Asianet Suvarna News Asianet Suvarna News

ಚುನಾವಣಾ ಆಯೋಗಕ್ಕೆ ಖಡಕ್ ಖದರು ತಂದಿದ್ದ ಟಿ.ಎನ್.ಶೇಷನ್ ನಿಧನ

ಚುನಾವಣಾ ಆಯೋಗಕ್ಕೆ ಒಂದು ಖಡಕ್ ಖದರು ತಂದಿದ್ದ ಟಿ.ಎನ್.ಶೇಷನ್ ನಿಧನ/ 1932 ರ ಡಿಸೆಂಬರ್ ನಲ್ಲಿ ಕೇರಳದ ಪಾಲ್ಲಕ್ಕಾಡ್ ನ ತಿರುನೆಲ್ಲಿಯಲ್ಲಿ ಜನಿಸಿದ್ದ  ಶೇಷನ್/ 1955ರ ತಮಿಳುನಾಡು ಕೇಡರ್ ನ ಭಾರತೀಯ ನಾಗರಿಕ ಸೇವೆ[ಐಎಎಸ್] ತರಬೇತಿ

Former Chief Election Commissioner TN Seshan passes away
Author
Bengaluru, First Published Nov 10, 2019, 11:54 PM IST

ನವದೆಹಲಿ[ನ. 10]  ಚುನಾವಣೆ ಹೇಗಿರಬೇಕು? ಕಟ್ಟು ನಿಟ್ಟು ಅಂದರೆ ಏನು? ಎಂಬುದನ್ನು ಇಡೀ ದೇಶಕ್ಕೆ ಸಾರಿ ಹೇಳಿದ್ದ ಚುನಾವಣಾ ಆಯೋಗದ ಮಾಜಿ ಮುಖ್ಯ ಆಯುಕ್ತ ಟಿ.ಎನ್.ಶೇಷನ್ [87] ನಿಧನರಾಗಿದ್ದಾರೆ.

ಚುನಾವಣಾ ಆಯೋಗದ 10ನೇ ಮುಖ್ಯ ಆಯುಕ್ತರಾಗಿ ಶೇಷನ್ ಕೆಲಸ ಮಾಡಿದ್ದರು. ಡಿಸೆಂಬರ್ 12, 1990 ರಿಂದ ಡಿಸೆಂಬರ್ 11, 1996ರವರೆಗೆ ಚುನಾವಣಾ ಆಯೋಗದ ಮುಖ್ಯ ಆಯುಕ್ತರಾಗಿದ್ದರು.

ನೀತಿ ಸಂಹಿತ ಅಂದರೆ ಏನು? ಅದರ ಖಡಕ್ ಜಾರಿ ಹೇಗೆ ಎಂಬುದನ್ನು ತೋರಿಸಿಕೊಟ್ಟಿದ್ದು  ತಿರುನೆಲ್ಲೈ ನಾರಾಯಣ ಅಯ್ಯರ್ (ಟಿ.ಎನ್) ಶೇಷನ್. ನೀತಿ ಸಂಹಿತೆ ಉಲ್ಲಂಘಿಸುವ ರಾಜಕಾರಣಿಗಳ ವಿರುದ್ಧ ದೊಡ್ಡ ಸಮರವನ್ನೇ ಸಾರಿದ್ದವರು ಶೇಷನ್. ಅಂಥ ಶೇಷನ್ ನಿಧನರಾಗಿದ್ದಾರೆ.

ಕರ್ನಾಟಕ ಉಪಚುನಾವಣೆ ಸಂಪೂರ್ಣ ಡಿಟೇಲ್ಸ್

1955ರ ತಮಿಳುನಾಡು ಕೇಡರ್ ನ ಭಾರತೀಯ ನಾಗರಿಕ ಸೇವೆ[ಐಎಎಸ್] ತರಬೇತಿ ಪಡೆದು ಹೊರಬಂದ ಶೇಷನ್ ಕ್ಯಾಬಿನೆಟ್ ಸಕ್ರೆಟರಿಯಾಗಿ ಕೆಲಸ ಮಾಡಿದರು. ಶೇಷನ್ ಅವರ ಸೇವೆ ಗುರುತಿಸಿ 1996ರಲ್ಲಿ ರಾಮೋನ್ ಮ್ಯಾಗಸ್ಸೆ ಪ್ರಶಸ್ತಿ ಸಹ ಶೇಷನ್ ಅವರಿಗೆ ಸಂದಿತು.

1932 ರ ಡಿಸೆಂಬರ್ ನಲ್ಲಿ ಕೇರಳದ ಪಾಲ್ಲಕ್ಕಾಡ್ ನ ತಿರುನೆಲ್ಲಿಯಲ್ಲಿ ಜನಿಸಿದ್ದ  ಶೇಷನ್, ಭೌತಶಾಸ್ತ್ರ ದ ವಿಷಯದಲ್ಲಿ ಪದವಿ ಪಡೆದು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಡೆಮಾನ್ಸ್ಟ್ರೇಟರ್ ಆಗಿ ಕಾರ್ಯನಿರ್ವಹಿಸಿದ್ದರು. ನಂತರ ಐಎಎಸ್ ನಲ್ಲಿ ತೇರ್ಗಡೆ ಹೊಂದಿ ಭಾರತೀಯ ಆಡಳಿತ ಸೇವೆಗೆ ಸೇರಿದ್ದರು. 

ಹಾರ್ವರ್ಡ್ ವಿವಿಯಲ್ಲೂ ವ್ಯಾಸಂಗ ಮಾಡಿದ್ದ ಶೇಷನ್, ಎಡ್ವರ್ಡ್ ಎಸ್ ಮೇಸನ್ ಫೆಲೋಶಿಪ್ ಮೂಲಕ ಪೌರಾಡಳಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿಕೊಂಡಿದ್ದರು.

Follow Us:
Download App:
  • android
  • ios