Asianet Suvarna News Asianet Suvarna News

Fact Check: ಅದಾನಿ ಪತ್ನಿಗೆ ತಲೆಬಾಗಿ ನಮಸ್ಕರಿಸಿದ್ರಾ ಪ್ರಧಾನಿ ಮೋದಿ?

ಪ್ರಧಾನಿ ನರೇಂದ್ರ ಮೋದಿ ಮಹಿಳೆಯೊಬ್ಬರ ಎದುರಿಗೆ ನಿಂತು ಅವರಿಗೆ ತಲೆಬಾಗಿ ನಮಸ್ಕರಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆವೈರಲ್‌ ಆಗುತ್ತಿದೆ. ಈ ಫೋಟೋವನ್ನು ಪೋಸ್ಟ್‌ ಮಾಡಿ, ‘ಪ್ರಧಾನಿ ಮೋದಿ ಕೋಟ್ಯಧಿಪತಿ ಗೌತಮ್‌ ಅಧಾನಿ ಪತ್ನಿ, ಅದಾನಿ ಗ್ರೂಪ್‌ನ ಚೈರ್‌ ಪರ್ಸನ್‌ ಆಗಿರುವ ಪ್ರೀತಿ ಅದಾನಿಗೆ ತಲೆಬಾಗಿ ನಮಸ್ಕರಿಸುತ್ತಿದ್ದಾರೆ’ ಎಂದು ಒಕ್ಕಣೆ ಬರೆಯಲಾಗಿದೆ.  ನಿಜಾನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

Fact check of PM Modi bowing down to Gautam Adani wife
Author
Bengaluru, First Published Oct 21, 2019, 9:24 AM IST

ಪ್ರಧಾನಿ ನರೇಂದ್ರ ಮೋದಿ ಮಹಿಳೆಯೊಬ್ಬರ ಎದುರಿಗೆ ನಿಂತು ಅವರಿಗೆ ತಲೆಬಾಗಿ ನಮಸ್ಕರಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆವೈರಲ್‌ ಆಗುತ್ತಿದೆ. ಈ ಫೋಟೋವನ್ನು ಪೋಸ್ಟ್‌ ಮಾಡಿ, ‘ಪ್ರಧಾನಿ ಮೋದಿ ಕೋಟ್ಯಧಿಪತಿ ಗೌತಮ್‌ ಅಧಾನಿ ಪತ್ನಿ, ಅದಾನಿ ಗ್ರೂಪ್‌ನ ಚೈರ್‌ ಪರ್ಸನ್‌ ಆಗಿರುವ ಪ್ರೀತಿ ಅದಾನಿಗೆ ತಲೆಬಾಗಿ ನಮಸ್ಕರಿಸುತ್ತಿದ್ದಾರೆ’ ಎಂದು ಒಕ್ಕಣೆ ಬರೆಯಲಾಗಿದೆ. ವಿಜಯ್‌ ಅರೋರಾ ಎಂಬುವವರು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದ ಈ ವಿಡಿಯೋ 800 ಬಾರಿ ಶೇರ್‌ ಆಗಿದೆ. ಟ್ವೀಟರ್‌ನಲ್ಲೂ ಈ ಫೋಟೋ ಶೇರ್‌ ಆಗಿದೆ.

ಜಿಯೋನಿಂದ ದೀಪಾವಳಿಗೆ 498 ರೂ. ಉಚಿತ ರೀಚಾರ್ಜ್!? ಆಫರ್ ಹೌದೋ? ಅಲ್ವೋ? #FactCheck

ಆದರೆ ನಿಜಕ್ಕೂ ಫೋಟೋದಲ್ಲಿರುವ ಮಹಿಳೆ ಅದಾನಿ ಪತ್ನಿ ಪ್ರೀತಿ ಅದಾನಿಯೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂದು ತಿಳಿದುಬಂದಿದೆ. ಆಲ್ಟ್‌ನ್ಯೂಸ್‌ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಪೋಟೋದಲ್ಲಿರುವ ವ್ಯಕ್ತಿ ಕರ್ನಾಟಕದ ತುಮಕೂರು ಜಿಲ್ಲೆಯ ಮೇಯರ್‌ ಎಂದು ಪತ್ತೆಯಾಗಿದೆ. 2014ರಲ್ಲಿ ಮೋದಿ ಫುಡ್‌ ಪಾರ್ಕ್ ಉದ್ಘಾಟನೆಗೆಂದು ತುಮಕೂರಿಗೆ ಬಂದಿದ್ದ ಸಂದರ್ಭದಲ್ಲಿ ತಮ್ಮನ್ನು ಸ್ವಾಗತಿಸಿದ ತುಮಕೂರು ಮಹಾನಗರ ಪಾಲಿಕೆ ಮೇಯರ್‌ ಗೀತಾ ರುದ್ರೇಶ್‌ ಅವರಿಗೆ ಮೋದಿ ಪ್ರತಿ ನಮಸ್ಕರಿಸಿದ್ದರು. ಇದು ಹಲವು ಸುದ್ದಿಪತ್ರಿಕೆಗಳಲ್ಲಿ ವರದಿಯಾಗಿತ್ತು.

Fact Check| ಬಂಗಾಳಿಗಳನ್ನು ಭಾರತದಿಂದಲೇ ಹೊರಹಾಕಲಾಗುತ್ತದೆ: ಅಮಿತ್‌ ಶಾ

ಸದ್ಯ ಅದೇ ಫೋಟೋವನ್ನು ಬಳಸಿ ಅದಾನಿ ಪತ್ನಿ ಎಂದು ಸುಳ್ಳುಸುದ್ದಿ ಹರಡಲಾಗುತ್ತಿದೆ. 2014ರಿಂದಲೂ ಈ ಫೋಟೋ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿದೆ.

Follow Us:
Download App:
  • android
  • ios