Asianet Suvarna News Asianet Suvarna News

Fact Check: ಶುಲ್ಕ ಪಡೆಯದೆ ಬಸ್‌ ಚಲಾಯಿಸುವ ಮೂಲಕ ಚಾಲಕರಿಂದ ಪ್ರತಿಭಟನೆ!

ಜಪಾನಿನ ಬಸ್‌ ಚಾಲಕರ ವಿನೂತನ ಪ್ರತಿಭಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಸದ್ಯ ಜಪಾನಿನ ಬಸ್‌ ಚಾಲಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಗಂತ ಬಸ್‌ ಚಾಲನೆ ಮಾಡದೆ ಪ್ರಯಾಣಿಕರಿಗೆ ತೊಂದರೆ ನೀಡುತ್ತಿಲ್ಲ. ಬದಲಾಗಿ ಪ್ರಯಾಣಿಕರಿಂದ ಹಣ ಪಡೆಯದೆ ಉಚಿತವಾಗಿ ಬಸ್‌ ಚಾಲನೆ ಮಾಡಿ ವಿನೂತನವಾಗಿ ಪ್ರತಿಭಟಿಸುತ್ತಿದ್ದಾರೆ ಎಂದು ಹೇಳಲಾಗಿದೆ. ನಿಜನಾ ಈ ಸುದ್ದಿ? 

Fact check of Japanese bus drivers strike by giving free rides
Author
Bengaluru, First Published Nov 4, 2019, 12:57 PM IST

ಜಪಾನಿನ ಬಸ್‌ ಚಾಲಕರ ವಿನೂತನ ಪ್ರತಿಭಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಸದ್ಯ ಜಪಾನಿನ ಬಸ್‌ ಚಾಲಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಗಂತ ಬಸ್‌ ಚಾಲನೆ ಮಾಡದೆ ಪ್ರಯಾಣಿಕರಿಗೆ ತೊಂದರೆ ನೀಡುತ್ತಿಲ್ಲ. ಬದಲಾಗಿ ಪ್ರಯಾಣಿಕರಿಂದ ಹಣ ಪಡೆಯದೆ ಉಚಿತವಾಗಿ ಬಸ್‌ ಚಾಲನೆ ಮಾಡಿ ವಿನೂತನವಾಗಿ ಪ್ರತಿಭಟಿಸುತ್ತಿದ್ದಾರೆ ಎಂದು ಹೇಳಲಾಗಿದೆ.

Fact check : PF ಸಂಸ್ಥೆಯಿಂದ ಕಾರ್ಮಿಕರಿಗೆ 80, 000 ಬಂಪರ್ ಕೊಡುಗೆ!

‘ವಂಡರ್‌ಫುಲ್‌ ಇಂಜಿನಿಯರಿಂಗ್‌’ ಫೇಸ್‌ಬುಕ್‌ ಪೇಜ್‌ ಇದನ್ನು ಮೊದಲಿಗೆ ಪೋಸ್ಟ್‌ ಮಾಡಿ ‘ಪ್ರತಿಭಟನೆ ಎಂದರೆ ಹೀಗಿರಬೇಕು’ ಎಂದಿದ್ದು, ಅದೀಗ 800 ಬಾರಿ ಶೇರ್‌ ಆಗಿದೆ. ಆದರೆ ಜಪಾನಿನ ಯಾವ ಸ್ಥಳದಲ್ಲಿ ಬಸ್‌ ಚಾಲಕರು ಮುಷ್ಕರ ನಡೆಸುತ್ತಿದ್ದಾರೆ ಎಂದು ವೈರಲ್‌ ಆಗಿರುವ ಸಂದೇಶದಲ್ಲಿ ಸ್ಪಷ್ಟನೆ ಇಲ್ಲ.

ಆದರೆ ನಿಜಕ್ಕೂ ಜಪಾನಿನ ಚಾಲಕರು ಪ್ರಯಾಣಿಕರಿಂದ ಹಣ ಪಡೆಯದೆ ಬಸ್‌ ಓಡಿಸಿ ಪ್ರತಿಭಟಿಸುತ್ತಿದ್ದಾರೆಯೇ ಎಂದು ಇಂಡಿಯಾ ಟು ಡೇ ಆ್ಯಂಟಿ ಫೇಕ್‌ ನ್ಯೂಸ್‌ ವಾರ್‌ ರೂಮ್‌ ಪರಿಶೀಲಿಸಿದಾಗ ಇದು ಹಳೆಯ ಸುದ್ದಿ ಎಂದು ತಿಳಿದುಬಂದಿದೆ.

ರಿವರ್ಸ್‌ ಇಮೇಜ್‌ನಲ್ಲಿ ಹುಡುಕಹೊರಟಾಗ 2018 ರ ಮೇನಲ್ಲಿ ಜಪಾನಿನ ಕೆಲ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿದ್ದು ಪತ್ತೆಯಾಗಿದೆ. ಆ ವರದಿಗಳಲ್ಲಿ ಜಪಾನಿನ ಒಕಾಯಾಮಾ ನಗರದಲ್ಲಿ ಸಂಸ್ಥೆಯೊಂದಕ್ಕೆ ಸೇರಿದ ಬಸ್‌ ಚಾಲಕರು ಉದ್ಯೋಗ ಭದ್ರತೆಗೆ ಆಗ್ರಹಿಸಿ ಪ್ರಯಾಣಿಕರಿಂದ ಶುಲ್ಕ ಪಡೆಯದೆ ಪ್ರತಿಭಟನೆ ಕೈಗೊಂಡಿದ್ದಾರೆ ಎಂದಿದೆ. ಆದರೆ ಈಗಲೂ ಇದೇ ರೀತಿ ಪ್ರತಿಭಟನೆ ನಡೆಯುತ್ತಿದೆ ಎಂಬ ಬಗ್ಗೆ ಯಾವುದೇ ವರದಿಯಾಗಿಲ್ಲ.

- ವೈರಲ್ ಚೆಕ್ 

Follow Us:
Download App:
  • android
  • ios