮಾಡಬಹುದು ಎಂದು ಐಟಿಸಿ ಹೇಳಿದೆ.

Follow Us:
Download App:
  • android
  • ios