ಎಕೆ-47 ಬುಲೆಟ್ ತಡೆಯಬಲ್ಲ ಜಾಕೆಟ್ ಆವಿಷ್ಕರಿಸಿದ ಭಾರತೀಯ ಸೇನಾಧಿಕಾರಿ!

ಎಕೆ-47 ಬುಲೆಟ್ ತಡೆಯಬಲ್ಲ ಜಾಕೆಟ್ ಆವಿಷ್ಕಾರ| ಹೆಲ್ಮೆಟ್ ಹಾಗೂ ಜಾಕೆಟ್ ಆವಿಷ್ಕರಿಸಿದ ಭಾರತೀಯ ಸೇನಾಧಿಕಾರಿ| ವಿಶೇಷ ಜಾಕಟ್ ಸಿದ್ಧಪಡಿಸಿದ ಮೇಜರ್ ಅನೂಪ್ ಮಿಶ್ರಾ| 10 ಮೀಟರ್ ಅಂತರದಿಂದಲೇ ಎಕೆ-47 ಬುಲೆಟ್'ನ್ನು ನಿಗ್ರಹಿಸುವ ಸಾಮರ್ಥ್ಯ| ಕೇವಲ 1.4 ಕೆ.ಜಿ ತೂಕದ ವಿಶಿಷ್ಟ ಬುಲೆಟ್ ಪ್ರೂಫ್ ಜಾಕೆಟ್| ವಿಶ್ವದ ಅತ್ಯಂತ ಅಗ್ಗದ ಗನ್ ಶೂಟ್ ಲೊಕೇಟರ್ ಲೋಕಾರ್ಪಣೆ|

Indian Army Major Develops Bulletproof Helmet and Jacket Against AK-47 Bullets

ಲಕ್ನೋ(ಫೆ.08): ಮಾರಣಾಂತಿಕ ಎಕೆ-47 ಬಂದೂಕು ಎಂದರೆ ಎಂತಹವರ ಎದೆಯೂ ನಡುಗುತ್ತದೆ. ಒಂದೇ ಸಮನೆ ಬಾನೆಟ್'ನಿಂದ ಬುಲೆಟ್‌ಗಳ ಸುರಿಮಳೆಯಾಗುತ್ತಿದ್ದರೆ ಎದುರಿಗಿದ್ದವನ ಸಾವು ಖಚಿತ ಎಂದೇ ಅರ್ಥ.

ಆದರೆ ಭಾರತೀಯ ಸೇನೆಯ ಸೈನಿಕರು ಇನ್ನು ಶತ್ರುಗಳ ಎಕೆ-47 ಬಂದೂಕುಗಳಿಗೆ ಹೆದರಬೇಕಿಲ್ಲ. ಕಾರಣ ಭಾರತೀಯ ಸೇನೆ ಮೇಜರ್ ದರ್ಜೆಯ ಅಧಿಕಾರಿಯೊಬ್ಬರು ಎಕೆ-47 ಬಂದೂಕಿನ ಬುಲೆಟ್‌ನ್ನು ತಡೆಯಬಲ್ಲ ಸಾಮರ್ಥ್ಯವುಳ್ಳ ತಲೆಗವಚ ಹಾಗೂ ಜಾಕಟ್'ನ್ನು ಆವಿಷ್ಕರಿಸಿದ್ದಾರೆ.

ಭಾರತೀಯ ಸೇನಾ ಇಂಜಿನಿಯರಿಂಗ್ ಕಾಲೇಜಿನ ಮೇಜರ್ ಅನೂಪ್ ಮಿಶ್ರಾ ಈ ವಿನೂತನ ಜಾಕೆಟ್ ಹಾಗೂ ಹೆಲ್ಮೆಟ್ ಆವಿಷ್ಕರಿಸಿದ್ದು, ಎಕೆ-47 ಸೇರಿದಂತೆ ಸ್ನೈಪರ್ ಬಂದೂಕಿನ ಗುಂಡುಗಳನ್ನೂ ತಡೆಯಬಲ್ಲ ಸಾಮರ್ಥ್ಯ ಹೊಂದಿದೆ.

ಈ ಜಾಕೆಟ್ ಹಾಗೂ ಹ್ಮೆಲೆಟ್ 10 ಮೀಟರ್ ಅಂತರದಿಂದಲೇ ಎಕೆ-47 ಬುಲೆಟ್'ನ್ನು ನಿಗ್ರಹಿಸುವ ಸಾಮರ್ಥ್ಯ ಹೊಂದಿದ್ದು, ಕೇವಲ 1.4 ಕೆ.ಜಿ ತೂಕ ಹೊಂದಿದೆ. ಇದೇ ವೇಳೆ ಭಾರತದ ಮೊದಲ ಹಾಗೂ ವಿಶ್ವದ ಅತ್ಯಂತ ಅಗ್ಗದ ಗನ್ ಶೂಟ್ ಲೊಕೇಟರ್'ನ್ನು ಕೂಡ ಸೇನಾ ಇಂಜಿನಿಯರಿಂಗ್ ಕಾಲೇಜು ಆವಿಷ್ಕರಿಸಿದೆ.

400 ಮೀಟರ್ ಗಳ ಅಂತರದಿಂದಲೇ ಬುಲೆಟ್' ಲೊಕೇಷನ್ ಪತ್ತೆ ಮಾಡುವ ಸಾಮರ್ಥ್ಯ ಹೊಂದಿರುವ ಈ ಗನ್ ಶೂಟರ್ ಲೊಕೇಟರ್, ಶತ್ರುಗಳು ಇರುವ ಸ್ಥಳವನ್ನು ಗುರುತಿಸಿ ದಾಳಿ ಮಾಡಲು ಸಹಾಯಕಾರಿಯಾಗಿದೆ.

Latest Videos
Follow Us:
Download App:
  • android
  • ios