Asianet Suvarna News Asianet Suvarna News

Fact Check: ಭಾರತ ಬಿಟ್ಟು ಲಂಡನ್‌ಗೆ ತೆರಳುತ್ತೇನೆ ಅಂದ್ರಾ ರಾಹುಲ್‌ ಗಾಂಧಿ?

ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ, ತಾನು ಭಾರತ ತೊರೆದು ಲಂಡನ್‌ನಲ್ಲಿ ವಾಸಿಸುತ್ತೇನೆ ಎಂದಿದ್ದಾರೆ ಎನ್ನುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

Fact check of Rahul Gandhi says he wants to leave india and settle in London
Author
Bengaluru, First Published Oct 16, 2019, 11:23 AM IST

ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ, ತಾನು ಭಾರತ ತೊರೆದು ಲಂಡನ್‌ನಲ್ಲಿ ವಾಸಿಸುತ್ತೇನೆ ಎಂದಿದ್ದಾರೆ ಎನ್ನುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗುತ್ತಿದೆ. 11 ಸೆಕೆಂಡ್‌ ಇರುವ ವಿಡಿಯೋ ಕ್ಲಿಪ್‌ನಲ್ಲಿ ರಾಹುಲ್‌ ಗಾಂಧಿ, ‘ನಾನು ಭಾರತ ಬಿಟ್ಟು ಲಂಡನ್‌ಗೆ ಹೋದರೆ ಏನೂ ಆಗುವುದಿಲ್ಲ. ನನ್ನ ಮಕ್ಕಳ ಅಮೆರಿಕಕ್ಕೆ ತೆರಳಿ ಅಲ್ಲೇ ವಿದ್ಯಾಭ್ಯಾಸ ಮಾಡುತ್ತಾರೆ. ನಾನು ಭಾರತದಲ್ಲಿ ಇದ್ದು ಮಾಡುವುದೇನಿದೆ. ನನ್ನ ಬಳಿ ಸಾವಿರಾರು ಕೋಟಿ ಹಣ ಇದೆ. ನಾನು ಯಾವುದೇ ಕ್ಷಣದಲ್ಲಿ ಭಾರತ ಬಿಟ್ಟು ಹೋಗಬಹುದು’ ಎಂದು ಹೇಳಿದ್ದಾರೆ.

Fact Check: ಈ ಮಹಿಳೆ ಜೊತೆ ಗಾಂಧೀಜಿ ಏನು ಮಾಡುತ್ತಿದ್ದಾರೆ?

ಬಿಜೆಪಿ ಸೋಷಿಯಲ್‌ ಮೀಡಿಯಾ ನ್ಯಾಷನಲ್‌ ಇನ್‌ಚಾರ್ಜ್  ಪ್ರೀತಿ ಗಾಂಧಿ ಈ ವಿಡಿಯೋವನ್ನು ಟ್ವೀಟ್‌ ಮಾಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್‌ ಆಗುತ್ತಿದೆ. ಇದೇ ವಿಡಿಯೋವನ್ನು ಫೇಸ್‌ಬುಕ್‌ನಲ್ಲೂ ಪೋಸ್ಟ್‌ ಮಾಡಿ, ‘ ಇದು ಗಾಂಧಿ ಕುಟುಂಬದ ನಿಜವಾದ ಮುಖ. ಅವರು ಈ ದೇಶದ ಆಸ್ತಿಯನ್ನು ತಮ್ಮ ಪಿತ್ರಾರ್ಜಿತ ಆಸ್ತಿ ಎಂದುಕೊಂಡಿದ್ದಾರೆ’ ಎಂದು ಒಕ್ಕಣೆ ಬರೆಯಲಾಗಿದೆ.

 

Fact Check: ಎರಡು ಸೂರ್ಯ ಉದಯ: ಭಾಸ್ಕರನೆಂದ ಸರಿಯಾಗಿ ನೋಡು ಮಾರಾಯ

ಆದರೆ ನಿಜಕ್ಕೂ ರಾಹುಲ್‌ ಗಾಂಧಿ ಸಾರ್ವಜನಿಕ ಸಭೆಯಲ್ಲಿ ಹೀಗೆ ಹೇಳಿದ್ದರೇ ಎಂದು ಬೂಮ್‌ಲೈವ್‌ ಸುದ್ದಿಸಂಸ್ಥೆ ಪರಿಶೀಲಿಸಿದಾಗ ಇದರ ಮೂಲ ವಿಡಿಯೋ ಲಭ್ಯವಾಗಿದೆ. ಇತ್ತೀಚೆಗೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಪ್ರಯುಕ್ತ ಪ್ರಚಾರ ಸಬೆಯಲ್ಲಿ ಪಾಲ್ಗೊಂಡಿದ್ದ ರಾಹುಲ್‌ ಗಾಂಧಿ, ‘ಭಾರತಕ್ಕೆ ಸಾವಿರಾರು ಕೋಟಿ ರು ವಂಚನೆ ಮಾಡಿ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ನೀರವ್‌ ಮೋದಿ ಮತ್ತು ಚೋಕ್ಸಿ ಇಂದು ಯಾವುದೇ ಭಯವಿಲ್ಲದೆ ಸುಖವಾಗಿ ನಿದ್ರಿಸುತ್ತಿದ್ದಾರೆ’ ಎಂದು ದೂರಿದ್ದರು. ಅದೇ ವಿಡಿಯೋವನ್ನು ತಿರುಚಿ ಈ ರೀತಿ ಸುಳ್ಳುಸುದ್ದಿ ಹರಡಲಾಗುತ್ತಿದೆ.

- ವೈರಲ್ ಚೆಕ್ 

 

Follow Us:
Download App:
  • android
  • ios