ಬ್ಯಾಡ್ ನ್ಯೂಸ್: ಕೊರೋನಾ ಸ್ವೀಕರಿಸುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ!

ಭಾರತಕ್ಕೆ ಕೊರೋನಾ ಭೀತಿ ತಪ್ಪಿದ್ದಲ್ಲ| ಕೊರೋನಾ ಸ್ವೀಕರಿಸುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ| ಬರ್ಲಿನ್‌ನ ಹಂಬೋಲ್ಟ್ ವಿವಿ ಸಂಶೋಧಕರಿಂದ ಎಚ್ಚರಿಕೆ| ಕೊರೋನಾ ಸ್ವೀಕರಿಸಿರುವ ರಾಷ್ಟ್ರಗಳ ಪಟ್ಟಿಯಲ್ಲಿ  ಭಾರತಕ್ಕೆ 17ನೇ ಸ್ಥಾನ| ಕೊರೋನಾ ವೈರಸ್ ಹರಡುವ ಸಾಧ್ಯತೆ ಇರುವ 30 ದೇಶಗಳ ಪಟ್ಟಿ| ಚೀನಾದ ವುಹಾನ್‌ನಿಂದ ಬಂದಿಳಿದ ಕೇರಳದ 15 ವಿದ್ಯಾರ್ಥಿಗಳ ಮತ್ತೊಂದು ತಂಡ|

Study Says India Stands At 17th Rank Among Countries Likely To Receive Coronavirus

ನವದೆಹಲಿ(ಫೆ.09): ಇಡೀ ವಿಶ್ವವನ್ನೇ ಬೆಚ್ಚ ಬೀಳಿಸಿರುವ ಮಾರಕ ಕೊರೋನಾ ವೈರಸ್, ಭಾರತಕ್ಕೆ ಕಾಲಿಡುವ ಭೀತಿ ಕ್ಷಣಕ್ಷಣಕ್ಕು ಹೆಚ್ಚುತ್ತಿದೆ.

ಇದಕ್ಕೆ ಪುಷ್ಠಿ ಎಂಬಂತೆ ಭಾರತ ಕೊರೋನಾ ವೈರಸ್ ಸ್ವೀಕರಿಸಲಿರುವ ರಾಷ್ಟ್ರಗಳ ಪಟ್ಟಿಯಲ್ಲಿ 17ನೇ ಸ್ಥಾನದಲ್ಲಿದೆ  ಎಂದು ಬರ್ಲಿನ್‌ನ ಹಂಬೋಲ್ಟ್ ವಿವಿಯ ರಾಬರ್ಟ್ ಕೋಚ್ ಸಂಸ್ಥೆಯ ಸಂಶೋಧಕರು ತಿಳಿಸಿದ್ದಾರೆ.

ಕೊರೋನಾ ಶಂಕಿತ ರೋಗಿಗಳ ಮೇಲೆ ಚೀನಾ ಅಧಿಕಾರಿಗಳ ದಾಳಿ!

ಕೊರೋನಾ ವೈರಸ್ ದಾಳಿ ಮಾಡುವ ಸಾಧ್ಯತೆ ಇರುವ ವಿಶ್ವದ 30 ದುರ್ಬಲ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 17ನೇ ಸ್ಥಾನದಲ್ಲಿದೆ ಎಂದು  ಹಂಬೋಲ್ಟ್ ವಿವಿ ಸಂಶೋಧಕರು ಮಾಹಿತಿ ನೀಡಿದ್ದಾರೆ.

ಗಾಳಿಯ ಮೂಲಕ ಕೊರೋನಾ ವೈರಸ್ ಹರಡುವ ಸಾಧ್ಯತೆ ಇರುವ 30 ದೇಶಗಳ ಪಟ್ಟಿ ಸಿದ್ಧಪಡಿಸಿರುವ ಸಂಶೋಧಕರು, ಭಾರತಕ್ಕೂ ಕೊರೋನಾ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚರಿಸಿದ್ದಾರೆ.

 ಇನ್ನುಳಿದಂತೆ ಥೈಲ್ಯಾಂಡ್, ಜಪಾನ್ ಮತ್ತು ದಕ್ಷಿಣ ಕೊರಿಯಾ ರಾಷ್ಟ್ರಗಳಲ್ಲಿ ಕೊರೋನಾ ವೈರಸ್ ಅತ್ಯಂತ ಕ್ಷಿಪ್ರಗತಿಯಲ್ಲಿ ಹರಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. 

ಭಾರತದ ವಿಮಾನ ನಿಲ್ದಾಣಗಳು ಕೊರೋನಾ ವೈರಸ್ ಸ್ವೀಕರಿಸುವ ಹೆಚ್ಚಿದ್ದು, ದೆಹಲಿ, ಮುಂಬೈ ಹಾಗೂ ಕೋಲ್ಕತ್ತಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ಅಗತ್ಯ ಎಂದು ಸಂಶೋಧನೆ ತಿಳಿಸಿದೆ.

ಚೀನಾ ಮಾತ್ರವಲ್ಲ, 25 ದೇಶಗಳಲ್ಲಿ ಮಾರಕ ಕೊರೋನಾ ವೈರಸ್ ಪತ್ತೆ!

ಆದರೆ ಈ ವರದಿ ಪರಿಮಾಣಾತ್ಮಕ ಮುನ್ಸೂಚನೆಗಳನ್ನು ನೀಡುವ ಸಾಧನವಲ್ಲ ಎಂದು ಸ್ಪಷ್ಟಪಡಿಸಿರುವ ಸಂಶೋಧಕರು, ಕೊರೋನಾ ಹರಡುವಿಕೆಯ ವೇಗವನ್ನು ಆಧರಿಸಿ ಈ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಹೇಳಿದ್ದಾರೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಇದುವರೆಗೂ 1,486 ರಕ್ತದ ಮಾದರಿಗಳನ್ನು ಪರೀಕ್ಷಿಸಿದ್ದು, ಇವುಗಳಲ್ಲಿ ಕೇವಲ ಮೂವರು ವ್ಯಕ್ತಿಗಳಲ್ಲಿ ವೈರಸ್ ಸೋಂಕು ಕಂಡು ಬಂದಿದೆ.

ಈ ಮಧ್ಯೆ ಚೀನಾದ ವುಹಾನ್‌ನಿಂದ ಕೇರಳದ 15 ವಿದ್ಯಾರ್ಥಿಗಳ ಮತ್ತೊದು ತಂಡವನ್ನು ಏರ್ ಏಷ್ಯಾ ವಿಮಾನ ಕೊಚ್ಚಿಗೆ ಕರೆತಂದಿದ್ದು, ವಿದ್ಯಾರ್ಥಿಗಳನ್ನು ವಿಮಾನ ನಿಲ್ದಾಣದಲ್ಲೇ ತಪಾಸಣೆ ಮಾಡಿ ಕಲಾಮಸ್ಸೆರಿ ವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. 

ಅಲ್ಲದೇ ಚೀನಾಗೆ ನಿಯಮಿತವಾಗಿ ಪ್ರವಾಸ ಕೈಗೊಳ್ಳುವ 8,000 ಭಾರತೀಯರ ವೈಧ್ಯಕೀಯ ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Latest Videos
Follow Us:
Download App:
  • android
  • ios