Asianet Suvarna News Asianet Suvarna News

ಮೂಲಂಗಿಯೊಂದಿಗೆ ಇದನ್ನು ಸೇವಿಸಿದರೆ ಆರೋಗ್ಯಕ್ಕೆ ಕುತ್ತು...

 ಮೂಲವ್ಯಾಧಿ ಸೇರಿ ಹಲವು ಅನಾರೋಗ್ಯಕ್ಕೆ ಮೂಲಂಗಿ ರಾಮಬಾಣ. ದೈನಂದಿನ ಅಡುಗೆಯಲ್ಲಿ ಬಳಸುವ ಈ ತರಕಾರಿಯೊಂದಿಗೆ ಕೆಲವೊಂದು ಪದಾರ್ಥಗಳನ್ನು ತಿನ್ನಬಾರದು. ಯಾವವು ಅವು?

Health benefits of Radish
Author
Bengaluru, First Published Mar 8, 2019, 4:08 PM IST

ಸಾಂಬಾರ್, ಪಲ್ಯ ಮಾಡಲು, ಸಲಾಡ್‌ನಲ್ಲಿ ಮೂಲಂಗಿಯನ್ನು ಬಳಸುತ್ತಾರೆ. ಅಷ್ಟೇ ಅಲ್ಲ ಉತ್ತರ ಭಾರತದಲ್ಲಿ ಇದರಿಂದ ಪರೋಟಾ ಮಾಡಿಯೂ ಸೇವಿಸುತ್ತಾರೆ. ಇದು ಆರೋಗ್ಯಕ್ಕೂ ಒಳಿತು. ಆದರೆ  ಮೂಲಂಗಿಯನ್ನು ಕೆಲವೊಂದು ತರಕಾರಿ ಜೊತೆ ಸೇವಿಸಬಾರದು. ಇದು ಆರೋಗ್ಯಕ್ಕೆ ಕುತ್ತು.

Health benefits of Radish

ಹಾಗಲಕಾಯಿ: ಒಂದು ವೇಳೆ ಮೂಲಂಗಿ ಜೊತೆ ಹಾಗಲಕಾಯಿ ಸೇವಿಸುತ್ತಿದ್ದರೆ ನಿಲ್ಲಿಸಿಬಿಡಿ. ಈ ತರಕಾರಿಗಳಿರೋ ಕೆಲವು ಅಂಶಗಳು ಜತೆಯಾದರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ಇದರಿಂದ ಕೇವಲ ಶ್ವಾಸ ಸಂಬಂಧಿ ಸಮಸ್ಯೆ ಮಾತ್ರವಲ್ಲ, ಬದಲಾಗಿ ಹೃದಯ ಸಂಬಂಧಿ ಸಮಸ್ಯೆಯೂ ಕಾಡಬಹುದು. 

ಕಿತ್ತಳೆ:  ಹೌದು ಮೂಲಂಗಿ ಜೊತೆ ಕಿತ್ತಳೆ ಹಣ್ಣು ಸೇವಿಸಬಾರದು. ಇವೆರಡನ್ನೂ ಜೊತೆಯಾಗಿ ಸೇವಿಸಿದರೆ ವಿಷವಾಗಿ ಪರಿಣಮಿಸುತ್ತದೆ. ಇದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯೂ ಕಾಡಬಹುದು. 

ಮೂಲಂಗಿಯೊಂದಿಗೆ ಆಗಲಿ ಅಥವಾ ಮೂಲಂಗಿ ಪದಾರ್ಥಗಳನ್ನು ತಿಂದ ನಂತರವೂ ಹಾಗಲಕಾಯಿ ಅಥವಾ ಕಿತ್ತಳೆ ಯಾವುದೇ ರೂಪದಲ್ಲಿಯೇ ದೇಹ ಸೇರದಂತೆ ಎಚ್ಚರ ವಹಿಸಿ.

Follow Us:
Download App:
  • android
  • ios